ತುಮಕೂರು: ತನ್ನ ಹೆಂಡ್ತಿ, ಅತ್ತೆ ಮಾವನ ಹಿಂಸೆ ತಾಳಲಾರದೆ ವ್ಯಕ್ತಿಯೊಬ್ಬ ಕೀಟನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ರಂಗನಹಳ್ಳಿ ಬೋವಿ ಕಾಲೋನಿಯಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿರುವ ವ್ಯಕ್ತಿ ತನ್ನ ಸಾವಿಗೆ ಹೆಂಡ್ತಿ ಹೇಮಾ, ಅತ್ತೆ ಧನಲಕ್ಷ್ಮಿ ಹಾಗೂ ಮಾವ ರಾಜು ಕಾರಣ ಅಂತಾ ತಿಳಿಸಿದ್ದಾನೆ. ಪುಢಾರಿ ರಾಜಕೀಯದವರನ್ನ ಕರೆದುಕೊಂಡು ಬಂದು ಚಿತ್ರಹಿಂಸೆ ನೀಡ್ತಾರೆ. ನೀನು ಗಂಡಸು ಅಲ್ಲ ಅಂತಾ ಮನಬಂದಂತೆ ಕಿರುಕುಳ ನೀಡುತ್ತಿದ್ದರು ಎಂದು ತನ್ನ ಅಳಲು ತೊಡಿಕೊಂಡಿದ್ದಾನೆ. ಇದಕ್ಕೆ ಬೇಸತ್ತು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಆತ ತಿಳಿಸಿದ್ದಾನೆ.
ಲೋಕೇಶ್ (30) ಮೃತ ದುರ್ದೈವಿ ಆಗಿದ್ದು, ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು ಎನ್ನಲಾಗಿದೆ. ಹೆಂಡ್ತಿ ಮನೆಯ ಕಡೆಯವರು ಪ್ರತಿದಿನ ಕೊಲೆ ಬೆದರಿಕೆ ಹಾಕುತ್ತಿದ್ದರಂತೆ, ಇದಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿದೆ. ಒಟ್ಟಾರೆ ಹೆಂಡ್ತಿ, ಅತ್ತೆ ಮಾವನ ಕಾಟಕ್ಕೆ ಒಂದು ಜೀವ ಹೋದಂತಾಗಿದೆ.