ಬೆಂಗಳೂರು: ಚರಂಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ನಡೆದಿದೆ.
ಅಪರಿಚಿತ ಪುರುಷನ ಶವ ಆರ್.ಆರ್. ನಗರ ವ್ಯಾಪ್ತಿಯ ಕೆ.ಪಿ.ಎನ್. ಟ್ರಾವೆಲ್ಸ್ ಬಳಿ ಇರುವ ಚರಂಡಿಯಲ್ಲಿ ಕಂಡು ಬಂದಿದ್ದು, ಪುರುಷನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸದ್ಯ ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಮಗು ಸಾವು