28 ವರ್ಷಗಳ ನಂತರ.. ಸನ್ಯಾಸಿನಿ ಸಿಸ್ಟರ್ ಅಭಯಾ ಸಾವಿಗೆ ದೊರಕಿತು ನ್ಯಾಯ
ಕೇರಳದ ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ತಪ್ಪಿತಸ್ಥರೆಂದು ತಿರುವನಂತಪುರಂನ ವಿಶೇಷ CBI ನ್ಯಾಯಾಲಯ ಇಂದು ತೀರ್ಪು ನೀಡಿದೆ.
ತಿರುವನಂತಪುರಂ: ಕೇರಳದ ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ತಪ್ಪಿತಸ್ಥರೆಂದು ತಿರುವನಂತಪುರಂನ ವಿಶೇಷ CBI ನ್ಯಾಯಾಲಯ ಇಂದು ತೀರ್ಪು ನೀಡಿದೆ.
28 ವರ್ಷಗಳ ನಂತರ ಹೊರಬಿದ್ದ ತೀರ್ಪು 1992ರಲ್ಲಿ ಕೇರಳದ ಕೊಟ್ಟಾಯಂನಲ್ಲಿರುವ ಕಾನ್ವೆಂಟ್‌ನಲ್ಲಿದ್ದ 19 ವರ್ಷದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಅಭಯಾಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ಕಾನ್ವೆಂಟ್ನ ಬಾವಿಗೆ ಎಸೆದಿದ್ದರು. ಇದೀಗ, ಸತತ 28 ವರ್ಷಗಳ ನಂತರ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಸಿಸ್ಟರ್ ಅಭಯಾ ಮೃತದೇಹವು ಮಾರ್ಚ್ 27, 1992 ರಂದು ಕೊಟ್ಟಾಯಂನ ಸೇಂಟ್ ಪೈಯಸ್ ಕಾನ್ವೆಂಟ್ನ ಬಾವಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ, ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ಮತ್ತು ರಾಜ್ಯದ ಅಪರಾಧ ವಿಭಾಗವು ತನಿಖೆ ನಡೆಸಿತ್ತು. ತನಿಖೆಯಲ್ಲಿ ಸಿಸ್ಟರ್ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಲಾಗಿತ್ತು. ಆದರೆ, ಪುಥೆನ್‌ಪುರಕಲ್ ಎಂಬುವವರು ಕಾನೂನು ಹೋರಾಟ ನಡೆಸಿದ ನಂತರ ಈ ಪ್ರಕರಣವನ್ನು ಮಾರ್ಚ್ 29, 1993 ರಂದು CBIಗೆ ವಹಿಸಲಾಗಿತ್ತು.
ತೀವ್ರ ತನಿಖೆಯ ನಂತರ CBI 2008 ರಲ್ಲಿ ಕೊಲೆ ಆರೋಪದಡಿ ಕೊತ್ತೂರು, ಪೂತ್ರಿಕ್ಕಾಯಿಲ್ ಮತ್ತು ಸೆಫಿಯನ್ನು ಬಂಧಿಸಿತ್ತು. ಆದರೆ ಎರಡು ವರ್ಷಗಳ ಹಿಂದೆ, ಪೂತ್ರಿಕ್ಕಾಯಿಲ್ ಅವರನ್ನು ವಿಶೇಷ CBI ನ್ಯಾಯಾಲಯ ನಿರಪರಾಧಿ ಎಂದು ತೀರ್ಪು ನೀಡಿತ್ತು.
ಹತ್ರಾಸ್ ಗ್ಯಾಂಗ್ರೇಪ್: ನಾಲ್ವರು ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ಶೀಟ್
Published On - 4:40 pm, Tue, 22 December 20