ಕಾಶ್ಮೀರದಲ್ಲಿ ಖಾತೆ ತೆರೆದ ಕಮಲ: 113 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಗುಪ್ಕಾರ್ ಮೈತ್ರಿಕೂಟ

ಜಿಲ್ಲಾ ಅಭಿವೃದ್ಧಿ ಮಂಡಳಿಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ 2 ಕ್ಷೇತ್ರಗಳಲ್ಲಿ ಖಾತೆ ತೆರೆದಿದ್ದು, ಗುಪ್ಕಾರ್ ಮೈತ್ರಿಕೂಟ 113 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷೇತರರು ತಾವೇನು ಕಡಿಮೆಯಿಲ್ಲ ಎಂಬಂತೆ 28 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ.

ಕಾಶ್ಮೀರದಲ್ಲಿ ಖಾತೆ ತೆರೆದ ಕಮಲ: 113 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಗುಪ್ಕಾರ್ ಮೈತ್ರಿಕೂಟ
ಪಿಡಿಪಿ ಅಭ್ಯರ್ಥಿ ರೆಹಾನ್ ಪರ್ವೇಜ್ ವಿಜಯದ ನಗು ಬೀರಿದ್ದು ಹೀಗೆ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Dec 22, 2020 | 5:12 PM

ಶ್ರೀನಗರ: ಜಿಲ್ಲಾ ಅಭಿವೃದ್ಧಿ ಮಂಡಳಿಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ 2 ಕ್ಷೇತ್ರಗಳಲ್ಲಿ ಖಾತೆ ತೆರೆದಿದ್ದು, ಗುಪ್ಕಾರ್ ಮೈತ್ರಿಕೂಟ 113 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷೇತರರು ತಾವೇನು ಕಡಿಮೆಯಿಲ್ಲ ಎಂಬಂತೆ 28 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ.

ಬಿಜೆಪಿಯ ಅಜಾಜ್ ಹುಸೇನ್​ ಶ್ರೀನಗರದ ಖೋನ್ಮೋಹ್-2  ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಕಮಲದ ದಳ ಅರಳಿದಂತಾಗಿದೆ. ಬಂಡಿಪೊರಾ ಜಿ್ಲ್ಲೆಯ ತುಲೈ ಕ್ಷೇತ್ರದಲ್ಲಿಈಜಜ್ ಅಹ್ಮದ್ ಖಾನ್ ಜಯಗಳಿಸಿದ್ದಾರೆ.

ಬಿಜೆಪಿ 53 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದರೆ, ನ್ಯಾಷನಲ್ ಕಾನ್ಫರೆನ್ಸ್ 28 ಮತ್ತು ಪಿಡಿಪಿ 28 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸಿದೆ.ಪಿಡಿಪಿಯ ಯುವ ಘಟಕದ ಅಧ್ಯಕ್ಷ ವಹೀದ್ ಪರಾ ಗೆಲುವು ಗಳಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದ ಆರೋಪದ ಮೇಲೆ ವಹೀದ್​ರನ್ನು ಬಂಧಿಸಿತ್ತು.

ದಕ್ಷಿಣ ಕಾಶ್ಮೀರದ ಕ್ಷೇತ್ರಗಳಲ್ಲಿ ಗುಪ್ಕಾರ್ ಮೈತ್ರಿಕೂಟದ ಪಕ್ಷಗಳು ಸಂಪೂರ್ಣ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಆದರೆ ಉತ್ತರ ಕಾಶ್ಮೀರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮಿಶ್ರ ಫಲಿತಾಂಶ ಬರುವ ಸಾಧ್ಯತೆಗಳಿವೆ ಒಟ್ಟು 2181 ಅಭ್ಯರ್ಥಿಗಳ ಭವಿಷ್ಯವನ್ನು ಇಂದಿನ ಮತಎಣಿಕೆ ನಿರ್ಧರಿಸಲಿದೆ.

ಜಮ್ಮು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ ಮತ ಎಣಿಕೆ: ಗುಫ್ಕಾರ್ ಕೂಟ 11, ಬಿಜೆಪಿ 8, ಕಾಂಗ್ರೆಸ್ 2 ಮುನ್ನಡೆ