ಡ್ರ್ಯಾಗನ್​ಫ್ಲೈ ಕ್ಲಬ್ ಮೇಲೆ ಖಾಕಿ ದಾಳಿ: ಕ್ರಿಕೆಟಿಗ​ ಸುರೇಶ್​ ರೈನಾ ಸೇರಿ ಅನೇಕ ಸೆಲೆಬ್ರಿಟಿಗಳು ಅರೆಸ್ಟ್​!

ಅಂಧೇರಿ ಸಮೀಪ ಇರುವ ಜೆಡಬ್ಲ್ಯೂ ಮ್ಯಾರಿಯಟ್ ಬಳಿ ಈ ಕ್ಲಬ್​ ಇದೆ. ಮುಂಜಾನೆ 2:30ರ ಸುಮಾರಿಗೆ ಈ ಬಂಧನ ನಡೆದಿದೆ. ಸುರೇಶ್​ ರೈನಾ ಮಾತ್ರವಲ್ಲದೇ ಇನ್ನೂ ಕೆಲಸ ಸೆಲಬ್ರೆಟಿಗಳು ಈ ಕ್ಲಬ್​ನಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡ್ರ್ಯಾಗನ್​ಫ್ಲೈ ಕ್ಲಬ್ ಮೇಲೆ ಖಾಕಿ ದಾಳಿ: ಕ್ರಿಕೆಟಿಗ​ ಸುರೇಶ್​ ರೈನಾ ಸೇರಿ ಅನೇಕ ಸೆಲೆಬ್ರಿಟಿಗಳು ಅರೆಸ್ಟ್​!
ಸುರೇಶ್​ ರೈನಾ
Rajesh Duggumane

|

Dec 22, 2020 | 3:04 PM

ಮುಂಬೈ: ಕೊರೊನಾವೈರಸ್​ ನಿಯಮ ಪಾಲನೆ ಮಾಡದ ಟೀಂ ಇಂಡಿಯಾ ಕ್ರಿಕೆಟಿಗ​ ಸುರೇಶ್​ ರೈನಾ ಸೇರಿ ಅನೇಕರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.  ಅರೆಸ್ಟ್​ ನಂತರ ಸುರೇಶ್​ ರೈನಾನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮುಂಬೈ ವಿಮಾನ ನಿಲ್ದಾಣ ಸಮೀಪ ಇರುವ ಡ್ರ್ಯಾಗನ್​ಫ್ಲೈ ಕ್ಲಬ್​ನಲ್ಲಿ ಸುರೇಶ್​ ರೈನಾ ಸೇರಿ ಬಹಳಷ್ಟು ಮಂದಿ ತಡರಾತ್ರಿ ಪಾರ್ಟಿ ಮಾಡುತ್ತಿದ್ದರು. ಅಂಧೇರಿ ಸಮೀಪ ಇರುವ JW ಮ್ಯಾರಿಯಟ್ ಹೋಟೆಲ್​ ಬಳಿ ಈ ಕ್ಲಬ್​ ಇದೆ. ಸರ್ಕಾರ ನಿಗದಿಪಡಿಸಿರುವ ಅವಧಿಗೂ ಮೀರಿ ಇವರು ಪಾರ್ಟಿ ಮಾಡುತ್ತಿದ್ದು ಜೊತೆಗೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು ಎನ್ನಲಾಗಿದೆ.  ಹೀಗಾಗಿ, ರೈನಾ ಸೇರಿದಂತೆ ಎಲ್ಲರ ಬಂಧನವಾಗಿದೆ.

ಬಂಧಿತರಲ್ಲಿ ಗಾಯಕ ಗುರು ರಾಂಧವಾ ಮತ್ತು ಬಾಲಿವುಡ್​ ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಇದ್ದಾರೆ. ಹೋಟೆಲ್​ನ 7 ಸಿಬ್ಬಂದಿ ಸೇರಿ ಒಟ್ಟು 34 ಜನರು ಅರೆಸ್ಟ್​ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮುಂಜಾನೆ 2:30ರ ಸುಮಾರಿಗೆ ಎಲ್ಲರ ಬಂಧನವಾಗಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬೆಳಗ್ಗೆ  2:30ರವರೆಗೆ ಕ್ಲಬ್​ ನಡೆಸಲು ಅನುಮತಿ ಇಲ್ಲ. ಆದರೂ, ಕ್ಲಬ್​ ಓಪನ್​ ಇತ್ತು. ಜೊತೆಗೆ, ಸಾಮಾಜಿಕ ಅಂತರ ಕೂಡ ಕಾಪಾಡಿಕೊಳ್ಳಲಾಗಿರಲಿಲ್ಲ, ಮಾಸ್ಕ್​ ಧರಿಸಿರಲಿಲ್ಲ. ಹೀಗಾಗಿ, ಕ್ಲಬ್​ನಲ್ಲಿ ಇದ್ದವರನ್ನು ಬಂಧಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ರೈನಾ ನಿವೃತ್ತಿ ಘೋಷಣೆ ಮಾಡಿದ್ದರು. ಈ ಬಾರಿಯ IPL​ನಲ್ಲಿ ಚೆನ್ನೈ ತಂಡವನ್ನು ಅವರು ಪ್ರತಿನಿಧಿಸಬೇಕಿತ್ತು. ಆದರೆ, ವೈಯಕ್ತಿಕ ಕಾರಣ ನೀಡಿ ಭಾರತಕ್ಕೆ ಹಿಂದುರಿಗಿದ್ದರು. ಜನವರಿ 10ರಿಂದ ಆರಂಭಗೊಳ್ಳಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶವನ್ನು ರೈನಾ ಪ್ರತಿನಿಧಿಸಲಿದ್ದಾರೆ.

ಸಿಎಸ್​ಕೆ ತಂಡಕ್ಕೆ ಟ್ವೀಟ್ ಮೂಲಕ ಶುಭ ಕೋರಿದ ಸುರೇಶ್ ರೈನಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada