ಭಾರತದಲ್ಲಿ ಒಪ್ಪೋ 5ಜಿ ಲ್ಯಾಬ್ ಸ್ಥಾಪನೆ.. ಚೀನಾ ಕಂಪನಿಯಿಂದ ಮಹತ್ವದ ನಿರ್ಧಾರ!
ಚೀನಾ ಬಿಟ್ಟು ಬೇರೆಡೆ ನಾವು ಇದೇ ಮೊದಲ ಬಾರಿಗೆ 5ಜಿ ಲ್ಯಾಬ್ ಸಿದ್ಧಪಡಿಸಿದ್ದೇವೆ. 5ಜಿ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಇಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರಲಿರುವ ಭಾರತದ 5ಜಿ ತಂತ್ರಜ್ಞಾನಕ್ಕೂ ಈ ಲ್ಯಾಬ್ ಸಹಕಾರಿ ಆಗಲಿದೆ ಎಂದು ಒಪ್ಪೊ ತಿಳಿಸಿದ್ದಾರೆ.
ನವದೆಹಲಿ: ಸ್ಮಾರ್ಟ್ಫೋನ್ ತಯಾರಿಕಾ ಸಂಸ್ಥೆ ಒಪ್ಪೋ ಇದೇ ಮೊದಲ ಬಾರಿಗೆ 5ಜಿ ಆವಿಷ್ಕಾರ ಪ್ರಯೋಗಾಲಯವನ್ನು ಭಾರತದಲ್ಲಿ ಸ್ಥಾಪನೆ ಮಾಡಿದೆ. ಚೀನಾ ಬಿಟ್ಟು ಬೇರೆಡೆ ಒಪ್ಪೋ ಲ್ಯಾಬ್ ನಿರ್ಮಾಣ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.
ಈ ಬಗ್ಗೆ ಮಾಹಿತಿ ನೀಡಿರುವ ಒಪ್ಪೋ ಸಂಸ್ಥೆ, ಚೀನಾ ಬಿಟ್ಟು ಬೇರೆಡೆ ನಾವು ಇದೇ ಮೊದಲ ಬಾರಿಗೆ 5ಜಿ ಲ್ಯಾಬ್ ಸಿದ್ಧಪಡಿಸಿದ್ದೇವೆ. 5ಜಿ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಇಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರಲಿರುವ ಭಾರತದ 5ಜಿ ಸೇವೆಗೂ ಈ ಲ್ಯಾಬ್ ಸಹಕಾರಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಲ್ಯಾಬ್ನಿಂದ ಭಾರತಕ್ಕೂ ಪ್ರಯೋಜನವಿದೆ ಎಂದಿರುವ ಒಪ್ಪೋ ಸಂಸ್ಥೆ, ತಂತ್ರಜ್ಞಾನದಲ್ಲಿ ಭಾರತ ದೊಡ್ಡ ಮಟ್ಟಕ್ಕೆ ಬೆಳೆದು ನಿಲ್ಲುತ್ತಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲೇ 5ಜಿ ಲ್ಯಾಬ್ ಸ್ಥಾಪನೆ ಆಗಿರುವುದರಿಂದ ಸಾಕಷ್ಟು ಪ್ರಯೋಜನ ಆಗಲಿದೆ. ತಂತ್ರಜ್ಞಾನದ ವಿಚಾರದಲ್ಲಿ ಭಾರತವನ್ನು ಆವಿಷ್ಕಾರದ ಹಬ್ಅನ್ನಾಗಿ ಮಾಡೋದು ನಮ್ಮ ಉದ್ದೇಶ ಎಂದಿದೆ.
ಭಾರತದಲ್ಲಿ ನಿರ್ಮಾಣಗೊಳ್ಳಲಿರುವ ಒಪ್ಪೋ ಲ್ಯಾಬ್ ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲು ಸಹಕಾರಿಯಾಗಲಿದೆ. ಅಲ್ಲದೆ, ಈ ಲ್ಯಾಬ್ನಲ್ಲಿ ಯುರೋಪ್, ಜಪಾನ್, ಆಫ್ರಿಕಾ ದಕ್ಷಿಣ ಏಷಿಯಾ ಭಾಗಗಳಿಗೂ ಇಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸಿ ನೀಡಲಾಗುತ್ತಿದೆ.
ಸ್ಯಾಮ್ಸಂಗ್ ಡಿಸ್ಪ್ಲೇ ತಯಾರಿಕಾ ಘಟಕ ಚೀನಾದಿಂದ ಉತ್ತರ ಪ್ರದೇಶಕ್ಕೆ ಶಿಫ್ಟ್!