ಕಾಡಾನೆ ದಾಳಿ: ಮನೆಯಲ್ಲಿದ್ದ ವೃದ್ಧ ಸಾವು, ಎರಡು ಮನೆಗಳು ಜಖಂ..

ಕಾಡಾನೆ ದಾಳಿ: ಮನೆಯಲ್ಲಿದ್ದ ವೃದ್ಧ ಸಾವು, ಎರಡು ಮನೆಗಳು ಜಖಂ..

ಮೈಸೂರು: ಬೆಳ್ಳಂಬೆಳಗ್ಗೆ ಮನೆ ಮೇಲೆ ಕಾಡಾನೆ ದಾಳಿ ಮಾಡಿದರ ಪರಿಣಾಮದಿಂದಾಗಿ ವೃದ್ಧ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಜೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ. ನೆಟ್ಟಕಲ್ಲಹುಂಡಿ ಗ್ರಾಮದ ವೃದ್ಧ ದಂಪತಿ ಚಿನ್ನಪ್ಪ ಹಾಗೂ ಕೊಟ್ಟೂರಮ್ಮ ನೆಲೆಸಿರುವ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ಆಗ ಚಿನ್ನಪ್ಪ (58) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, ಆತನ ಪತ್ನಿ ಕೊಟ್ಟೂರಮ್ಮಗೆ ಗಂಭೀರ ಗಾಯಗಳಾಗಿವೆ. ಗಾಯಾಳು ಕೊಟ್ಟೂರಮ್ಮನವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ಇನ್ನು ಕಾಡಾನೆ ದಾಳಿಯಿಂದ […]

pruthvi Shankar

|

Nov 19, 2020 | 11:15 AM

ಮೈಸೂರು: ಬೆಳ್ಳಂಬೆಳಗ್ಗೆ ಮನೆ ಮೇಲೆ ಕಾಡಾನೆ ದಾಳಿ ಮಾಡಿದರ ಪರಿಣಾಮದಿಂದಾಗಿ ವೃದ್ಧ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಜೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ.

ನೆಟ್ಟಕಲ್ಲಹುಂಡಿ ಗ್ರಾಮದ ವೃದ್ಧ ದಂಪತಿ ಚಿನ್ನಪ್ಪ ಹಾಗೂ ಕೊಟ್ಟೂರಮ್ಮ ನೆಲೆಸಿರುವ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ಮಾಡಿದೆ. ಆಗ ಚಿನ್ನಪ್ಪ (58) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ, ಆತನ ಪತ್ನಿ ಕೊಟ್ಟೂರಮ್ಮಗೆ ಗಂಭೀರ ಗಾಯಗಳಾಗಿವೆ.

ಗಾಯಾಳು ಕೊಟ್ಟೂರಮ್ಮನವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿದೆ. ಇನ್ನು ಕಾಡಾನೆ ದಾಳಿಯಿಂದ ಗ್ರಾಮದ ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಬೀಚನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಕರ್ನಾಟಕ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಆನೆಗಳ ಅನುಮಾನಸ್ಪದ ಸಾವು..

Follow us on

Related Stories

Most Read Stories

Click on your DTH Provider to Add TV9 Kannada