ಕಲಬುರಗಿ: ತನಗೆ ಕೊರೊನಾ ದೃಢವಾಗಿದೆ ಎಂದು ತಿಳಿದು, ಆಘಾತದಿಂದ ವ್ಯಕ್ತಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಭವಾನಿನಗರದಲ್ಲಿ ನಡೆದಿದೆ.
ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಮೃತನ ಅಳಿಯನಿಗೆ ಕೆಲವು ದಿನಗಳ ಹಿಂದೆ ಸೋಂಕು ದೃಢವಾಗಿತ್ತು. ಹೀಗಾಗಿ, ಜುಲೈ 8ರಂದು ಮೃತನ ಕುಟುಂಬದವರು ಕೊವಿಡ್ ಟೆಸ್ಟ್ಗೆ ಗಂಟಲುದ್ರವ ಮಾದರಿ ನೀಡಿದ್ದರು ಎಂದು ತಿಳಿದುಬಂದಿದೆ.
ಇಂದು ಮುಂಜಾನೆ ಕರೆ ಮಾಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ತಮಗೆ ಕೊರೊನಾ ಪಾಸಿಟಿವ್ ಎಂದು ತಿಳಿಸಿದ್ದಾರೆ. ಹೀಗಾಗಿ, ಕರೆ ಸ್ವೀಕರಿಸಿದ ವ್ಯಕ್ತಿ ಸುದ್ದಿ ಕೇಳಿದ ಆಘಾತದಿಂದ ಸ್ಥಳದಲ್ಲೇ ಕುಸಿದುಬಿದ್ದು, ಅಸುನೀಗಿದ್ದಾರೆ.
Published On - 6:38 pm, Thu, 23 July 20