ಕುರಿಗಾಹಿಯನ್ನು ತಿಂದು ಮುಗಿಸಿದ್ದ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

|

Updated on: May 27, 2020 | 2:04 PM

ಮೈಸೂರು: ಹುಣಸೂರು ತಾಲೂಕಿನ ನೇರಳಕುಪ್ಪೆ ಬಿ ಹಾಡಿ ಬಳಿ ರೈತನನ್ನು ಬಲಿಪಡೆದಿದ್ದ ಹುಲಿಯನ್ನು ಸೆರೆಹಿಡಿಯಲಾಗಿದೆ. ನಾಗರಹೊಳೆ ರಾಷ್ಟೀಯ ಉದ್ಯಾನದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಹುಲಿ ಸಿಕ್ಕಿ ಹಾಕಿಕೊಂಡಿದೆ. ಕಾಡಂಚಿನ ನೇರಳಕುಪ್ಪೆ ಗ್ರಾಮದ ಕುರಿ ಕಾಯುತ್ತಿದ್ದ ರೈತನನ್ನು ಹುಲಿ ಎತ್ತುಕೊಂಡು ಹೋಗಿತ್ತು. ನಂತರ ರೈತ ಜಗದೀಶ್ ತಲೆ, ಕೈ ಭಾಗ ಮಾತ್ರ ರಾಷ್ಟ್ರೀಯ ಉದ್ಯಾನದ ಹಂದಿ ಹಳ್ಳದ ಬಳಿಯಲ್ಲಿ ಪತ್ತೆಯಾಗಿತ್ತು. ದೇಹದ ಅಂಗಾಂಗಗಳನ್ನು ತಿಂದು ಹಾಕಿದ್ದ ಹುಲಿ ಸದ್ಯ ಸೆರೆಯಾಗಿದೆ. ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಎರಡು […]

ಕುರಿಗಾಹಿಯನ್ನು ತಿಂದು ಮುಗಿಸಿದ್ದ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Follow us on

ಮೈಸೂರು: ಹುಣಸೂರು ತಾಲೂಕಿನ ನೇರಳಕುಪ್ಪೆ ಬಿ ಹಾಡಿ ಬಳಿ ರೈತನನ್ನು ಬಲಿಪಡೆದಿದ್ದ ಹುಲಿಯನ್ನು ಸೆರೆಹಿಡಿಯಲಾಗಿದೆ. ನಾಗರಹೊಳೆ ರಾಷ್ಟೀಯ ಉದ್ಯಾನದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಹುಲಿ ಸಿಕ್ಕಿ ಹಾಕಿಕೊಂಡಿದೆ.

ಕಾಡಂಚಿನ ನೇರಳಕುಪ್ಪೆ ಗ್ರಾಮದ ಕುರಿ ಕಾಯುತ್ತಿದ್ದ ರೈತನನ್ನು ಹುಲಿ ಎತ್ತುಕೊಂಡು ಹೋಗಿತ್ತು. ನಂತರ ರೈತ ಜಗದೀಶ್ ತಲೆ, ಕೈ ಭಾಗ ಮಾತ್ರ ರಾಷ್ಟ್ರೀಯ ಉದ್ಯಾನದ ಹಂದಿ ಹಳ್ಳದ ಬಳಿಯಲ್ಲಿ ಪತ್ತೆಯಾಗಿತ್ತು. ದೇಹದ ಅಂಗಾಂಗಗಳನ್ನು ತಿಂದು ಹಾಕಿದ್ದ ಹುಲಿ ಸದ್ಯ ಸೆರೆಯಾಗಿದೆ.

ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಎರಡು ಬೋನು ಇರಿಸಿದ್ದ ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್ ಮಹೇಶ್ ಕುಮಾರ್, ಶಾಸಕ ಎಚ್. ಪಿ. ಮಂಜುನಾಥ್ ಭೇಟಿ ನೀಡಿದ್ದಾರೆ.

Published On - 8:22 am, Wed, 27 May 20