14 ದಿನ ಅಲ್ಲ, 7 ದಿನ.. ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿ ಕಡಿತ
ಬೆಂಗಳೂರು: ವಿದೇಶದಿಂದ ಬಂದವರಿಗೆ ತಮ್ಮ ಮನೆಗಳಿಗೆ ಹೋಗಲು ಬಿಡದೆ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಅನೇಕ ವಿದೇಶಿಗಳು ಈ ವ್ಯವಸ್ಥೆಗೆ ಒಪ್ಪುತಿಲ್ಲ. ಕ್ವಾರಂಟೈನ್ಗೆ ಹೋಗಲು ಆಸ್ತಿ ತೋರಿಸುತ್ತಿಲ್ಲ. ಅನೇಕ ಕಡೆ ಈ ಬಗ್ಗೆ ವಿದೇಶಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗಳಾಗಿವೆ. ಈ ಬೆನ್ನಲ್ಲೆ ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿಯನ್ನು ಕಡಿತ ಮಾಡಲಾಗಿದೆ. 14 ದಿನಗಳ ಬದಲಿಗೆ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. 7ದಿನ ಸಾಂಸ್ಥಿಕ […]

ಬೆಂಗಳೂರು: ವಿದೇಶದಿಂದ ಬಂದವರಿಗೆ ತಮ್ಮ ಮನೆಗಳಿಗೆ ಹೋಗಲು ಬಿಡದೆ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಅನೇಕ ವಿದೇಶಿಗಳು ಈ ವ್ಯವಸ್ಥೆಗೆ ಒಪ್ಪುತಿಲ್ಲ. ಕ್ವಾರಂಟೈನ್ಗೆ ಹೋಗಲು ಆಸ್ತಿ ತೋರಿಸುತ್ತಿಲ್ಲ. ಅನೇಕ ಕಡೆ ಈ ಬಗ್ಗೆ ವಿದೇಶಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗಳಾಗಿವೆ.
ಈ ಬೆನ್ನಲ್ಲೆ ವಿದೇಶದಿಂದ ಬರುವವರ ಕ್ವಾರಂಟೈನ್ ಅವಧಿಯನ್ನು ಕಡಿತ ಮಾಡಲಾಗಿದೆ. 14 ದಿನಗಳ ಬದಲಿಗೆ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
7ದಿನ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಉಳಿದ 7ದಿನ ಹೋಂ ಕ್ವಾರಂಟೈನ್ನಲ್ಲಿರ ಬೇಕು. ಹೋಟೆಲ್ನಲ್ಲಿ 7 ದಿನ ಕ್ವಾರಂಟೈನ್ ಪೂರೈಸಿದ ಬಳಿಕ ಸೂಕ್ತ ಮಾರ್ಗದರ್ಶನ ಪಡೆದು ವೈದ್ಯರ ಸಲಹೆಯೊಂದಿಗೆ ಹೋಂ ಕ್ವಾರಂಟೈನ್ಗೆ ಅವಕಾಶ ನೀಡಲಾಗಿದೆ. 14 ದಿನಗಳ ಹೋಟೆಲ್ ಕ್ವಾರಂಟೈನ್ಗಾಗಿ ಮುಂಗಡವಾಗಿ ಪಾವತಿಸಿದ ಹಣ ವಾಪಾಸ್ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
Published On - 7:35 am, Wed, 27 May 20




