AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ.1ರಿಂದ ಮಂತ್ರಘೋಷ, ಭಕ್ತರಿಗೆ ದರ್ಶನ ಭಾಗ್ಯ ನೀಡಲು ದೇವಸ್ಥಾನಗಳು ಓಪನ್!

ಬೆಂಗಳೂರು: ಲಾಕ್​ಡೌನ್ 4.Oನಲ್ಲಿ ಅಂಗಡಿ ಮುಂಗಟ್ಟು ವ್ಯಾಪಾರ-ವಹಿವಾಟಿಗೆಲ್ಲಾ ಸರ್ಕಾರ ಅನುಮತಿ ಕೊಟ್ಟಿದೆ. ಆದ್ರೆ ದೇವಸ್ಥಾನಗಳನ್ನ ತೆರೆಯಲು ಮಾತ್ರ ಪರ್ಮಿಷನ್ ಕೊಟ್ಟಿರಲಿಲ್ಲ. ಇದೀಗ ಭಕ್ತರಿಗೆ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದ್ರ ಬೆನ್ನಲ್ಲೇ ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಕೂಡ ಮಾಲ್ ಓಪನ್ ಮಾಡೋಕೆ ಅನುಮತಿ ಕೊಡಿ ಅಂತಾ ಸಿಎಂ ಬಿಎಸ್​ವೈಗೆ ಮನವಿ ಮಾಡಿದ್ದಾರೆ. ದೇವಸ್ಥಾನದಲ್ಲಿ ಮಂತ್ರಘೋಷಗಳಿರಲಿಲ್ಲ.. ಭಕ್ತಿ ಶ್ರದ್ಧೆಯ ಭಜನೆ ಇರ್ಲಿಲ್ಲ.. ಆರಾಧನೆಯೇ ನಿಂತು ಹೋಗಿತ್ತು.. ಭಕ್ತರಿಗೆ ದರ್ಶನವೇ ಬಂದ್ ಆಗಿತ್ತು.. ದೈವಕಾರ್ಯಗಳು, ಪೂಜೆ ಪುನಸ್ಕಾರಗಳೆಲ್ಲ ಮನೆಯ 4 […]

ಜೂ.1ರಿಂದ ಮಂತ್ರಘೋಷ, ಭಕ್ತರಿಗೆ ದರ್ಶನ ಭಾಗ್ಯ ನೀಡಲು ದೇವಸ್ಥಾನಗಳು ಓಪನ್!
ಆಯೇಷಾ ಬಾನು
|

Updated on:May 27, 2020 | 2:06 PM

Share

ಬೆಂಗಳೂರು: ಲಾಕ್​ಡೌನ್ 4.Oನಲ್ಲಿ ಅಂಗಡಿ ಮುಂಗಟ್ಟು ವ್ಯಾಪಾರ-ವಹಿವಾಟಿಗೆಲ್ಲಾ ಸರ್ಕಾರ ಅನುಮತಿ ಕೊಟ್ಟಿದೆ. ಆದ್ರೆ ದೇವಸ್ಥಾನಗಳನ್ನ ತೆರೆಯಲು ಮಾತ್ರ ಪರ್ಮಿಷನ್ ಕೊಟ್ಟಿರಲಿಲ್ಲ. ಇದೀಗ ಭಕ್ತರಿಗೆ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದ್ರ ಬೆನ್ನಲ್ಲೇ ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಕೂಡ ಮಾಲ್ ಓಪನ್ ಮಾಡೋಕೆ ಅನುಮತಿ ಕೊಡಿ ಅಂತಾ ಸಿಎಂ ಬಿಎಸ್​ವೈಗೆ ಮನವಿ ಮಾಡಿದ್ದಾರೆ.

ದೇವಸ್ಥಾನದಲ್ಲಿ ಮಂತ್ರಘೋಷಗಳಿರಲಿಲ್ಲ.. ಭಕ್ತಿ ಶ್ರದ್ಧೆಯ ಭಜನೆ ಇರ್ಲಿಲ್ಲ.. ಆರಾಧನೆಯೇ ನಿಂತು ಹೋಗಿತ್ತು.. ಭಕ್ತರಿಗೆ ದರ್ಶನವೇ ಬಂದ್ ಆಗಿತ್ತು.. ದೈವಕಾರ್ಯಗಳು, ಪೂಜೆ ಪುನಸ್ಕಾರಗಳೆಲ್ಲ ಮನೆಯ 4 ಗೋಡೆಗಳ ನಡ್ವೆ ಮಾತ್ರ ನಡೀತಿತ್ತು. ದೇವರೇ ಕೊರೊನಾದಿಂದ ಕಾಪಾಡಪ್ಪಾ ಅಂತಾ ಮನೆಯಲ್ಲಿ ಕೂತೇ ಕೇಳುವಂತಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡದೆ ಅದೆಷ್ಟೋ ವೃದ್ಧರು, ಮಹಿಳೆಯರು ಪರಿತಪಿಸ್ತಿದ್ದಾರೆ. ಮತ್ತೊಂದೆಡೆ ದೇವರನ್ನೇ ನಂಬಿ ಬದುಕೋ ಅರ್ಚಕರು ಕೂಡ ಕೆಲ್ಸ ಇಲ್ಲದೆ ಖಾಲಿ ಕೂತಿದ್ದಾರೆ. ಇದೀಗ ಇವ್ರಿಗೆ ಸಿಎಂ ಬಿಎಸ್​ವೈ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಜೂನ್ 1ರಿಂದ ದೇವಸ್ಥಾನಗಳು ಓಪನ್! ಹೌದು, ಬರೋಬ್ಬರಿ 2 ತಿಂಗಳಿಂದ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳು ಬಂದ್ ಆಗಿದ್ವು. ಅರ್ಚಕರಿಂದ ಹಿಡಿದು ಹೂ-ಹಣ್ಣು, ಪೂಜಾ ಸಾಮಗ್ರಿ ಮಾರ್ತಿದ್ದವರೆಲ್ಲಾ ಮನೆ ಸೇರಿದ್ರು. ದೇವಸ್ಥಾನಗಳನ್ನೇ ನಂಬಿ ಬದುಕ್ತಿದ್ದ ಅದೆಷ್ಟು ಜನರು ತುತ್ತು ಊಟಕ್ಕೂ ಪರದಾಡಿದ್ರು. ಹೀಗಾಗಿ ನಿನ್ನೆ ಸಭೆ ನಡೆಸಿದ ಸಿಎಂ ಬಿಎಸ್​ವೈ ಜೂನ್ 1ರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳನ್ನ ತೆರೆಯಬಹುದು ಎಂದು ಆದೇಶಿಸಿದ್ರು. ಹಾಗಾದ್ರೆ ಸಿಎಂ ಇನ್ನು ಏನೆಲ್ಲಾ ಸೂಚನೆಗಳನ್ನ ಕೊಟ್ಟಿದ್ದಾರೆ ಅಂತಾ ನೋಡೋದಾದ್ರೆ.

ದೇವಸ್ಥಾನಗಳು ಓಪನ್: ರಾಜ್ಯದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗಳಿಗೂ ಅವಕಾಶ ನೀಡಲಾಗಿದೆ. ದೇವರ ದರ್ಶನದ ವೇಳೆ ಸಾಮಾಜಿಕ ಅಂತರ ಮತ್ತು ಸುರಕ್ಷತೆ ಕಾಪಾಡ್ಬೇಕು. ಆದ್ರೆ ಜಾತ್ರಾ ಮಹೋತ್ಸವ ಹಾಗೂ ಸಮಾರಂಭಕ್ಕೆ ಅವಕಾಶವಿಲ್ಲ. ಇಂದಿನಿಂದ ಆಯ್ದ 52 ದೇಗುಲಗಳಲ್ಲಿ ಆನ್​ಲೈನ್ ಬುಕಿಂಗ್ ಶುರುವಾಗಲಿದೆ ಅಂತಾ ಸಿಎಂ ಹೇಳಿದ್ದಾರೆ.

ಶಾಪಿಂಗ್ ಮಾಲ್ ಆರಂಭಿಸಲು ಪರ್ಮಿಷನ್ ಕೊಡಿ! ಇತ್ತ ಮೊದಲ ಹಂತದ ಲಾಕ್​ಡೌನ್​ನಿಂದಲೂ ಶಾಪಿಂಗ್ ಮಾಲ್​ಗಳು ಬಂದ್ ಆಗಿವೆ. ಹೀಗಾಗಿ ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಅವ್ರು ನಿನ್ನೆ ಸಿಎಂರನ್ನ ಭೇಟಿ ಮಾಡಿದ್ರು. ಶಾಪಿಂಗ್ ಮಾಲ್ ಓಪನ್ ಮಾಡೋಕೆ ಪರ್ಮಿಷನ್ ಕೊಡಿ ಅಂತಾ ಮನವಿ ಮಾಡ್ಕೊಂಡ್ರು. ಈ ವೇಳೆ ಶಾಪಿಂಗ್ ಸೆಂಟರ್ ಅಸೋಷಿಯೇಷನ್ ಅವ್ರು ಸಿಎಂಗೆ ಏನೆಲ್ಲಾ ಹೇಳಿದ್ರು ಅಂತಾ ಗಮನಿಸೋದಾದ್ರೆ..

ತಪ್ಪದೆ ಸುರಕ್ಷತೆ ಕಾಪಾಡ್ತೀವಿ: ಮಾಲ್​ಗಳಲ್ಲಿ ಪ್ರತಿ ಹಂತದಲ್ಲೂ ಸುರಕ್ಷತೆ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಅಂತರದ ಜೊತೆಗೆ ಮಾಲ್​ಗಳಲ್ಲಿ ಸ್ಯಾನಿಟೈಸೇಷನ, ಥರ್ಮಲ್ ಸ್ಕ್ರೀನಿಂಗ್, ಮೆಡಿಕಲ್ ಚೆಕ್ ಅಪ್ ಮಾಡ್ತೀವಿ. ಸದ್ಯ ಇರೋ ಆರ್ಥಿಕ ಸಂಕಷ್ಟವನ್ನ ಗಮನದಲ್ಲಿಟ್ಟುಕೊಂಡು ಅನುಮತಿ ಕೊಡಿ. ಸರ್ಕಾರ ಅನುಮತಿ ನೀಡಿದರೆ ಜೂನ್​ 1ರಿಂದ ಮಾಲ್​ಗಳನ್ನ ಓಪನ್ ಮಾಡ್ತೀವಿ, ಇದ್ಕಾಗಿ ಎಲ್ಲಾ ಸಿದ್ಧತೆ ಮಾಡ್ಕೊಂಡಿದ್ದೀವಿ ಅಂದಿದ್ದಾರೆ.

ಒಟ್ನಲ್ಲಿ ಲಾಕ್​ಡೌನ್ ಸಡಿಲಿಕೆ ಆದ್ರೂ ದೇವಸ್ಥಾನ, ಮಾಲ್, ಥಿಯೇಟರ್, ಹೋಟೆಲ್​ಗಳಿಗೆ ಮಾತ್ರ ಅನುಮತಿ ಕೊಟ್ಟಿರಲಿಲ್ಲ. ಆದ್ರೀಗ ಜೂನ್ 1ರಿಂದ ದೇವಸ್ಥಾನಗಳು ಓಪನ್ ಆಗ್ತೀವೆ. ಆದ್ರೆ ಹೋಟೆಲ್, ಮಾಲ್​ಗಳಿಗೆ ಸಿಎಂ ಪರ್ಮಿಷನ್ ಕೊಡ್ತಾರಾ? ಪ್ರಧಾನಿ ಜೊತೆ ಮಾತಾಡಿದ ಮೇಲೆ ಹೊಸ ಮಾರ್ಗಸೂಚಿ ರಿಲೀಸ್ ಆಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

Published On - 8:39 am, Wed, 27 May 20

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ