Dating Scam ಡೇಟಿಂಗ್ ಆಸೆಗೆ ಬಿದ್ದು ಯುವಕ ಹಾಕಿಸ್ಕೊಂಡ ಮಕ್ಮಲ್ ಟೋಪಿ
ಬೆಂಗಳೂರು: ಡೇಟಿಂಗ್ ಆಸೆಗೆ ಬಿದ್ದು ಯುವಕ $99,700 ರೂ ಕಳೆದುಕೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಡೇಟಿಂಗ್‌ಗಾಗಿ ಸರ್ಚ್ ಮಾಡಿದ್ದ ವೈಟ್ ಫೀಲ್ಡ್‌ನಲ್ಲಿ ವಾಸವಿದ್ದ 27 ವರ್ಷದ ಯುವಕನಿಗೆ ಸುಂದರ ಯುವತಿಯ ಫೋಟೋ ತೋರಿಸಿ ಮಕ್ಮಲ್ ಟೋಪಿ ಹಾಕಿದ್ದಾರೆ. ಡೇಟಿಂಗ್‌ಗಾಗಿ ಆನ್ಲೈನ್ನಲ್ಲಿ ಸರ್ಚ್ ಮಾಡಿದ ಯುವಕನಿಗೆ ಕೂಡಲೇ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು. ನಂತರ ಡೇಟಿಂಗ್‌ಗಾಗಿ ಒಬ್ಬ ಸುಂದರ ಯುವತಿ ಜೊತೆ ಅವಕಾಶ ನೀಡುವುದಾಗಿ ಹೇಳಿ ಯುವತಿ ಫೋಟೋ ಕಳಿಸಿ ಯಾಮಾರಿಸಿದ್ದಾನೆ. ಬಳಿಕ ತಾನು ನೀಡಿದ […]
ಬೆಂಗಳೂರು: ಡೇಟಿಂಗ್ ಆಸೆಗೆ ಬಿದ್ದು ಯುವಕ $99,700 ರೂ ಕಳೆದುಕೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಡೇಟಿಂಗ್‌ಗಾಗಿ ಸರ್ಚ್ ಮಾಡಿದ್ದ ವೈಟ್ ಫೀಲ್ಡ್‌ನಲ್ಲಿ ವಾಸವಿದ್ದ 27 ವರ್ಷದ ಯುವಕನಿಗೆ ಸುಂದರ ಯುವತಿಯ ಫೋಟೋ ತೋರಿಸಿ ಮಕ್ಮಲ್ ಟೋಪಿ ಹಾಕಿದ್ದಾರೆ. ಡೇಟಿಂಗ್‌ಗಾಗಿ ಆನ್ಲೈನ್ನಲ್ಲಿ ಸರ್ಚ್ ಮಾಡಿದ ಯುವಕನಿಗೆ ಕೂಡಲೇ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು.
ನಂತರ ಡೇಟಿಂಗ್‌ಗಾಗಿ ಒಬ್ಬ ಸುಂದರ ಯುವತಿ ಜೊತೆ ಅವಕಾಶ ನೀಡುವುದಾಗಿ ಹೇಳಿ ಯುವತಿ ಫೋಟೋ ಕಳಿಸಿ ಯಾಮಾರಿಸಿದ್ದಾನೆ. ಬಳಿಕ ತಾನು ನೀಡಿದ ನಂಬರ್‌ಗೆ ಗೂಗಲ್ ಪೇ ಮೂಲಕ ಹಣ ಹಾಕು ಎಂದಿದ್ದಾನೆ. ಹಂತಹಂತವಾಗಿ $99,700 ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ.
ಕೊನೆಗೆ ಯುವಕ ಡೇಟಿಂಗ್ ಇಲ್ಲದೆ, ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ. ಘಟನೆಗೆ ಸಂಬಂಧಿಸಿ ದಕ್ಷಿಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.