ಸೋಂಕಿತರಿಗೆ ಆಸ್ಪತ್ರೆಯಲ್ಲಿ ಯುದ್ಧವಾದ್ರೆ, ಕುಟುಂಬಸ್ಥರಿಗೆ ಗ್ರಾಮದಲ್ಲಿ ಅಗ್ನಿ ಪರೀಕ್ಷೆ

ಹಾಸನ: ಕೊರೊನಾ ಕೇವಲ ಸೋಂಕಿತರಿಗೆ ಹಿಂಸೆ ಕೊಡದೇ ಕುಟುಂಬಸ್ಥರಿಗೂ ನೋವನ್ನುಂಟು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮಗ, ಹೆಂಡತಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಏರಿಯಾದ ಜನ ನಿಂದಿಸುತ್ತಿದ್ದಾರೆ ಎಂದು ತಂದೆ ನೇಣಿಗೆ ಶರಣಾದ ಘಟನೆ ನಡೆದಿತ್ತು. ಈಗ ಅದೇ ಮಾದರಿ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದವರ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಕುಟುಂಬಸ್ಥರು ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ. ಹಾಸನ‌ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗ್ರಾಮವೊಂದರ ಸೋಂಕಿತನ ಕುಟುಂಬಸ್ಥರು ಪಡುತ್ತಿರುವ ನೋವಿನ ವಿಡಿಯೋ ವೈರಲ್ […]

ಸೋಂಕಿತರಿಗೆ ಆಸ್ಪತ್ರೆಯಲ್ಲಿ ಯುದ್ಧವಾದ್ರೆ, ಕುಟುಂಬಸ್ಥರಿಗೆ ಗ್ರಾಮದಲ್ಲಿ ಅಗ್ನಿ ಪರೀಕ್ಷೆ
Follow us
ಆಯೇಷಾ ಬಾನು
|

Updated on: Jul 24, 2020 | 9:11 AM

ಹಾಸನ: ಕೊರೊನಾ ಕೇವಲ ಸೋಂಕಿತರಿಗೆ ಹಿಂಸೆ ಕೊಡದೇ ಕುಟುಂಬಸ್ಥರಿಗೂ ನೋವನ್ನುಂಟು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮಗ, ಹೆಂಡತಿಗೆ ಕೊರೊನಾ ಪಾಸಿಟಿವ್ ಬಂದ ನಂತರ ಏರಿಯಾದ ಜನ ನಿಂದಿಸುತ್ತಿದ್ದಾರೆ ಎಂದು ತಂದೆ ನೇಣಿಗೆ ಶರಣಾದ ಘಟನೆ ನಡೆದಿತ್ತು. ಈಗ ಅದೇ ಮಾದರಿ ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದವರ ಕುಟುಂಬಸ್ಥರು ಪರದಾಡುತ್ತಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಕುಟುಂಬಸ್ಥರು ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ. ಹಾಸನ‌ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗ್ರಾಮವೊಂದರ ಸೋಂಕಿತನ ಕುಟುಂಬಸ್ಥರು ಪಡುತ್ತಿರುವ ನೋವಿನ ವಿಡಿಯೋ ವೈರಲ್ ಆಗಿದೆ.

ಸೋಂಕಿತನ ತಂದೆಗೆ ಗ್ರಾಮಸ್ಥರಿಂದ ನಿಂದನೆ ಪರೀಕ್ಷೆ ನಡೆಸಿ ವಾರದ ಬಳಿಕ ಯುವಕನಿಗೆ ಕೊರೊನಾ ಇರುವುದು ದೃಢವಾಗಿತ್ತು. ನಂತರ ಯುವಕ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ರು. ಸೋಂಕಿತ ಆಸ್ಪತ್ರೆಗೆ ಸೇರುತ್ತಲೆ ಗ್ರಾಮದಲ್ಲಿ ಅವರ ಕುಟುಂಬ ಸದಸ್ಯರಿಗೆ ನಿಂದನೆ ಆರೋಪ ಹೆಚ್ಚಾಗಿದೆ.ದನ ಕರುಗಳಿಗೆ ಮೇವು ತರಲೂ ಆಗದೆ ಕುಟುಂಬಸ್ಥರು ಪರದಾಡುತ್ತಿದ್ದಾರೆ. ಅಗತ್ಯ ವಸ್ತುಗಳು ಸಿಗದೆ‌ ಮನೆಯವರಿಗೆ ತೊಂದರಯಾಗಿದೆ. ಅಧಿಕಾರಿಗಳು ಕೇವಲ ಸೋಂಕಿತರ ಮನೆ ಅಥವಾ ಬೀದಿ ಸೀಲ್​ಡೌನ್ ಮಾಡಿ‌ ಕೈತೊಳೆದುಕೊಳ್ತಿದ್ದಾರೆ. ಆದ್ರೆ ಅಲ್ಲಿನ ಜನರ ಅಗತ್ಯ ವಸ್ತು ಪೂರೈಕೆ ಬಗ್ಗೆ ನಿರ್ಲಕ್ಷ್ಯವಹಿಸಲಾಗುತ್ತಿದೆ. ಸೋಂಕಿತನ ಕುಟುಂಬಸ್ಥರು ಓಡಾಡಿದ್ರೆ ಜನ ನಿಂದಿಸುತ್ತಿದ್ದಾರೆ. ಮನಸ್ಸಿಗೆ ನೋವಾಗುವಂತೆ ವರ್ತಿಸುತ್ತಿದ್ದಾರೆ.

ನೀವು ನಮಗೆ ಸಹಾಯ ಮಾಡದೇ ಹೋದ್ರೂ ಪರವಾಗಿಲ್ಲ ತೊಂದರೆ ಕೊಡಬೇಡಿ. ನನ್ನ ವರದಿ ತಡವಾಗಲು ಸರ್ಕಾರ ಕಾರಣ. ಜನರು ಪ್ರಶ್ನೆ ಮಾಡೊ ಹಾಗಿದ್ರೆ ಸರ್ಕಾರವನ್ನ ಪ್ರಶ್ನೆ ಮಾಡಿ. ನಮಗ್ಯಾಕೆ ನೋವು ಕೊಡ್ತೀರ ಎಂದು ಹಾಸನದ ಕೋವಿಡ್ ಆಸ್ಪತ್ರೆಯಿಂದ ಸೋಂಕಿತ ಯುವಕ ವಿಡಿಯೋ ಮಾಡಿ ನೋವು ಹೇಳಿಕೊಂಡಿದ್ದಾನೆ.