ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ನಿವೃತ್ತ ಶಿಕ್ಷಕಿ ಬಲಿ
ಬೆಂಗಳೂರು: ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದಕ್ಕೆ ನಿವೃತ್ತ ಶಿಕ್ಷಕಿ ಕೊನೆಯುಸಿರೆಳೆದಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಗಾಂಧಿನಗರದ ಮುನೇಶ್ವರ ಬ್ಲಾಕ್‌ನ ನಿವೃತ್ತ ಶಿಕ್ಷಕಿ ಲೋ ಬಿಪಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಹೀಗಾಗಿ ಸಂಬಂಧಿಕರು ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆಸ್ಪತ್ರೆ ಸಮಯ ಮುಗಿದಿದೆ ಎಂದು ದಾಖಲಿಸಿಕೊಂಡಿರಲಿಲ್ಲ. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಕೋವಿಡ್ ಬಂದವರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ ಎಂದಿದ್ರು. ಅಮ್ಮನನ್ನ ಉಳಿಸಿಕೊಡಿ ಅಂತ ಮಗಳು ಅಂಗಾಲಾಚಿ ಬೇಡಿದರೂ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಚಿಕಿತ್ಸೆ […]
ಬೆಂಗಳೂರು: ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದಕ್ಕೆ ನಿವೃತ್ತ ಶಿಕ್ಷಕಿ ಕೊನೆಯುಸಿರೆಳೆದಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಗಾಂಧಿನಗರದ ಮುನೇಶ್ವರ ಬ್ಲಾಕ್‌ನ ನಿವೃತ್ತ ಶಿಕ್ಷಕಿ ಲೋ ಬಿಪಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಹೀಗಾಗಿ ಸಂಬಂಧಿಕರು ಮೊದಲು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು.
ಆಸ್ಪತ್ರೆ ಸಮಯ ಮುಗಿದಿದೆ ಎಂದು ದಾಖಲಿಸಿಕೊಂಡಿರಲಿಲ್ಲ. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಕೋವಿಡ್ ಬಂದವರನ್ನು ಮಾತ್ರ ಸೇರಿಸಿಕೊಳ್ಳುತ್ತೇವೆ ಎಂದಿದ್ರು. ಅಮ್ಮನನ್ನ ಉಳಿಸಿಕೊಡಿ ಅಂತ ಮಗಳು ಅಂಗಾಲಾಚಿ ಬೇಡಿದರೂ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಚಿಕಿತ್ಸೆ ಸಿಗದಿದ್ದಕ್ಕೆ ನಿವೃತ್ತ ಶಿಕ್ಷಕಿ ಪ್ರಾಣಬಿಟ್ಟಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದಕ್ಕೆ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.