ಹಾವೇರಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಚಿಕ್ಕಪ್ಪನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದ ವಿರೂಪಾಕ್ಷಪ್ಪ ರಾಮಾಪುರ(55) ಕೊಲೆಯಾದ ವ್ಯಕ್ತಿ. ವಿರೂಪಾಕ್ಷಪ್ಪ ರಾಮಾಪುರ, ತೇಗದ ಮರ ಕಡಿಯದಂತೆ ತನ್ನ ಅಣ್ಣನ ಮಕ್ಕಳಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಇಷ್ಟಕ್ಕೇ ಕೋಪಗೊಂಡು ಮಕ್ಕಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಂದಿದ್ದಾರೆ. ಜಮೀನಿಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದು ಕಂದ್ಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಬಸವರಾಜ ರಾಮಾಪುರ ಸೇರಿದಂತೆ ಹಲವರಿಂದ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಿಪಿಐ […]
Follow us on
ಹಾವೇರಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಚಿಕ್ಕಪ್ಪನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದ ವಿರೂಪಾಕ್ಷಪ್ಪ ರಾಮಾಪುರ(55) ಕೊಲೆಯಾದ ವ್ಯಕ್ತಿ. ವಿರೂಪಾಕ್ಷಪ್ಪ ರಾಮಾಪುರ, ತೇಗದ ಮರ ಕಡಿಯದಂತೆ ತನ್ನ ಅಣ್ಣನ ಮಕ್ಕಳಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಇಷ್ಟಕ್ಕೇ ಕೋಪಗೊಂಡು ಮಕ್ಕಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಂದಿದ್ದಾರೆ. ಜಮೀನಿಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದು ಕಂದ್ಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಬಸವರಾಜ ರಾಮಾಪುರ ಸೇರಿದಂತೆ ಹಲವರಿಂದ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಿಪಿಐ ಶಿವಶಂಕರ ಗಣಾಚಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.