ಹಾಸನ: ಗೋವಾ ಪ್ರವಾಸದಲ್ಲಿ ತಾನು ಬಯಸಿದಂತೆ ಇರದ ಆರೋಪಕ್ಕೆ ನಿಶ್ಚಿತಾರ್ಥವಾಗಿದ್ದ ಯುವತಿಯ ಜತೆ ಯುವಕ ಮದುವೆ ನಿರಾಕರಿಸಿದ್ದು ಯುವಕನ ವಿರುದ್ಧ ಯುವತಿ ಪೋಷಕರು ಪೊಲೀಸ್ ಮೊರೆ ಹೋಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ಗ್ರಾಂಡ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡು ಈಗ ಮದುವೆಯಾಗಲ್ಲ ಎಂದು ಹೇಳಿ ಈ ಪ್ರಾಫಿಟ್ ಸಂಸ್ಥೆ ಮಾಲೀಕ ಮೋಸ ಮಾಡ್ತಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಎಂಗೇಜ್ಮೆಂಟ್ ಆಗಿ ಮದುವೆ ನಿಶ್ಚಯವಾಗಿದ್ದ ಹುಡುಗಿ ಬೇಡಾ ಎಂದ ಹುಡುಗನಿಂದ ನ್ಯಾಯ ಕೊಡಿಸಿ ಎಂದು ಯುವತಿ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇಂಜಿನಿಯರಿಂಗ್ ಮಾಡಿದ್ದ ಹುಡುಗಿಗೆ ಈ ಪ್ರಾಫಿಟ್ ಸಂಸ್ಥೆ ಮಾಲೀಕ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರ ಚಿನ್ನಿಗ ಗ್ರಾಮದ ನಿಶ್ಚಿತ್ ಎಂಬ ಯುವಕ ತಾನು ಬೆಂಗಳೂರಿನ ಕೋರಮಂಗಲದಲ್ಲಿ ಈ ಪ್ರಾಫಿಟ್ ಕಂಪನಿ ನಡೆಸುತ್ತಿರೋದಾಗಿ ಹೇಳಿಕೊಂಡಿದ್ದ. ಖಾಸಗಿ ಸಂಸ್ಥೆಯ ಮಾಲೀಕನೆಂದು ನಂಬಿ ಯುವತಿ ಪೋಷಕರು ಗ್ರಾಂಡಾಗಿ ಎಂಗೇಜ್ಮೆಂಟ್ ಮಾಡಿಕೊಟ್ಟಿದ್ದರು. ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಇವರಿಬ್ಬರ ಎಂಗೇಜ್ಮೆಂಟ್ ನೆರವೇರಿತ್ತು.
ಮದುವೆ ಮಾತುಕತೆ ಬಳಿಕ ಇಬ್ಬರೂ ಗೋವಾ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ತಾನು ಹೇಳಿದಂತೆ ತನ್ನೊಟ್ಟಿಗೆ ಇರಲಿಲ್ಲ ಎನ್ನೋ ಕಾರಣಕ್ಕಾಗಿ ಹುಡುಗಿ ಜೊತೆ ಸಂಬಂಧ ಕಡಿದುಕೊಳ್ಳೋದಾಗಿ ಯುವತಿ ಪೋಕ್ಷಕರಿಗೆ ಯುವಕ ತಿಳಿಸಿದ್ದಾನೆ. ಅಲ್ಲದೆ ಇದೀಗ ಏಕಾಏಕಿ ಮದುವೆ ಬೇಡಾ ಎಂದು ಯುವಕನ ಪೋಷಕರು ಹೇಳಿದ್ದಾರೆ. ಹೀಗಾಗಿ ಯುವತಿ ಪೋಷಕರಲ್ಲಿ ಆತಂಕ ಶುರುವಾಗಿದೆ. ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಭಾವಿ ಪತಿ ನಿಶ್ಚಿತ್ ಹೇಳಿದಂತೆ ಯುವತಿ ಸಹ ಕೆಲಸವನ್ನೂ ಬಿಟ್ಟು ಮದುವೆಗೆ ರೆಡಿಯಾಗಿದ್ದಳು. ಆದ್ರೆ ಗೋವಾ ಪ್ರವಾಸದ ಬಳಿಕ ನಿಶ್ಚಿತ್ನ ನಿರ್ಧಾರ ಕೇಳಿ ಯುವತಿಕೆ ಶಾಕ್ ಆಗಿದೆ. ಮನನೊಂದು ವಿಷ ಸೇವಿಸಿದ್ದಾಳೆ. ಸದ್ಯ ಯುವತಿಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತಮಗೆ ನ್ಯಾಯ ಕೊಡಿಸುವಂತೆ ಬೇಲೂರು ಪೊಲೀಸ್ ಠಾಣೆಗೆ ಯುವತಿ ಪೋಷಕರು ದೂರು ನೀಡಿದ್ದಾರೆ.
ಮೇ 9 ಕ್ಕೆ ಮದುವೆ ನಿಶ್ಚಯ ಮಾಡಿ, ಮದುವೆ ಮಂಟಪವೂ ಬುಕ್ ಆಗಿದೆ. ಆದ್ರೆ ಈಗ ಮದುವೆಯಾಗ ಬೇಕಿದ್ದ ವರ, ಮದುವೆ ಬೇಡ ಎಂದು ಕೂತಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು, ಮನೆಯವರು ನೋಡಿದ ಹುಡುಗನನ್ನು ಮದುವೆಯಾಗಲು ಸಿದ್ಧವಾಗಿದ್ದ ಯುವತಿ ಕೆಲಸವೂ ಇಲ್ಲದೆ, ಮದುವೆಯೂ ಇಲ್ಲದೆ ಅತಂತ್ರಳಾಗಿದ್ದಾಳೆ. ಇದೀಗ ಮದುವೆ ಕ್ಯಾನ್ಸಲ್ ಎನ್ನುತ್ತಲೇ ಕಾನೂನು ಹೋರಾಟಕ್ಕೆ ನಿಂತಿದ್ದಾಳೆ.
ಇದನ್ನೂ ಓದಿ: ಮದುವೆ ನಿರಾಕರಿಸಿದಕ್ಕೆ 15 ವರ್ಷದ ಅಪ್ರಾಪ್ತೆಯನ್ನೇ ಕಿಡ್ನಾಪ್ ಮಾಡಿದ್ರಾ ಯುವಕನ ಪೋಷಕರು?