ಮದುವೆ ನಿರಾಕರಿಸಿದಕ್ಕೆ 15 ವರ್ಷದ ಅಪ್ರಾಪ್ತೆಯನ್ನೇ ಕಿಡ್ನಾಪ್ ಮಾಡಿದ್ರಾ ಯುವಕನ ಪೋಷಕರು?
3 ತಿಂಗಳ ಹಿಂದೆ ಮದುವೆ ಮಾಡಿಕೊಡುವಂತೆ ಯುವಕನೊಬ್ಬನ ಪೋಷಕರು ಅಪ್ರಾಪ್ತೆಯ ಮನೆಗೆ ಬಂದಿದ್ದರು. ಈ ವೇಳೆ ನಮ್ಮ ಮಗಳಿಗೆ ಕೇವಲ 15 ವರ್ಷ ವಯಸ್ಸು ಎಂದು ಅಪ್ರಾಪ್ತೆಯಾಗಿದ್ದ ಹಿನ್ನೆಲೆ ಮದುವೆಗೆ ಪೋಷಕರು ನಿರಾಕರಿಸಿದ್ದರು. ಆದ್ರೆ ಯುವಕನ ಪೋಷಕರು ಮದುವೆ ಮಾಡಿಕೊಡದಿದ್ದರೆ ಪರಿಣಾಮವನ್ನು ಎದುರಿಸುತ್ತೀರಿ ಎಂದು ಅಪ್ರಾಪ್ತೆ ಪೋಷಕರಿಗೆ ಎಚ್ಚರಿಕೆ ನೀಡಿ ಹೋಗಿದ್ದರು.
ಮೈಸೂರು: ಮದುವೆಗೆ ಪೋಷಕರು ನಿರಾಕರಿಸಿದ್ದಕ್ಕೆ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ. ಈ ಬಗ್ಗೆ ಕಿಡ್ನ್ಯಾಪ್ ಆಗಿರುವ ಅಪ್ರಾಪ್ತೆಯ ಪೋಷಕರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
3 ತಿಂಗಳ ಹಿಂದೆ ಮದುವೆ ಮಾಡಿಕೊಡುವಂತೆ ಯುವಕನೊಬ್ಬನ ಪೋಷಕರು ಅಪ್ರಾಪ್ತೆಯ ಮನೆಗೆ ಬಂದಿದ್ದರು. ಈ ವೇಳೆ ನಮ್ಮ ಮಗಳಿಗೆ ಕೇವಲ 15 ವರ್ಷ ವಯಸ್ಸು ಎಂದು ಅಪ್ರಾಪ್ತೆಯಾಗಿದ್ದ ಹಿನ್ನೆಲೆ ಮದುವೆಗೆ ಪೋಷಕರು ನಿರಾಕರಿಸಿದ್ದರು. ಆದ್ರೆ ಯುವಕನ ಪೋಷಕರು ಮದುವೆ ಮಾಡಿಕೊಡದಿದ್ದರೆ ಪರಿಣಾಮವನ್ನು ಎದುರಿಸುತ್ತೀರಿ ಎಂದು ಅಪ್ರಾಪ್ತೆ ಪೋಷಕರಿಗೆ ಎಚ್ಚರಿಕೆ ನೀಡಿ ಹೋಗಿದ್ದರು.
ಇದಾದ ಕಲವು ದಿನಗಳ ನಂತರ ಅಂದ್ರೆ ಫೆಬ್ರವರಿ 17ರಂದು ಅಪ್ರಾಪ್ತೆ ನಾಪತ್ತೆಯಾಗಿದ್ದಾಳೆ. ಬಾಲಕಿಗಾಗಿ ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಆದ್ರೆ ಪೋಷಕರು ಎಷ್ಟೇ ಹುಡುಕಿದರೂ ಬಾಲಕಿ ಮಾತ್ರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದ ಯುವಕನ ಪೋಷಕರ ಮೇಲೆ ಅನುಮಾನ ವ್ಯಕ್ತವಾಗಿದೆ. ಯುವಕನ ಮನೆಯಲ್ಲಿ ಯುವತಿಯನ್ನು ಇಟ್ಟುಕೊಂಡಿದ್ದಾರೆ ಎಂದು ಪೋಷಕರು ಶಂಕಿಸಿದ್ದಾರೆ. ಸದ್ಯ 15 ವರ್ಷದ ಅಪ್ರಾಪ್ತೆಯನ್ನ ಅಪಹರಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಪೋಷಕರು ದೂರು ದಾಖಲಿಸಿದ್ದಾರೆ.