ಮುಂಬೈ: ನಾವು ಎಲ್ಲಿಯೋ ನಡೆದು ಹೋಗುತ್ತಿರುತ್ತೇವೆ. ನಮ್ಮ ಮೇಲೆ ಎರಗಿ ಬರುವ ಸಾವನ್ನು ದೇವರ ರೂಪದಂತೆ ಬಂದು ಇನ್ಯಾರೋ ತಪ್ಪಿಸುತ್ತಾರೆ. ಮುಂಬೈನಲ್ಲೂ ಅದೇ ರೀತಿ ಆಗಿದೆ. ರೈಲಿನಿಂದ ಕೆಳಗೆ ಬೀಳುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಸಂರಕ್ಷಣಾ ಪಡೆಯ ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ರೈಲ್ವೆ ಸಂರಕ್ಷಣಾ ಪಡೆ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಮಧ್ಯಾಹ್ನ 3:44ರ ಸುಮಾರಿಗೆ ಪಾನ್ವೆಲ್ ನಿಲ್ದಾಣದಲ್ಲಿ ರೈಲ್ವೆ ಒಂದು ನಿಧಾನವಾಗಿ ಪ್ಲಾಟ್ಫಾರ್ಮ್ನಿಂದ ತೆರಳುತ್ತಿತ್ತು. ರೈಲು ನಿಂತಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವ ಚಲಿಸುತ್ತಿದ್ದಾಗಲೇ ಅದನ್ನು ಏರಲು ತೆರಳಿದ್ದ. ಈ ವೇಳೆ ಬೀಳುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಒಂದೊಮ್ಮೆ ಆತ ರೈಲಿನಿಂದ ಬಿದ್ದಿದ್ದರೆ ಟ್ರ್ಯಾಕ್ ಕೆಳಗಡೆ ಬಿದ್ದು ಮೃತಪಡುವ ಸಾಧ್ಯತೆ ಇತ್ತು.
#WATCH | Maharashtra: Railway Protection Force personnel stopped a differently-abled man from boarding a moving train at Panvel station, yesterday.
(Video Source: RPF) pic.twitter.com/WPGWFa9ICQ
— ANI (@ANI) February 6, 2021
ವೈರಲ್ ಆದ ವಿಡಿಯೋ..
Budget 2021 | ಅಪೂರ್ಣ ರೈಲ್ವೆ ಯೋಜನೆಗಳು ಹಲವು, ಇನ್ನೆಷ್ಟು ವರ್ಷ ಕಾಯಬೇಕು ಸ್ವಾಮಿ?