ಪ್ರಾಯಶ್ಚಿತ್ತ ಉತ್ಸವ ಮಾಡಿದ ಬಳಿಕವೇ ವೈರಮುಡಿ ಉತ್ಸವ ಮಾಡಲು ಮಂಡ್ಯ ಜಿಲ್ಲಾಡಳಿತ ನಿರ್ಧಾರ

|

Updated on: Mar 15, 2021 | 4:11 PM

ಪುರಾತನ ಕಾಲದಿಂದಲೂ ವೈರಮುಡಿ ಉತ್ಸವ ಆಚರಿಸಲಾಗ್ತಿದೆ. ಕಳೆದ ಬಾರಿ ವೈರಮುಡಿ ಉತ್ಸವವನ್ನು ಆಚರಿಸದ ಹಿನ್ನೆಲೆಯಲ್ಲಿ ಈ ಬಾರಿ ಕಳಸ ಪೂಜೆ ಸೇರಿ 3 ದಿನಗಳ ಕಾಲ ಪ್ರಾಯಶ್ಚಿತ್ತ ಉತ್ಸವ ಮಾಡಲಾಗುತ್ತೆ. ಈ ಬಗ್ಗೆ ದೇವಾಲಯದ ಕೈಪಿಡಿಯಲ್ಲೇ ಉಲ್ಲೇಖಿಸಲಾಗಿದೆ.

ಪ್ರಾಯಶ್ಚಿತ್ತ ಉತ್ಸವ ಮಾಡಿದ ಬಳಿಕವೇ ವೈರಮುಡಿ ಉತ್ಸವ ಮಾಡಲು ಮಂಡ್ಯ ಜಿಲ್ಲಾಡಳಿತ ನಿರ್ಧಾರ
ವೈರಮುಡಿ ಬ್ರಹ್ಮೋತ್ಸವದ ಸಂಗ್ರಹ ಚಿತ್ರ
Follow us on

ಮಂಡ್ಯ: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ವೈರಮುಡಿ ಉತ್ಸವ ಮಾಡಿಲ್ಲ. ಹೀಗಾಗಿ ಈ ಬಾರಿ 3 ದಿನಗಳ ಕಾಲ ಪ್ರಾಯಶ್ಚಿತ್ತ ಉತ್ಸವ ಮಾಡಿದ ಬಳಿಕವೇ ವೈರಮುಡಿ ಉತ್ಸವ ಮಾಡುತ್ತೇವೆ ಎಂದು ಮಂಡ್ಯದಲ್ಲಿ‌ ಪಾಂಡವಪುರ ಎಸಿ ಶಿವಾನಂದಮೂರ್ತಿ ತಿಳಿಸಿದ್ದಾರೆ.

ಪುರಾತನ ಕಾಲದಿಂದಲೂ ವೈರಮುಡಿ ಉತ್ಸವ ಆಚರಿಸಲಾಗ್ತಿದೆ. ಕಳೆದ ಬಾರಿ ವೈರಮುಡಿ ಉತ್ಸವವನ್ನು ಆಚರಿಸದ ಹಿನ್ನೆಲೆಯಲ್ಲಿ ಈ ಬಾರಿ ಕಳಸ ಪೂಜೆ ಸೇರಿ 3 ದಿನಗಳ ಕಾಲ ಪ್ರಾಯಶ್ಚಿತ್ತ ಉತ್ಸವ ಮಾಡಲಾಗುತ್ತೆ. ಈ ಬಗ್ಗೆ ದೇವಾಲಯದ ಕೈಪಿಡಿಯಲ್ಲೇ ಉಲ್ಲೇಖಿಸಲಾಗಿದೆ. ಅದರ ಪ್ರಕಾರವೇ ನಾವು ಪ್ರಾಯಶ್ಚಿತ್ತ ಉತ್ಸವ ಮಾಡುತ್ತೇವೆ ಎಂದು ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಹೇಳಿದ್ದಾರೆ. ಇನ್ನು ಇದೇ ವೇಳೆ ಅವರು ಪ್ರಾಯಶ್ಚಿತ್ತ ಉತ್ಸವ ಬಳಿಕ ಸರಳವಾಗಿ ವೈರಮುಡಿ ಉತ್ಸವ ಆಚರಣೆ ಮಾಡಲಾಗುತ್ತೆ. ಉತ್ಸವಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗುವುದು. ಹೊರಗಿನವರು ವೈರಮುಡಿ ಉತ್ಸವಕ್ಕೆ ಬರದಂತೆ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ವೈರಮುಡಿ ಬ್ರಹ್ಮೋತ್ಸವ ನಡೆಸಲು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಮಾರ್ಚ್19ರಿಂದ ಬ್ರಹ್ಮೋತ್ಸವ ಜಾತ್ರೆ ಆರಂಭವಾಗಲಿದೆ. ಹಾಗೂ ಮಾರ್ಚ್ 24ರಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ನಡೆಯಲಿದೆ. ಈ ಬಾರಿ ದೇವಾಲಯದ ಒಳಗೆ 100 ಜನರಿಗೆ ಅವಕಾಶ ನೀಡಲಾಗುತ್ತೆ ಹಾಗೂ ದೇಗುಲದ ಹೊರಭಾಗದಲ್ಲಿ 2,000 ಜನರಿಗೆ ಅವಕಾಶ ನೀಡಲಾಗುತ್ತೆ.

ಉತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸೀಲ್ ಹಾಕಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಹಾಗೂ ಸೀಲ್ ಇದ್ದವರಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ನೀಡಲಾಗುತ್ತೆ. ಉತ್ಸವಕ್ಕೆ ಸ್ಥಳೀಯರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು ಹೊರ ರಾಜ್ಯ, ಜಿಲ್ಲೆಯಿಂದ ಬರುವವರಿಗೆ ಅವಕಾಶವಿಲ್ಲ. ಹಾಗೂ ಕಡ್ಡಾಯವಾಗಿ ಕೊವಿಡ್ ಟೆಸ್ಟ್ ಮಾಡಿಸುವವರು ಮಾತ್ರ ಪಾಲ್ಗೊಳ್ಳಬೇಕು. ಈ ಬಾರಿ ಮಧ್ಯರಾತ್ರಿ 12 ಗಂಟೆಯವರೆ ಮಾತ್ರ ವೈರಮುಡಿ ಉತ್ಸವ ನಡೆಯಲಿದೆ.

ಇದನ್ನೂ ಓದಿ: Ratha Saptami 2021: ರಥ ಸಪ್ತಮಿ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿ, ಮೇಲುಕೋಟೆಗೆ ಸುವರ್ಣ ರಥ ಸಮರ್ಪಿಸಿದ ಮಧುಸೂದನ್