ಗಣೇಶನನ್ನ ಪ್ರತಿಷ್ಠಾಪಿಸುವ ಬದಲು ಸೋಂಕಿತರ ಚಿಕಿತ್ಸೆಗೆ ನೆರವಾದ ವಿನಾಯಕನ ಭಕ್ತರು

ಮಂಡ್ಯ: ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಬದಲು ಬಂದ ಹಣದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ಪರಿಕರಗಳನ್ನು ಖರೀದಿಸಿ, ಆಸ್ಪತ್ರೆಗೆ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಂದಿಗೌಡ ಲೇಔಟ್​ನ ಮಹಾಗಣಪತಿ ಉತ್ಸವ ಸಮಿತಿಯವರು ಈ ಕೆಲಸ ಮಾಡಿದ್ದು ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಮೂರು ದಶಕಗಳಿಂದ ಬಂದಿಗೌಡ ಬಡಾವಣೆಯಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿಯಿಂದ ರಾಜ್ಯದ ವೈದ್ಯಕೀಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಅರಿತ […]

ಗಣೇಶನನ್ನ ಪ್ರತಿಷ್ಠಾಪಿಸುವ ಬದಲು ಸೋಂಕಿತರ ಚಿಕಿತ್ಸೆಗೆ ನೆರವಾದ ವಿನಾಯಕನ ಭಕ್ತರು
Edited By:

Updated on: Aug 22, 2020 | 6:02 PM

ಮಂಡ್ಯ: ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಬದಲು ಬಂದ ಹಣದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ಪರಿಕರಗಳನ್ನು ಖರೀದಿಸಿ, ಆಸ್ಪತ್ರೆಗೆ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬಂದಿಗೌಡ ಲೇಔಟ್​ನ ಮಹಾಗಣಪತಿ ಉತ್ಸವ ಸಮಿತಿಯವರು ಈ ಕೆಲಸ ಮಾಡಿದ್ದು ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಮೂರು ದಶಕಗಳಿಂದ ಬಂದಿಗೌಡ ಬಡಾವಣೆಯಲ್ಲಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿಯಿಂದ ರಾಜ್ಯದ ವೈದ್ಯಕೀಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಾಗಿದೆ.

ಈ ಸಮಸ್ಯೆಯನ್ನು ಅರಿತ ಮಹಾಗಣಪತಿ ಉತ್ಸವ ಸಮಿತಿ ಸದಸ್ಯರು ಗಣೇಶನ ಉತ್ಸವಕ್ಕೆ ಖರ್ಚು ಮಾಡಬೇಕಿದ್ದ ಹಣದಲ್ಲಿ 50 ಮಂಚ, 50 ಫ್ಯಾನ್ ಹಾಗೂ 2 ವಾಟರ್ ಪ್ಯೂರಿಫೈಯರ್​​ಗಳನ್ನು ಖರೀದಿಸಿ ಜಿಲ್ಲೆಯ ಮಿಮ್ಸ್ ಸರ್ಕಾರಿ ಆಸ್ಪತ್ರೆಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.