ಹಿಜಾಬ್ ಧರಿಸಲು ಅನುಮತಿ ನೀಡಿ ಅಂತ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ: ಮಂಗಳೂರು ವಿದ್ಯಾರ್ಥಿನಿಯರು
ಆಮೇಲೆ ಅವರು ಕಾಲೇಜಿನ ಪತ್ರಿ ಹೆಚ್ ಒ ಡಿ ಮನವಿಗಳನ್ನು ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ಮನವಿಗಳನ್ನು ಸ್ವೀಕರಿಸಿದ್ದಾರೆ ಇನ್ನೂ ಕೆಲವರು ಸ್ವೀಕರಿಸಿಲ್ಲ. ಕಾಲೇಜಿನ ಪ್ರಿನ್ಸಿಪಾಲರು ಮಧ್ಯಪ್ರವೇಶಿಸಿ ಮನವಿಯನ್ನು ಯಾರೂ ಸ್ವೀಕರಿಸಕೂಡದು ಅಂತ ಹೇಳಿದರಂತೆ.
ಮಂಗಳೂರು ವಿವಿ ಘಟಕ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ (hijab) ಹೋರಾಡುವುದನ್ನು ಮುಂದುವರಿಸಿದ್ದಾರೆ. ಇದೇ ಸಂಬಂಧವಾಗಿ ವಿದ್ಯಾರ್ಥಿನಿಯರು ಶುಕ್ರವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ (Press Club) ಸುದ್ದಿಗೋಷ್ಟಿಯೊಂದನ್ನು ನಡೆಸಿದರು. ವಿದ್ಯಾರ್ಥಿನಿಯರ ಪರವಾಗಿ ಗೌಸಿಯಾ (Ghousiya) ಹೆಸರಿನ ವಿದ್ಯಾರ್ಥಿನಿ ಮಾತಾಡಿದರು. ಅವರು ಹೇಳುವ ಪ್ರಕಾರ ಕಾಲೇಜು ಹಿಜಾಬ್ ಕ್ಯಾಂಪಸ್ ನಲ್ಲಿ ಅವರಿಗೆ ಹಿಜಾಬ್ ಧರಿಸಲು ಕೆಲವು ಉಪನ್ಯಾಸಕರು ಅನುಮತಿ ನೀಡುತ್ತಿದ್ದಾರೆ ಕೆಲವರು ನೀಡುತ್ತಿಲ್ಲ. ತರಗತಿಗಳಲ್ಲ್ಲಿ ಕೂರಲು ಅನುಮತಿ ನೀಡದ ಸಂದರ್ಭದಲ್ಲಿ ಅವರು ಲೈಬ್ರರಿ ಇಲ್ಲವೇ ಲೇಡೀಸ್ ರೂಮಿಗೆ ಹೋಗಿ ಕೂರುತ್ತಾರಂತೆ.
ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕಾಲೇಜಿಗೆ ನಿರ್ದೇಶನ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದಾಗ ಅವರು ಎರಡು ದಿನಗಳ ನಂತರ ಇದು ಕಾಲೇಜಿನ ಸಿಂಡಿಕೇಟ್ ತೆಗೆದುಕೊಂಡಿರುವ ನಿರ್ಣಯವಾಗಿರುವುದರಿಂದ ತಾವು ಅದನ್ನು ಪ್ರಶ್ನಿಸಲಾಗದು ಅಂತ ಹೇಳಿದ್ದಾರಂತೆ.
ಆಮೇಲೆ ಅವರು ಕಾಲೇಜಿನ ಪತ್ರಿ ಹೆಚ್ ಒ ಡಿ ಮನವಿಗಳನ್ನು ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ಮನವಿಗಳನ್ನು ಸ್ವೀಕರಿಸಿದ್ದಾರೆ ಇನ್ನೂ ಕೆಲವರು ಸ್ವೀಕರಿಸಿಲ್ಲ. ಕಾಲೇಜಿನ ಪ್ರಿನ್ಸಿಪಾಲರು ಮಧ್ಯಪ್ರವೇಶಿಸಿ ಮನವಿಯನ್ನು ಯಾರೂ ಸ್ವೀಕರಿಸಕೂಡದು ಅಂತ ಹೇಳಿದರಂತೆ. ಹಿಜಾಬ್ ಧರಿಸದೆ ಬರೋದಾದ್ರೆ ಬನ್ನಿ ಇಲ್ಲದಿದ್ದರೆ ಕ್ಯಾಂಪಸ್ ಪ್ರವೇಶಿಸುವ ಪ್ರಯತ್ನ ಮಾಡಬೇಡಿ ಅಂತ ಪ್ರಾಂಶುಪಾಲರು ಹೇಳಿದ್ದಾರೆ ಅಂತ ಗೌಸಿಯಾ ಹೇಳಿದರು.
ಏತನ್ಮಧ್ಯೆ, ಹಿಂದೂ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸಲ್ಲಿ ಅವರನ್ನು ಛೇಡಿಸಲು, ರೇಗಿಸಲು, ಪೀಡಿಸಲು ಆರಂಭಿಸಿದ್ದಾರಂತೆ. ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರ್ತೀವಿ ಅಂತ ಈ ಹುಡುಗಿಯರನ್ನು ಹೆದರಿಸಲು ಪ್ರಯತ್ನಿಸುತ್ತಾರಂತೆ. ಈ ಕಾಲೇಜಿನಲ್ಲಿ ಹಿಜಾಬ್ ಬಗ್ಗೆ ಮೊದಲ ಯಾವ ತಕರಾರೂ ಇರಲಿಲ್ಲ, ಅದು ಇತ್ತೀಚಿಗೆ ಶುರುವಾಗಿರುವ ವಿದ್ಯಮಾನ ಅಂತ ವಿದ್ಯಾರ್ಥಿನಿ ಗೌಸಿಯಾ ಹೇಳುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.