ಕಸದ ಬುಟ್ಟಿಯಲ್ಲಿ ಮಂಜು ಅಡಗಿಸಿಟ್ಟಿದ್ದೇನು?; ಕಳ್ಳ ಕೆಲಸದ ಬಗ್ಗೆ ಮನೆ ಮಂದಿಗೆ ಹೇಳೋರು ಯಾರು?

|

Updated on: Mar 19, 2021 | 8:32 PM

ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಸಮಯ ಸಿಕ್ಕಾಗೆಲ್ಲ ಬಿಗ್​ ಬಾಸ್​ ಮನೆಯಲ್ಲಿ ಇವರು ಹರಟೆ ಹೊಡೆಯುತ್ತಿರುತ್ತಾರೆ.

ಕಸದ ಬುಟ್ಟಿಯಲ್ಲಿ ಮಂಜು ಅಡಗಿಸಿಟ್ಟಿದ್ದೇನು?; ಕಳ್ಳ ಕೆಲಸದ ಬಗ್ಗೆ ಮನೆ ಮಂದಿಗೆ ಹೇಳೋರು ಯಾರು?
ಮಂಜು ಪಾವಗಡ
Follow us on

ಬಿಗ್​ ಬಾಸ್ ಮನೆಯಲ್ಲಿ ಹೊಸ ಹೊಸ ಡ್ರಾಮಾಗಳು ನಡೆಯುತ್ತಿವೆ. ಕ್ಯಾಮೆರಾ ಎದುರು ಒಂದು ರೀತಿ ಮಾತನಾಡುವ ಸ್ಪರ್ಧಿಗಳು, ಎಲ್ಲರ ಎದುರು ಮತ್ತೊಂದು ರೀತಿ ಮಾತನಾಡುತ್ತಾರೆ. ಬಿಗ್​ ಬಾಸ್​ ಮನೆಯ ಸ್ಪರ್ಧಿಗಳು ಕೆಲವೊಮ್ಮೆ ಕದ್ದು ಮುಚ್ಚಿ ಕಳ್ಳ ಕೆಲಸಗಳನ್ನು ಮಾಡಿದ ಉದಾಹರಣೆ ಇದೆ. ಈಗ ಇದೇ ರೀತಿಯ ಕೆಲಸವನ್ನು ಲ್ಯಾಗ್​ ಮಂಜು ಮಾಡಿದ್ದಾರೆ. ಅಷ್ಟೇ ಅಲ್ಲ, ಸೈಲೆಂಟ್​ ಆಗಿ ಅದನ್ನು ಮುಚ್ಚಿ ಹಾಕೋಕು ಕೂಡ ಪ್ರಯತ್ನ ಮಾಡಿದ್ದಾರೆ.

ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಬ್ಬರಿಗೊಬ್ಬರು ಜಗಳ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಸಮಯ ಸಿಕ್ಕಾಗೆಲ್ಲ ಬಿಗ್​ ಬಾಸ್​ ಮನೆಯಲ್ಲಿ ಇವರು ಹರಟೆ ಹೊಡೆಯುತ್ತಿರುತ್ತಾರೆ. ಇಂದು (ಮಾರ್ಚ್​ 19) ಕೂಡ ಹಾಗೆಯೇ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಹಾಗೂ ಮಂಜು ಮಾತನಾಡುತ್ತಿದ್ದರು. ಆಗ ಮಂಜು ಕಾಫಿ ಕಪ್​ ಇಡೋಕೆ ಹೋಗಿ ಕೆಳಕ್ಕೆ ಬೀಳಿಸಿದ್ದಾರೆ. ಆ ಕಪ್​ ಬಿದ್ದ ರಭಸಕ್ಕೆ ಒಡೆದೇ ಹೋಗಿದೆ. ಬಿಗ್​ ಬಾಸ್​ ಕೊಟ್ಟ ಕಪ್​ಅನ್ನು ಒಡೆದ ನಂತರ ಮಂಜುಗೆ ಅತೀವವಾಗಿ ಅಪರಾಧ ಮನೋಭಾವನೆ ಕಾಡಿದೆ.

ಕಪ್​ ಒಡೆದು ಹಾಕಿದ್ದಕ್ಕೆ ಸಾರಿ ಬಿಗ್​ ಬಾಸ್​. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಗ್​ ಬಾಸ್​ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ನಾನು ಬೇಕಂತಲೇ ಇದನ್ನು ಒಡೆದಿಲ್ಲ. ಮಿಸ್​ ಆಗಿ ಬಿದ್ದು ಹೋಗಿದೆ. ಯಾರಿಗೂ ಗೊತ್ತಾಗದಂತೆ ಇದನ್ನು ಬಚ್ಚಿಡುತ್ತೇನೆ. ಆಮೇಲೆ ಸ್ಪರ್ಧಿಗಳ ಬಳಿ ನನ್ನ ಕಪ್​ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಘಟನೆಯನ್ನು ನೋಡಿ ದಿವ್ಯಾ ನಕ್ಕಿದ್ದಾರೆ.

ಒಡೆದ ಕಪ್​ಅನ್ನು ಮಂಜು ಕಸದ ಬುಟ್ಟಿ ಒಳಗೆ ಬಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ಯಾರಿಗೂ ಕಾಣಬಾರದು ಎಂದು ಅದರ ಮೇಲೆ ಒಂದೆರಡು ಟಿಶ್ಯು ಪೇಪರ್​ಗಳನ್ನು ಮುಚ್ಚಿದ್ದಾರೆ. ಮಂಜು ಮಾಡಿದ ಕಳ್ಳ ಕೆಲಸದ ಬಗ್ಗೆ ಮನೆ ಮಂದಿಗೆ ಹೇಳೋರ್ಯಾರು ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​