ಮಾರ್ಕಂಡೇಯ ನದಿ ಪ್ರವಾಹಕ್ಕೆ 5 ಸಾವಿರ ಹೆಕ್ಟೇರ್ ಜಲಾವೃತ, ಕಬ್ಬು ಮತ್ತು ಭತ್ತ ಹಾನಿ
ಬೆಳಗಾವಿ: ಮಾರ್ಕಂಡೇಯ ನದಿ ಪ್ರವಾಹಕ್ಕೆ ಮತ್ತೆ ಬೆಳೆ ಕಳೆದುಕೊಂಡು ಬೆಳಗಾವಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ನದಿ ಪಾತ್ರದ ಐದು ಸಾವಿರ ಹೆಕ್ಟೇರ್ಗೂ ಅಧಿಕ ಬೆಳೆ ಜಲಾವೃತಗೊಂಡಿದೆ. ಅತೀ ಹೆಚ್ಚು ಕಬ್ಬು ಮತ್ತು ಭತ್ತದ ಬೆಳೆ ಹಾನಿಯಾಗಿದೆ. ಕಳೆದ ವರ್ಷವೂ ಇದೇ ಭಾಗದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಕೂಡ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಬೆಳಗಾವಿ ತಾಲೂಕಿನ ಅಂಬೇವಾಡಿ, ಕಡೋಲಿ, ಯಳ್ಳೂರ, ಹಲಗಾ ಗ್ರಾಮದ ಜಮೀನುಗಳು ಹೆಚ್ಚು ಹಾನಿಗೊಳಗಾಗಿವೆ. ಬೆಳೆ ಸರ್ವೆ ಮಾಡಿಸಿ ಸೂಕ್ತ […]

ಬೆಳಗಾವಿ: ಮಾರ್ಕಂಡೇಯ ನದಿ ಪ್ರವಾಹಕ್ಕೆ ಮತ್ತೆ ಬೆಳೆ ಕಳೆದುಕೊಂಡು ಬೆಳಗಾವಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ನದಿ ಪಾತ್ರದ ಐದು ಸಾವಿರ ಹೆಕ್ಟೇರ್ಗೂ ಅಧಿಕ ಬೆಳೆ ಜಲಾವೃತಗೊಂಡಿದೆ. ಅತೀ ಹೆಚ್ಚು ಕಬ್ಬು ಮತ್ತು ಭತ್ತದ ಬೆಳೆ ಹಾನಿಯಾಗಿದೆ.
ಕಳೆದ ವರ್ಷವೂ ಇದೇ ಭಾಗದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಕೂಡ ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಬೆಳಗಾವಿ ತಾಲೂಕಿನ ಅಂಬೇವಾಡಿ, ಕಡೋಲಿ, ಯಳ್ಳೂರ, ಹಲಗಾ ಗ್ರಾಮದ ಜಮೀನುಗಳು ಹೆಚ್ಚು ಹಾನಿಗೊಳಗಾಗಿವೆ. ಬೆಳೆ ಸರ್ವೆ ಮಾಡಿಸಿ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.