ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ತು ರಾಜ್ಯದ ಅಣೆಕಟ್ಟೆಗೆ ಹಾಕಿರೋ ಬೋರ್ಡ್.. ಎಲ್ಲಿ?
ವಿಜಯಪುರ: ಕೃಷ್ಣಾ ನದಿಯನ್ನ ಉತ್ತರ ಕರ್ನಾಟಕದ ಜೀವನಾಡಿ ಅಂತಾ ಕರೆಯಬಹುದು. ಇಂತಾ ಕೃಷ್ಣಾ ನದಿಗೆ ಅಡ್ಡಲಾಗಿ ಹಲವಾರು ಅಣೆಕಟ್ಟುಗಳನ್ನ ನಿರ್ಮಿಸಲಾಗಿದೆ. ಇದ್ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕಟ್ಟಲಾಗಿರೋ ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಪ್ರಮುಖ ಅಣೆಕಟ್ಟುಗಳಲ್ಲಿ ಒಂದು. 1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ ಈ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದ ಕಾರಣಕ್ಕೆ, ಅವರ ಹೆಸರನ್ನೇ ಈ ಅಣೆಕಟ್ಟೆಗೆ ಇಡಲಾಗಿದೆ. ಆದ್ರೆ, ಜನ ಮಾತ್ರ ಇದನ್ನ ಆಲಮಟ್ಟಿ ಡ್ಯಾಂ ಅಂತಲೇ ಕರೀತಾರೆ. […]

ವಿಜಯಪುರ: ಕೃಷ್ಣಾ ನದಿಯನ್ನ ಉತ್ತರ ಕರ್ನಾಟಕದ ಜೀವನಾಡಿ ಅಂತಾ ಕರೆಯಬಹುದು. ಇಂತಾ ಕೃಷ್ಣಾ ನದಿಗೆ ಅಡ್ಡಲಾಗಿ ಹಲವಾರು ಅಣೆಕಟ್ಟುಗಳನ್ನ ನಿರ್ಮಿಸಲಾಗಿದೆ. ಇದ್ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕಟ್ಟಲಾಗಿರೋ ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟು ಪ್ರಮುಖ ಅಣೆಕಟ್ಟುಗಳಲ್ಲಿ ಒಂದು. 1964 ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಪ್ರಧಾನಿಯಾಗಿದ್ದ ವೇಳೆ ಈ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದ ಕಾರಣಕ್ಕೆ, ಅವರ ಹೆಸರನ್ನೇ ಈ ಅಣೆಕಟ್ಟೆಗೆ ಇಡಲಾಗಿದೆ.
ಆದ್ರೆ, ಜನ ಮಾತ್ರ ಇದನ್ನ ಆಲಮಟ್ಟಿ ಡ್ಯಾಂ ಅಂತಲೇ ಕರೀತಾರೆ. ಹೀಗಾಗಿ, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಡ್ಯಾಂಗೆ ದೊಡ್ಡದಾಗಿ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಅಂತಾ ಬೋರ್ಡ್ ಹಾಕಿಸಲು, 2013ರಲ್ಲಿ ತೀರ್ಮಾನಿಸಿದ್ರು. ಈ ಬೋರ್ಡ್ 588 ಸ್ಕ್ವೇರ್ ಮೀಟರ್ನಷ್ಟಿದೆ. 3 ಡಿ ಮೆಟಾಲಿಕ್ ತಂತ್ರಜ್ಞಾನದಿಂದ ಬೋರ್ಡ್ ತಯಾರಿಸಲಾಗಿದೆ. ಹೀಗೆ ತಯಾರಿಸಿರೋ ಬೋರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.
ಈ ಬೋರ್ಡ್ ಮೂಲಕ ಶಾಸ್ತ್ರೀಜಿ ಹೆಸರು, ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಲು ನೆರವಾಗುತ್ತಿದೆ. ಇಲ್ಲಿಗೆ ಆಗಮಿಸೋ ಪ್ರವಾಸಿಗರು ಬೃಹದಾಕಾರದ ಬೋರ್ಡ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡ್ಯಾಂ ಕ್ರಸ್ಟ್ಗೇಟ್ಗಳಿಗೆ ಬಣ್ಣ ಬಣ್ಣದ ಲೈಟಿಂಗ್ ಅಳವಡಿಸಲಾಗಿದೆ. ಇದೂ ಸಹ ಪ್ರವಾಸಿಗರನ್ನು ಸೆಳೆಯುತ್ತಿದೆ.
ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ ಹಾಕಿರುವ ಬೋರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿರೋದು ವಿಜಯಪುರದ ಹಿರಿಮೆಗೆ ಮತ್ತೊಂದು ಗರಿ ಸೇರಿದಂತಾಗಿದೆ. ಜೊತೆಗೆ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಹೆಸರನ್ನ ಉಳಿಸೋ ಕಾರ್ಯವನ್ನ ಕೆಬಿಜೆಎನ್ಎಲ್ ಅಧಿಕಾರಿಗಳು ಮಾಡಿರೋದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.