AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೊಜಿಲ್ಲಾ ಸುರಂಗ ಮಾರ್ಗ ನಿರ್ಮಿಸುವ ಬೃಹತ್ ಯೋಜನೆ MEIL ಹೆಗಲಿಗೆ!

ಮೆಘಾ ಇಂಜಿನೀಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಟ್ ಸಂಸ್ಥೆ (MEIL) ಹಿಮಾಲಯದ ಜಮ್ಮು ಕಾಶ್ಮೀರ– ಲಡಾಕ್ ಪ್ರಾಂತ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಜೊಜಿಲ್ಲಾ ಸುರಂಗ ಮಾರ್ಗ ನಿರ್ಮಿಸುವ ಬೃಹತ್ ಯೋಜನೆಯನ್ನು ಬಿಡ್​ನಲ್ಲಿ ಅತಿ ಕಡಿಮೆ ಮೊತ್ತವನ್ನು ನಮೂದಿಸುವ ಮೂಲಕ ತನ್ನದಾಗಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು (ಎನ್ ಹೆಚ್ ಐ ಡಿ ಸಿ ಎಲ್​)ಶುಕ್ರವಾರದಂದು ಬಿಡ್​ಗಳನ್ನು ಓಪನ್ ಮಾಡಿತು. ಈ ಯೋಜನೆಯನ್ನು,ಸುಮಾರು 33 ಕಿಲೊಮೀಟರ್ ಉದ್ದದ ಎರಡು ವಿಭಾಗಳಲ್ಲಿ ವಿಂಗಡಿಸಿ ಎರಡು ಹಂತಗಳಲ್ಲಿ ನಿರ್ಮಿಸಬೇಕಿದೆ.ಇದರ ಮೊದಲ ಹಂತ […]

ಜೊಜಿಲ್ಲಾ ಸುರಂಗ ಮಾರ್ಗ ನಿರ್ಮಿಸುವ ಬೃಹತ್ ಯೋಜನೆ MEIL ಹೆಗಲಿಗೆ!
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Aug 21, 2020 | 8:59 PM

ಮೆಘಾ ಇಂಜಿನೀಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಟ್ ಸಂಸ್ಥೆ (MEIL) ಹಿಮಾಲಯದ ಜಮ್ಮು ಕಾಶ್ಮೀರಲಡಾಕ್ ಪ್ರಾಂತ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಜೊಜಿಲ್ಲಾ ಸುರಂಗ ಮಾರ್ಗ ನಿರ್ಮಿಸುವ ಬೃಹತ್ ಯೋಜನೆಯನ್ನು ಬಿಡ್​ನಲ್ಲಿ ಅತಿ ಕಡಿಮೆ ಮೊತ್ತವನ್ನು ನಮೂದಿಸುವ ಮೂಲಕ ತನ್ನದಾಗಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು (ಎನ್ ಹೆಚ್ ಐ ಡಿ ಸಿ ಎಲ್​)ಶುಕ್ರವಾರದಂದು ಬಿಡ್​ಗಳನ್ನು ಓಪನ್ ಮಾಡಿತು.

ಈ ಯೋಜನೆಯನ್ನು,ಸುಮಾರು 33 ಕಿಲೊಮೀಟರ್ ಉದ್ದದ ಎರಡು ವಿಭಾಗಳಲ್ಲಿ ವಿಂಗಡಿಸಿ ಎರಡು ಹಂತಗಳಲ್ಲಿ ನಿರ್ಮಿಸಬೇಕಿದೆ.ಇದರ ಮೊದಲ ಹಂತ 18.59 ಕಿ.ಮೀ ಉದ್ದದ ರಸ್ತೆ ನಿರ್ಮಿಸುವುದಾಗಿದೆ.ಎರಡನೇ ಹಂತದಲ್ಲಿ 14.14 ಕಿ.ಮೀನಷ್ಟು ಜೊಜಿಲ್ಲಾ ಸುರಂಗ ಮಾರ್ಗವನ್ನು ಕುದುರೆ ಲಾಳದ ಆಕಾರದಲ್ಲಿ ಕಟ್ಟಬೇಕು.ಎರಡು ಲೇನ್​ಗಳಲ್ಲಿ ನಿರ್ಮಿಸಲಾಗುವ ರಸ್ತೆಗಳು 9.5 ಮೀಟರ್ ಅಗಲ ಹಾಗೂ 7.57 ಮೀಟರ್ ಎತ್ತರವಿರಬೇಕು.ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸದರಿ ಯೋಜನೆಯನ್ನು ಕ್ರಿಯಾತ್ಮಕವಾಗಿ ನಿರ್ಮಿಸುವ ಸವಾಲು ಎಮ್ಇಐಎಲ್ ಸಂಸ್ಥೆಯ ಮುಂದಿದೆ.

ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸುರಂಗಮಾರ್ಗ ಯೋಜನೆಯ ಟೆಂಡರ್ ಕರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಸ್ವಾಗತಾರ್ಹ ವಿಷಯವೇ.ಮೂಲಗಳ ಪ್ರಕಾರ MEIL,ಉಳಿದೆಲ್ಲ ಕಂಪನಿಗಳಿಗಿಂತ ಕಡಿಮೆ ಅಂದರೆ ರೂ.4509.50 ಕೋಟಿಗಳಿಗೆ ಬಿಡ್ ಸಲ್ಲಿಸಿತು.ಎನ್ ಹೆಚ್ ಐ ಡಿ ಸಿ ಎಲ್​ಗೆ ಜುಲೈ 30 ರಂದು ಮೂರು ಕಂಪನಿಗಳು ಬಿಡ್ ಸಲ್ಲಿಸಿದ್ದವು.

ಲೆಹ್​ನಿಂದ ಲಡಾಕ್​ವರೆಗಿನ ರಸ್ತೆ ವಾಹನಗಳ ಓಡಾಟಕ್ಕೆ ಸಮರ್ಪಕವಾಗಿಲ್ಲ.ಹಾಗೆಯೇ ಶ್ರೀನಗರಲಡಾಕ್ ನಡುವಿನ ರಸ್ತೆ ವಿಶೇಷವಾಗಿ ಚಳಗಾಲದಲ್ಲಿ 6 ತಿಂಗಳು ಕಾಲ ಮುಚ್ಚಲ್ಪಟ್ಟಿರುತ್ತದೆ. ಸೇನೆಗೆ ಸೇರಿದ ವಾಹನಗಳು ಸಹ ಈ ರಸ್ತೆಗಳಲ್ಲಿ ಮುಂದೆ ಸಾಗವು.ಹಾಗಾಗಿ ಪರ್ಯಾಯ ರಸ್ತೆಗಳನ್ನು ಬಳಸುವುದು ಅನಿವಾರ್ಯವಾಗಿತ್ತು ಮತ್ತು ಅದು ತುಂಬಾ ದುಬಾರಿಯಾಗಿ ಪರಿಣಮಿಸಿತ್ತು.ಇಂಥ ಪರಿಸ್ಥಿತಿಯ ಹಿನ್ನೆಲೆಯಲ್ಲೇ ಬಹಳ ಸಮಯದ ಹಿಂದೆ ಸೊನಮಾರ್ಗ್ ನಿಂದ ಲಡಾಕ್ ಹಾಗೂ ಲೇಹ್​ಗೆ ಕಾರ್ಗಿಲ್ ಮುಖಾಂತರ 

ಸುರಂಗಮಾರ್ಗವನ್ನು ನಿರ್ಮಿಸುವ ಯೋಜನೆ ಪ್ರಸ್ತಾಪಿಸಲಾಯಿತು.

MEIL ಈ ಸುರಂಗಮಾರ್ಗವನ್ನು ಸೊನ್​ಮಾರ್ಗ್ಕಾರ್ಗಿಲ್ ಮಧ್ಯೆ ಜೆಡ್ಮೊರ್​ನಿಂದ ಜೊಜಿಲ್ಲಾವರೆಗೆ ಕಟ್ಟಲಿದ್ದು ಇದೊಂದು ಸಂಕೀರ್ಣ ಸ್ವರೂಪದ ನಿರ್ಮಾಣ ಕಾರ್ಯವೆನಿಸಿಕೊಳ್ಳಲಿದೆ.ನಿರ್ಮಾಣ ಹಂತದಲ್ಲಿ ಯೋಜನೆಯು ಅನೇಕ ಸಮಸ್ಯೆಗಳನ್ನು ಹಲವಾರು ಅಡೆತಡೆಗಳನ್ನು ಮತ್ತು ನೈಸರ್ಗಿಕ ವೈರುಧ್ಯಗಳನ್ನು ಎದುರಿಸಲಿದೆ.ಯೋಜನೆಯ ಭಾಗವಾಗಿ,ಗಡಿ ರಸ್ತೆ ಸಂಸ್ಥೆಯು(ಬಿಆರ್​ಒ)ಕಾಶ್ಮೀರ ಮತ್ತು ಲಡಾಕ್ ನಡುವಿನ ರಸ್ತೆಯನ್ನು ದುರಸ್ತಿಗೊಳಿಸಿ ಪ್ರಯಾಣದ ಸೌಕರ್ಯಗಳನ್ನು ಉತ್ತಮಗೊಳಿಸಲಿದೆ.ಈ ಯೋಜನೆಯ ಅಂಗವಾಗಿ ಶ್ರೀನಗರಬಲ್ತಾಲ ನಡುವೆ ಸುರಂಗಮಾರ್ಗವನ್ನು ಸಹ ಕಟ್ಟಲಾಗುತ್ತದೆ.ಇದು ಅಮರನಾಥ ಯಾತ್ರಿಗಳಿಗೆ ತುಂಬಾ ಅನುಕೂಲವಾಗಲಿದೆ.

ಇಡೀ ಯೋಜನೆಯು 18.50 ಕಿ.ಮೀ ಉದ್ದದ ರಸ್ತೆ ಹಾಗೂ 14.15 ಕಿ.ಮೀ ಉದ್ದದ ಸುರಂಗಮಾರ್ಗವನ್ನು ಒಳಗೊಂಡಿರುತ್ತದೆ.

Published On - 8:33 pm, Fri, 21 August 20

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ