ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ರಾಜೇಂದ್ರ ಬಲಿ

ಕೊಡಗು: ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಕ್ಯಾಂಪ್​ನ ಸಾಕಾನೆ ರಾಜೇಂದ್ರ ಕಾಳಗದಲ್ಲಿ ಸಾವನ್ನಪ್ಪಿದೆ. ರಾತ್ರಿ ಆಹಾರ ನೀಡಿ ರಾಜೇಂದ್ರನನ್ನು ಅರಣ್ಯಕ್ಕೆ ಮೇಯಲು ಬಿಡಲಾಗಿತ್ತು. ಈ ವೇಳೆ ಕಾಡಾನೆ ಜೊತೆ ಸಾಕಾನೆ ರಾಜೇಂದ್ರ ಕಾದಾಟ ನಡೆಸಿದೆ ಎಂದು ಹೇಳಲಾಗಿದೆ. ರಾಜೇಂದ್ರನ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದಿರುವ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ರಾಜೇಂದ್ರನನ್ನು 2006ರಲ್ಲಿ ಶಿಬಿರಕ್ಕೆ ಕರೆತರಲಾಗಿತ್ತು.

ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ರಾಜೇಂದ್ರ ಬಲಿ
Edited By:

Updated on: Oct 16, 2020 | 12:09 PM

ಕೊಡಗು: ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಾನೆ ದಾಳಿಗೆ ಸಾಕಾನೆ ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಕ್ಯಾಂಪ್​ನ ಸಾಕಾನೆ ರಾಜೇಂದ್ರ ಕಾಳಗದಲ್ಲಿ ಸಾವನ್ನಪ್ಪಿದೆ.

ರಾತ್ರಿ ಆಹಾರ ನೀಡಿ ರಾಜೇಂದ್ರನನ್ನು ಅರಣ್ಯಕ್ಕೆ ಮೇಯಲು ಬಿಡಲಾಗಿತ್ತು. ಈ ವೇಳೆ ಕಾಡಾನೆ ಜೊತೆ ಸಾಕಾನೆ ರಾಜೇಂದ್ರ ಕಾದಾಟ ನಡೆಸಿದೆ ಎಂದು ಹೇಳಲಾಗಿದೆ. ರಾಜೇಂದ್ರನ ಹೊಟ್ಟೆ ಭಾಗಕ್ಕೆ ಕಾಡಾನೆ ತಿವಿದಿರುವ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ರಾಜೇಂದ್ರನನ್ನು 2006ರಲ್ಲಿ ಶಿಬಿರಕ್ಕೆ ಕರೆತರಲಾಗಿತ್ತು.