ಮಳೆಗೆ ಉತ್ತರ ಕರ್ನಾಟಕ ತತ್ತರ: ಆದ್ರೂ ತುಂಬದ ‘ಯಶೋಮಾರ್ಗ’ದ ತಲ್ಲೂರ ಕೆರೆ!
ಕೊಪ್ಪಳ: ಸ್ಯಾಂಡಲ್ವುಡ್ ನಟ ಯಶ್ ಆರಂಭಿಸಿದ ಯಶೋಮಾರ್ಗ ಪ್ರತಿಷ್ಠಾಣದ ಅಡಿಯಲ್ಲಿ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು. ಅದರೆ, ದುರದೃಷ್ಟವಶಾತ್, ವಾಡಿಕೆಗಿಂತ ಹೆಚ್ಚು ಮಳೆಯಾದರೂ ತಲ್ಲೂರ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಕೆರೆಯ ಸಮೀಪದಲ್ಲೇ ನಡೆಯುತ್ತಿರುವ ರೈಲ್ವೆ ಬ್ರಿಡ್ಜ್ ಕಾಮಗಾರಿಯಿಂದಾಗಿ ಕೆರೆಗೆ ನೀರು ಹರಿದು ಬರುತ್ತಿಲ್ಲ ಎಂದು ತಿಳಿದುಬಂದಿದೆ. ಕೆರೆಗೆ ಬರಬೇಕಿದ್ದ ನೀರಿನ ಹಾದಿಯನ್ನು ಬೇರೆಡೆ ತಿರುಗಿಸಲಾದ ಹಿನ್ನೆಲೆಯಲ್ಲಿ ತಲ್ಲೂರ ಕೆರೆಯ ನೀರಿನ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡಿದೆ. 2017 ರಲ್ಲಿ ಯಶೋಮಾರ್ಗ ಫೌಂಡೇಷನ್ […]
ಕೊಪ್ಪಳ: ಸ್ಯಾಂಡಲ್ವುಡ್ ನಟ ಯಶ್ ಆರಂಭಿಸಿದ ಯಶೋಮಾರ್ಗ ಪ್ರತಿಷ್ಠಾಣದ ಅಡಿಯಲ್ಲಿ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರ ಕೆರೆಯನ್ನು ಪುನಶ್ಚೇತನಗೊಳಿಸಲಾಗಿತ್ತು. ಅದರೆ, ದುರದೃಷ್ಟವಶಾತ್, ವಾಡಿಕೆಗಿಂತ ಹೆಚ್ಚು ಮಳೆಯಾದರೂ ತಲ್ಲೂರ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಕೆರೆಯ ಸಮೀಪದಲ್ಲೇ ನಡೆಯುತ್ತಿರುವ ರೈಲ್ವೆ ಬ್ರಿಡ್ಜ್ ಕಾಮಗಾರಿಯಿಂದಾಗಿ ಕೆರೆಗೆ ನೀರು ಹರಿದು ಬರುತ್ತಿಲ್ಲ ಎಂದು ತಿಳಿದುಬಂದಿದೆ. ಕೆರೆಗೆ ಬರಬೇಕಿದ್ದ ನೀರಿನ ಹಾದಿಯನ್ನು ಬೇರೆಡೆ ತಿರುಗಿಸಲಾದ ಹಿನ್ನೆಲೆಯಲ್ಲಿ ತಲ್ಲೂರ ಕೆರೆಯ ನೀರಿನ ಸಂಗ್ರಹದಲ್ಲಿ ಭಾರಿ ಇಳಿಕೆ ಕಂಡಿದೆ.
2017 ರಲ್ಲಿ ಯಶೋಮಾರ್ಗ ಫೌಂಡೇಷನ್ ಮೂಲಕ ನಟ ಯಶ್ ಕೆರೆಯಲ್ಲಿದ್ದ ಹೂಳು ತಗೆಸಿದ್ದರು. ಬಳಿಕ ಅದರ ಪುನಶ್ಚೇತನಕ್ಕೆ 4 ಕೋಟಿ ರೂಪಾಯಿ ಸಹ ಖರ್ಚು ಮಾಡಿದ್ದರು. ಆದರೆ, ಇದೀಗ, ರೈಲ್ವೇ ಕಾಮಗಾರಿಯಿಂದಾಗಿ ಮಾಡಿದ್ದ ಅಷ್ಟೂ ಪುನಶ್ಚೇತನದ ಕೆಲಸ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಹಾಗಾಗಿ, ಅವೈಜ್ಞಾನಿಕ ರೈಲ್ವೇ ಕಾಮಗಾರಿವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.