ಡ್ಯಾಂ ಬಳಿ ಗುಂಡು-ತುಂಡು, ಮೋಜು-ಮಸ್ತಿ: MESCOM ಸಿಬ್ಬಂದಿ & ಫ್ರೆಂಡ್ಸ್ ಡ್ಯಾನ್ಸ್ ನೋಡಿ!
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಡ್ಯಾಂ ಬಳಿ ಸಮವಸ್ತ್ರದಲ್ಲಿದ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು ಕಂಠಪೂರ್ತಿ ಕುಡಿದು, ಎಂಜಾಯ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ರೌಂಡ್ಸ್ ಹೊಡೀತಿದೆ. ನವೆಂಬರ್ 4 ರಂದು ಗೆಳೆಯರೊಂದಿಗೆ ಪಿಕ್ನಿಕ್ ಹೊರಟ ಈಸೂರು ಮೆಸ್ಕಾಂ ಘಟಕದ ಮೆಕ್ಯಾನಿಕ್ ಸುರೇಶ್.ಎಲ್ ಬುಲೆಟ್ ಬೈಕ್ ಮೇಲೆ ಸ್ಟಂಟ್ಸ್ ಮಾಡಿದ್ದಾರೆ. ಬಳಿಕ ಡ್ಯಾಂ ಬಳಿ ಸಮವಸ್ತ್ರದಲ್ಲಿ ಮದ್ಯಪಾನ ಮಾಡಿರುವುದು ಕಂಡುಬಂದಿದೆ. ಇದಲ್ಲದೆ, ಸುರೇಶ್ ಸ್ನೇಹಿತರು ಡ್ಯಾಂ ನೀರಿನಲ್ಲಿ ಅರೆಬೆತ್ತೆಲೆಯಾಗಿ ಡ್ಯಾನ್ಸ್ ಸಹ ಮಾಡಿದ್ದಾರೆ. ಸುರೇಶ್ ಸಮವಸ್ತ್ರದಲ್ಲಿದ್ದಾಗ ಮದ್ಯಪಾನ ಮಾಡಿರುವುದು ಸಂಸ್ಥೆಗೆ […]

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಡ್ಯಾಂ ಬಳಿ ಸಮವಸ್ತ್ರದಲ್ಲಿದ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು ಕಂಠಪೂರ್ತಿ ಕುಡಿದು, ಎಂಜಾಯ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ರೌಂಡ್ಸ್ ಹೊಡೀತಿದೆ.
ನವೆಂಬರ್ 4 ರಂದು ಗೆಳೆಯರೊಂದಿಗೆ ಪಿಕ್ನಿಕ್ ಹೊರಟ ಈಸೂರು ಮೆಸ್ಕಾಂ ಘಟಕದ ಮೆಕ್ಯಾನಿಕ್ ಸುರೇಶ್.ಎಲ್ ಬುಲೆಟ್ ಬೈಕ್ ಮೇಲೆ ಸ್ಟಂಟ್ಸ್ ಮಾಡಿದ್ದಾರೆ. ಬಳಿಕ ಡ್ಯಾಂ ಬಳಿ ಸಮವಸ್ತ್ರದಲ್ಲಿ ಮದ್ಯಪಾನ ಮಾಡಿರುವುದು ಕಂಡುಬಂದಿದೆ. ಇದಲ್ಲದೆ, ಸುರೇಶ್ ಸ್ನೇಹಿತರು ಡ್ಯಾಂ ನೀರಿನಲ್ಲಿ ಅರೆಬೆತ್ತೆಲೆಯಾಗಿ ಡ್ಯಾನ್ಸ್ ಸಹ ಮಾಡಿದ್ದಾರೆ. ಸುರೇಶ್ ಸಮವಸ್ತ್ರದಲ್ಲಿದ್ದಾಗ ಮದ್ಯಪಾನ ಮಾಡಿರುವುದು ಸಂಸ್ಥೆಗೆ ಅಗೌರವ ತೋರಿದ್ದಂತೆ ಆಗಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.