ತಮ್ಮ ಊರುಗಳಿಗೆ ತೆರಳಲು 50 ಬಸ್ಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಕಾರ್ಮಿಕರು
ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ಹೋಗಲಾಗದೆ, ತುತ್ತು ಅನ್ನಕೂ ಪರಡಾಡುತ್ತಿದ್ದ ಕಾರ್ಮಿಕರು ತಮ್ಮ ತವರಿಗೆ ಮರಳುವ ಭಾಗ್ಯ ಸಿಕ್ಕಿದೆ. ಒಡಿಶಾಗೆ ತೆರಳಲು ಕಾರ್ಮಿಕರಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8.20ಕ್ಕೆ ಒಡಿಶಾಗೆ ಮೊದಲ ವಿಶೇಷ ರೈಲು ತೆರಳಲಿದೆ ನಂತರ ಮಧ್ಯಾಹ್ನ 12 ಗಂಟೆಗೆ ಮತ್ತೊಂದು ರೈಲು ತೆರಳಲಿದೆ. ಈ ರೀತಿ2 ರೈಲುಗಳಲ್ಲಿ 1,200 ಕಾರ್ಮಿಕರನ್ನು ಒಡಿಶಾಗೆ ಕಳುಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. BBMP ಸರ್ವೆ ರಿಪೋರ್ಟ್ ಸಿದ್ಧ ಪಡಿಸಿದೆ. ಆ ಸರ್ವೆ ರಿಪೋರ್ಟ್ನಲ್ಲಿರುವ ಒಡಿಶಾ […]
ಬೆಂಗಳೂರು: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ಹೋಗಲಾಗದೆ, ತುತ್ತು ಅನ್ನಕೂ ಪರಡಾಡುತ್ತಿದ್ದ ಕಾರ್ಮಿಕರು ತಮ್ಮ ತವರಿಗೆ ಮರಳುವ ಭಾಗ್ಯ ಸಿಕ್ಕಿದೆ. ಒಡಿಶಾಗೆ ತೆರಳಲು ಕಾರ್ಮಿಕರಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8.20ಕ್ಕೆ ಒಡಿಶಾಗೆ ಮೊದಲ ವಿಶೇಷ ರೈಲು ತೆರಳಲಿದೆ ನಂತರ ಮಧ್ಯಾಹ್ನ 12 ಗಂಟೆಗೆ ಮತ್ತೊಂದು ರೈಲು ತೆರಳಲಿದೆ.
ಈ ರೀತಿ2 ರೈಲುಗಳಲ್ಲಿ 1,200 ಕಾರ್ಮಿಕರನ್ನು ಒಡಿಶಾಗೆ ಕಳುಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. BBMP ಸರ್ವೆ ರಿಪೋರ್ಟ್ ಸಿದ್ಧ ಪಡಿಸಿದೆ. ಆ ಸರ್ವೆ ರಿಪೋರ್ಟ್ನಲ್ಲಿರುವ ಒಡಿಶಾ ಕಾರ್ಮಿಕರಿಗೆ ಮಾತ್ರ ಅವಕಾಶ ಕೊಡಲಾಗಿದೆ.
ಹೀಗಾಗಿ 50 ಬಸ್ಗಳಲ್ಲಿ ಚಿಕ್ಕಬಾಣಾವರಕ್ಕೆ 1,200 ಒಡಿಶಾ ಕಾರ್ಮಿಕರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿರುವ ಒಡಿಶಾ ಮೂಲದ ಕಾರ್ಮಿಕರು ಕೆಲವೇ ನಿಮಿಷಗಳಲ್ಲಿ ತಮ್ಮ ತವರಿಗೆ ಮರಳಲಿದ್ದಾರೆ.
Published On - 7:53 am, Sun, 3 May 20