ಚಿಕ್ಕಬಳ್ಳಾಪುರ: ನಗರದ ಕಂದವಾರ ಕೆರೆ ಬಳಿ ಥೇಟ್ ಮಿನಿ ಕನ್ಯಾಕುಮಾರಿಯ ನೆನಪು ತರುವ ಕಂದವಾರ ಕೆರೆಯ ದೃಶ್ಯಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಹಾಗೂ ನಂದಿಗಿರಿಯ ನಡುವೆ ಸೂರ್ಯ ಅಸ್ತಮಿಸುವುದನ್ನ ಕಣ್ತುಂಬಿಕೊಳ್ಳುವುದೇ ಹಬ್ಬ. ಸ್ಥಳೀಯರು ಕೂಡ ಈ ದೃಶ್ಯಗಳಿಗೆ ಮನಸೋತು ಬಿಡ್ತಾರೆ.
ಮತ್ತೊಂದ್ಕಡೆ ಕಂದವಾರ ಕೆರೆಯಲ್ಲಿ ಅಳವಡಿಸಿರುವ ಕಾರಂಜಿಗಳು, ಸೂರ್ಯನೆಡೆಗೆ ನೀರು ಚಿಮ್ಮುತ್ತವೆ. ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಹೊತ್ತಿಗೆ ಸೂರ್ಯನಿಗೆ ಬೀಳ್ಕೊಡುಗೆ ಆರಂಭವಾಗಿರುತ್ತದೆ. ಇದು ಪ್ರಕೃತಿ ಪ್ರೇಮಿಗಳ ದಿಲ್ ಖುಷ್ ಮಾಡುವಂತಿದ್ದು, ನೋಡಲು ಎರಡು ಕಣ್ಣು ಸಾಲದು.
ಅಷ್ಟಕ್ಕೂ ಕಳೆದ ಕೆಲ ದಶಕಗಳಿಂದ ಕಂದವಾರ ಕೆರೆ ನೀರಿಲ್ದೆ ಬರಡಾಗಿತ್ತು. ಆದ್ರೆ ಈಗ ಎಚ್.ಎನ್. ವ್ಯಾಲಿಯ ನೀರಿನಿಂದ ತುಂಬಿ ತುಳುಕುತ್ತಿದ್ದು, ಪ್ರಕೃತಿಯ ಈ ವೈಭೋಗ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೀಪಸ್ತಂಭ ನಡುಗಡ್ಡೆ ಲೈಟ್ ಹೌಸ್.. ಇದು ಪ್ರವಾಸಿಗರ ನೆಚ್ಚಿನ ತಾಣ