
ಕೊಪ್ಪಳ: ಮುನಿರಾಬಾದ್ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಗೆ ಆಗಮಿಸಿದ ಸಚಿವ ಆನಂದ್ ಸಿಂಗ್ ಬರುಬರುತ್ತಲೇ ಪೊಲೀಸರು, ಅಧಿಕಾರಿಗಳ ವಿರುದ್ಧ ಅಲ್ಲಿನ ಪೊಲೀಸ್ ಭದ್ರತೆಯನ್ನು ನೋಡಿಯೇ ಕೆಂಡಾಮಂಡಲರಾಗಿದ್ದಾರೆ.
ಸಚಿವ ಬಿ.ಸಿ.ಪಾಟೀಲ್ ಜತೆ ಕಾರಿನಲ್ಲಿ ಬಂದಿಳಿದ ಆನಂದ್ ಸಿಂಗ್ ಭದ್ರತೆ ನೋಡಿ ಫುಲ್ ಗರಂ ಆಗಿದ್ದಾರೆ. ಅಲ್ಲಿ ನೆರೆದಿದ್ದವರ ಎದುರೇ ಹಿರಿಯ ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟೆಲ್ಲ ಟೈಟ್ ಸೆಕ್ಯುರಿಟಿ ಅವಶ್ಯಕತೆ ಏನಿದೆ? ಎಂದು ಹೇಳಿ, ಸುತ್ತಲೂ ಹಾಕಿದ್ದ ಬ್ಯಾರಿಕೇಡ್ಗಳನ್ನು ತೆಗೆಸಿದ್ದಾರೆ.
Published On - 3:08 pm, Sat, 21 November 20