ಪಾಕ್ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!
ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ. ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ […]
ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ.
ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ ಎಂದಿದ್ದಾರೆ. ಸಮೀಪದಲ್ಲಿ ನೀರಿನ ಆಸರೆ ಇದ್ದ ಬಗ್ಗೆ ಹೇಳಿರುವ ಉತ್ಖನನಕಾರರು, ಪೂಜೆಗೂ ಮುನ್ನ ಸ್ನಾನಕ್ಕೆ ಅದು ಬಳಕೆಯಾಗುತ್ತಿದ್ದಿರಬಹುದು ಎಂದು ಅಂದಾಜಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಲೂಕಾ, ಸ್ವಾಟ್ ಪ್ರಾಂತ್ಯದಲ್ಲಿ ಕಂಡುಬಂದ ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ ಇದಾಗಿದೆ ಎಂದು ಹೇಳಿದ್ದಾರೆ. ಸ್ವಾಟ್ ಪ್ರಾಂತ್ಯವು ಪಾಕಿಸ್ತಾನದ ಸುಂದರ ಭಾಗಗಳಲ್ಲಿ ಒಂದಾಗಿದ್ದು, ಹಲವಾರು ಪ್ರವಾಸಿ ತಾಣಗಳನ್ನು ಒಳಗೊಂಡಿದೆ.