ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ 4 ಇಲಾಖೆಗಳನ್ನು ಮರ್ಜ್ ಮಾಡಿ ಒಂದೇ ಇಲಾಖೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಈ ರೀತಿ ಮರ್ಜ್ ಮಾಡುವುದರಿಂದ ಒಟ್ಟಾರೆ ಕೆಲಸ ಮಾಡುವುದಕ್ಕೆ ಅನುಕೂಲವಾಗುತ್ತೆ ಎಂದಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕ್ರೀಡಾ, ವಾರ್ತಾ ಇಲಾಖೆಯನ್ನು ಮರ್ಜ್ ಮಾಡಲು ಪ್ರಸ್ತಾವನೆ ಇಡಲಾಗಿದೆ. ಅಲ್ಲದೆ ಈಗಾಗಲೇ ಇದಕ್ಕೆ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಮರ್ಜ್ ಬಗ್ಗೆ ಚರ್ಚೆಯಾದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತೆ. 4 ಇಲಾಖೆಗಳು ಒಟ್ಟಾದ್ರೆ ಕೆಲಸ ಮಾಡಲು ಅನುಕೂಲ ಆಗುತ್ತೆ. ಹೀಗಾಗಿ ಈ ಪ್ರಸ್ತಾಪ ಮುಂದೆ ಇಟ್ಟಿದ್ದೇವೆ ಎಂದು ಬೆಂಗಳೂರಿನಲ್ಲಿ ಸಚಿವ ಸಿ.ಟಿ.ರವಿ ತಿಳಿಸಿದ್ರು.