AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಆರ್ಚ್‌‌ ಬಿಷಪ್‌ರಿಂದ ಬಡ ಮಕ್ಕಳ ಹೆಸರಿನಲ್ಲಿ 300 ಕೋಟಿ ರೂ. ಅಕ್ರಮ

ಬೆಂಗಳೂರು: ಬಡ ಮಕ್ಕಳ ಏಳ್ಗೆಯ ಹೆಸರಿನಲ್ಲಿ ಬೆಂಗಳೂರಿನ ಆರ್ಚ್‌‌ ಬಿಷಪ್‌ ಡಾ. ಪೀಟರ್‌ ಮಚಾಡೋ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆಂದು ಕ್ಯಾಥೋಲಿಕ್‌ ಕ್ರೈಸ್ತರ ಸಂಘ ಆರೋಪಿಸಿದೆ. ಈ ಸಂಬಂಧ ಬೆಂಗಳೂರಿನಿಂದ ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತರ ಕನ್ನಡ ಸಂಘ ಹಾಗೂ ಮುಂಬೈನಿಂದ ವಿಡಿಯೋ ಮೂಲಕ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್. ಸಾಲ್ಡಾನಾ ನಡೆಸಿದ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ್ದಾರೆ. ನಮ್ಮ ಧರ್ಮಗುರುಗಳ ವಿರುದ್ಧವೇ ನಮಗೆ ತುಂಬಾ ಬೇಸರವಾಗಿದೆ ಬೆಂಗಳೂರು ಆರ್ಚ್ ಬಿಷಪ್ ಡಾ. ಪೀಟರ್ […]

ಬೆಂಗಳೂರಿನ ಆರ್ಚ್‌‌ ಬಿಷಪ್‌ರಿಂದ ಬಡ ಮಕ್ಕಳ ಹೆಸರಿನಲ್ಲಿ 300 ಕೋಟಿ ರೂ. ಅಕ್ರಮ
Guru
| Edited By: |

Updated on:Aug 27, 2020 | 2:10 PM

Share

ಬೆಂಗಳೂರು: ಬಡ ಮಕ್ಕಳ ಏಳ್ಗೆಯ ಹೆಸರಿನಲ್ಲಿ ಬೆಂಗಳೂರಿನ ಆರ್ಚ್‌‌ ಬಿಷಪ್‌ ಡಾ. ಪೀಟರ್‌ ಮಚಾಡೋ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಮಾಡಿದ್ದಾರೆಂದು ಕ್ಯಾಥೋಲಿಕ್‌ ಕ್ರೈಸ್ತರ ಸಂಘ ಆರೋಪಿಸಿದೆ.

ಈ ಸಂಬಂಧ ಬೆಂಗಳೂರಿನಿಂದ ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತರ ಕನ್ನಡ ಸಂಘ ಹಾಗೂ ಮುಂಬೈನಿಂದ ವಿಡಿಯೋ ಮೂಲಕ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್. ಸಾಲ್ಡಾನಾ ನಡೆಸಿದ ಸುದ್ದಿಗೋಷ್ಟಿಯಲ್ಲಿ ಈ ಆರೋಪ ಮಾಡಿದ್ದಾರೆ.

ನಮ್ಮ ಧರ್ಮಗುರುಗಳ ವಿರುದ್ಧವೇ ನಮಗೆ ತುಂಬಾ ಬೇಸರವಾಗಿದೆ ಬೆಂಗಳೂರು ಆರ್ಚ್ ಬಿಷಪ್ ಡಾ. ಪೀಟರ್ ಮಾಚಾಡೋ ಆಶಾ ಎಂಬ ಎನ್‌ಜಿಓ ಮಾಡಿಕೊಂಡು ಬಡಮಕ್ಕಳ ಕಲ್ಯಾಣಕ್ಕಾಗಿ ಅಂತಾ ವಿದೇಶಗಳಿಂದ ಹಣ ತರಿಸ್ತಾರೆ. ಆದ್ರೆ ಹೀಗೆ ತರಿಸಿದ ಹಣದಿಂದ ಯಾವುದೇ ಬಡಮಕ್ಕಳಿಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ. ಇದರಿಂದ ಬಡ ಮಕ್ಕಳಿಗೆ ಬಹಳ‌ ಅನ್ಯಾವಾಗಿದೆ. ಹೀಗೆ ವಿದೇಶಗಳಿಂದ ಬಂದ ಸುಮಾರು 300 ಕೋಟಿ ಹಣದ ಅವ್ಯವಹಾರ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.

ಬಡ ಮಕ್ಕಳ‌ ಹೆಸರಿನಲ್ಲಿ ನಡೆಯುತ್ತಿರುವ ಕೋಟ್ಯಾಂತರ ರೂಪಾಯಿ ಅವ್ಯವಹಾರದಲ್ಲಿ ಕಳೆದ 15 ವರ್ಷಗಳಿಂದ ಆಶಾ ಟ್ರಸ್ಟ್‌ನಲ್ಲಿ ಕೆಲಸ ನಿರ್ವಹಿಸ್ತಿರೊ ಎಡ್ವರ್ಡ್ ಪಿಂಟೊ ಕೂಡಾ ಭಾಗಿಯಾಗಿದ್ದಾರೆ. ನಮ್ಮ ಧರ್ಮದಲ್ಲಿ ಅನ್ಯಾಯವಾಗ್ತಿದೆ ಅಂದ್ರೆ ಅದನ್ನು ಪ್ರಶ್ನಿಸುವುದು ನಮ್ಮ ಹಕ್ಕು. ಆರ್ಚ್ ಬಿಷಪ್ ಅವ್ಯವಹಾರದ‌ ಬಗ್ಗೆ ಲೆಕ್ಕ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಧರ್ಮಗುರುಗಳ ವಿರುದ್ಧವೇ ನಮಗೆ ತುಂಬಾ ಬೇಸರವಾಗಿದೆ. ಬಡ ಮಕ್ಕಳಿಗೆ ಸಿಗಬೇಕಾದ ವಿದ್ಯಾರ್ಜನೆ ಸಿಗಬೇಕು. ಅವ್ಯವಹಾರದ‌ ಬಗ್ಗೆ ಸರ್ಕಾರ ಕೂಡಲೆ ತನಿಖೆ ನಡೆಸಬೇಕು ಎಂದು ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತ ಸಂಘದ ಅಧ್ಯಕ್ಷ ರಫೈಲ್ ರಾಜ್ ಆಗ್ರಹಿಸಿದ್ದಾರೆ.

ಅಷ್ಟೇ ಅಲ್ಲ ರಫೈಲ್‌ ರಾಜ್‌ ಮತ್ತು ಇತರರು ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಂಬಂಧಿಸಿದ ದಾಖಲೆಗಳನ್ನು ಕೂಡಾ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

Published On - 2:09 pm, Thu, 27 August 20

Follow Us
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ಮತದಾನದ ವೇಳೆ ಮುರ್ಷಿದಾಬಾದ್​ನಲ್ಲಿ ಬಾಂಬ್ ದಾಳಿ, ಹಲವರಿಗೆ ಗಾಯ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ರಾಯಚೂರು: ಸ್ಟೀರಿಂಗ್ ಕಟ್ ಆಗಿ ಪಲ್ಟಿಯಾದ KKRTC ಬಸ್, ತಪ್ಪಿದ ಭಾರಿ ದುರಂತ
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಹೋಂಸ್ಟೇ ಪರವಾನಗಿ ರದ್ದು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಮಿರ್ಜಾಪುರದಲ್ಲಿ ಎರಡು ಟ್ರಕ್​ಗಳ ನಡುವೆ ಸಿಲುಕಿ ನಜ್ಜುಗುಜ್ಜಾದ ವಾಹನಗಳು
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ಸಾಮಾನ್ಯ ವ್ಯಕ್ತಿಯಂತೆ ಬಂದು ಮತ ಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್ 
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
ರಾಜಗಾಂಭಿರ್ಯದಿಂದ ರಸ್ತೆಗೆ ಬಂದ ಹುಲಿ: ಅಪರೂಪದ ವಿಡಿಯೋ ಇಲ್ಲಿದೆ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
‘ರಕ್ಷಿತಾ ರೀತಿ ನಾನು ಪ್ರೇಮ್ ಜೊತೆ ಸಂಸಾರ ಮಾಡ್ತಿದೀನಿ’; ಅರ್ಜುನ್ ಜನ್ಯ
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
17 ಗಂಟೆಗಳ ಹೋರಾಟದ ಬಳಿಕವೂ ಚಿಕಿತ್ಸೆ ಫಲಿಸದೆ ಹೆಣ್ಣಾನೆ ಸಾವು!
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಶಾಸಕರ ಕಚೇರಿಗೇ ವಿದ್ಯುತ್ ಸಂಪರ್ಕ ಕಟ್! ಬಿಲ್ ಬಾಕಿ ಉಳಿಸಿಕೊಂಡಿದ್ದೇ ಕಾರಣ
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!
ಮನೆ ಹಾಲ್ ಹ್ಯಾಂಗಿಂಗ್​ನಲ್ಲಿ ರಾಜನಂತೆ ಕುಳಿತಿದ್ದ ನಾಗರಾಜ!