ಕೆಲವೊಂದು ಫೋಟೋಗಳನ್ನು ಎಡಿಟ್​ ಮಾಡಲಾಗಿದೆ: ರಮೇಶ್​ ಜಾರಕಿಹೊಳಿ ಬೆಂಬಲಿಗರ ಆರೋಪ

ಸಚಿವ ರಮೇಶ್ ಜಾರಕಿಹೊಳಿ ಅವರ ಕೆಲವೊಂದು ಫೋಟೋಗಳನ್ನು ಎಡಿಟ್​ ಮಾಡಲಾಗಿದೆ. ಬೇರೆಯವರ ಫೋಟೋ ಎಡಿಟ್​ ಮಾಡಿದ್ದಾರೆಂದು ಸಚಿವ ರಮೇಶ್​ ಜಾರಕಿಹೊಳಿ ಬೆಂಬಲಿಗರು ಆರೋಪಿಸಿದ್ದಾರೆ.

  • TV9 Web Team
  • Published On - 22:42 PM, 2 Mar 2021
ಕೆಲವೊಂದು ಫೋಟೋಗಳನ್ನು ಎಡಿಟ್​ ಮಾಡಲಾಗಿದೆ: ರಮೇಶ್​ ಜಾರಕಿಹೊಳಿ ಬೆಂಬಲಿಗರ ಆರೋಪ
‘ಕೆಲವೊಂದು ಫೋಟೋಗಳನ್ನು ಎಡಿಟ್​ ಮಾಡಲಾಗಿದೆ’

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಅವರ ಕೆಲವೊಂದು ಫೋಟೋಗಳನ್ನು ಎಡಿಟ್​ ಮಾಡಲಾಗಿದೆ. ಬೇರೆಯವರ ಫೋಟೋ ಎಡಿಟ್​ ಮಾಡಿದ್ದಾರೆಂದು ಸಚಿವ ರಮೇಶ್​ ಜಾರಕಿಹೊಳಿ ಬೆಂಬಲಿಗರು ಆರೋಪಿಸಿದ್ದಾರೆ.

ರಮೇಶ್ ಬೆಳವಣಿಗೆ ಸಹಿಸದೇ ರಾಜಕೀಯವಾಗಿ ಷಡ್ಯಂತ್ರ ಮಾಡಲಾಗಿದೆ ಎಂದು ಟಿವಿ9ಗೆ ರಮೇಶ್ ಆಪ್ತ ಭೀಮಶಿ ಭರಮಣ್ಣವರ ಹೇಳಿದ್ದಾರೆ. ಬಿಜೆಪಿ ಗೋಕಾಕ್ ನಗರ ಘಟಕದ ಅಧ್ಯಕ್ಷ ಭೀಮಶಿ ಹೇಳಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೇಳುವುದೂ ಸರಿಯಲ್ಲ. ಸಚಿವ ರಮೇಶ್ ಆರೋಪಗಳಿಂದ ಮುಕ್ತವಾಗಿ ಬರುತ್ತಾರೆ. ಈ ರೀತಿ ಷಡ್ಯಂತ್ರ ಬಹಳ ಆಗಿವೆ. ಕ್ಷೇತ್ರದ ಜನರು ರಮೇಶ್ ಜಾರಕಿಹೊಳಿ‌ ಜತೆಗೆ ಇರುತ್ತೇವೆ. 21 ವರ್ಷ ಬೆಂಬಲ ಕೊಟ್ಟಿದ್ದೇವೆ, ಈಗಲೂ ಬೆಂಬಲ ಕೊಡುತ್ತೇವೆ. ತನಿಖೆ ಬಳಿಕ ರಾಜ್ಯದ ಜನರಿಗೆ ಎಲ್ಲವೂ ಗೊತ್ತಾಗುತ್ತೆ ಎಂದು ಟಿವಿ9ಗೆ ರಮೇಶ್ ಆಪ್ತ ಭೀಮಶಿ ಭರಮಣ್ಣವರ ಹೇಳಿದರು.

ಪ್ರತಿಕ್ರಿಯೆ ನೀಡಲು ಸಿಡಿಮಿಡಿಗೊಂಡ ಸುರೇಶ್ ಕುಮಾರ್‌
ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್​​ ವಿಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿಡಿಮಿಡಿಗೊಂಡರು. ಮದುವೆಗೆ ಬಂದಿದ್ದೇನೆ ನಮಗೂ ಖಾಸಗಿ ಬದುಕಿದೆ. ಇದೊಂದು ನಾನ್‌ಸೆನ್ಸ್‌ ಎಂದು ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.

ಇದು ನಾನ್‌ಸೆನ್ಸ್ ಅಲ್ಲ, ಸಚಿವರೊಬ್ಬರ ಮೇಲೆ ಬಂದ ಆರೋಪ. ನೀವು ಪ್ರತಿಕ್ರಿಯೆ ಕೊಡಿ ಎಂದು‌ ಮಾಧ್ಯಮ ಪ್ರತಿನಿಧಿಗಳು ಹೇಳಿದಾಗ, ಸಚಿವರು ಈ ವಿಚಾರದ ಬಗ್ಗೆ ಪಕ್ಷದ ಹಿರಿಯರು ನಿರ್ಧರಿಸುತ್ತಾರೆ. ರಾಜೀನಾಮೆ ಕೊಡುವ ವಿಚಾರ ಸಚಿವ ರಮೇಶ್‌ಗೆ ಬಿಟ್ಟಿದ್ದು. ಹೈಕಮಾಂಡ್ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತೆ ಎಂದು ಹೇಳಿದರು.

‘ಸಿಎಂ ಯಡಿಯೂರಪ್ಪ ಕರಪ್ಟ್​ ಎಂದು ರಮೇಶ್​ ಹೇಳಿದ್ದರು: ಶಿವಕುಮಾರ್
ಅತ್ತ, ನಾನು ರಾಸಲೀಲೆ ವಿಡಿಯೋ ನೋಡಿಲ್ಲ. ಕಾಂಗ್ರೆಸ್ ಕಚೇರಿಯಲ್ಲಿದ್ದಾಗ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಕರಪ್ಟ್​ ಎಂದು ಹೇಳಿರುವ ರಮೇಶ್ ವಿಡಿಯೋದಲ್ಲಿ ಹೇಳಿರುವ ಬಗ್ಗೆ ಉತ್ತರ ನೀಡಬೇಕು. ಇಂಥವರೆಲ್ಲ ಇರಬೇಕು, ಎಲ್ಲಾ ವಿಚಾರ ತಿಳಿದುಕೊಳ್ಳುತ್ತೇನೆ ಎಂದು ಶಿವಕುಮಾರ್​ ಹೇಳಿದರು.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಯಾವುದೇ ಕೆಲಸಕ್ಕೆ ಬಾರದವನಾಗುತ್ತೇನೆ :ಟಿವಿ9ಗೆ ರಮೇಶ್​ ಜಾರಕಿಹೊಳಿ ಫಸ್ಟ್​ ರಿಯಾಕ್ಷನ್