ತುಮಕೂರು: ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ವಹಿಸಿ, ಉತ್ಸಾಹದಿಂದ ಏರ್ಪಾಡುಗಳನ್ನುಮಾಡುತ್ತಿದ್ದ ಸಚಿವ ವಿಸೋಮಣ್ಣಗೆ ಇಂದಂತೂ ಪ್ರಧಾನಿ ಭದ್ರತೆ ಜವಾಬ್ದಾರಿಯನ್ನುಹೊತ್ತಿರುವ SPG ತಂಡದಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಸ್ಥಳೀಯ ಪೊಲೀಸರು ತಮಗೆ ಉಂಟುಮಾಡುತ್ತಿರುವ ಕಿರಿಕಿರಿ ಬಗ್ಗೆ ಸೋಮಣ್ಣ ಕಿಡಿಕಿಡಿಕಾರಿದ್ದಾರೆ. ಇದರಿಂದ ಬೇಸತ್ತು ಇದರ ಸಹವಾಸವೇ ಬೇಡ ಎಂದು ಮಠದಿಂದ ಸೋಮಣ್ಣ ವಾಪಸಾಗಿರುವ ಘಟನೆ ನಡೆದಿದೆ.
ಸೋಮಣ್ಣ ಅವರ ಕಾರನ್ನು ಮಠದೊಳಕ್ಕೆ ಬಿಟ್ಟಿದ್ದಕ್ಕೆ ರಕ್ಷಣಾ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಎಸ್ಪಿ ಅನುಪ್ ಎ ಶೆಟ್ಟಿ ಗರಂ ಆಗಿದ್ದಾರೆ. ಯಾರನ್ನೂ ಒಳಕ್ಕೆ ಬಿಡಬಾರದು ಎಂದು ತಮ್ಮ ಪೊಲೀಸರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದರಿಂದ ಬೇಸತ್ತ ಸಚಿವ ಸೋಮಣ್ಣ SPG ಅವರಿಗೆ ಕನ್ವಿನ್ಸ್ ಮಾಡ್ತೀನಿ. ಆದರೆ ನಮ್ಮವರದೇ ಜಾಸ್ತಿಯಾಗಿದೆ. ಯಾವನು ಬೈದವನು. ಅವನ ಮಖಕ್ಕೆ ಸರಿಯಾಗಿ ಉಗಿದಿದೀನಿ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನತ್ತ ಹೊರಟ ಪ್ರಧಾನಿ ಮೋದಿ
ಈ ಮಧ್ಯೆ ಪ್ರಧಾನಿ ಮೋದಿ ಇದೀಗತಾನೆ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 1.20ಕ್ಕೆ ಬೆಂಗಳೂರು ತಲುಪಲಿದ್ದಾರೆ.
Published On - 11:14 am, Thu, 2 January 20