ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಯುವಕನಿಗೆ ಚಾಕು ಇರಿದು ಬೈಕ್ ಕಳ್ಳತನ!

ದೇವನಹಳ್ಳಿ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದವರು ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ( 22 ) ಕೊಲೆಯಾದ ಯುವಕ. ದೊಡ್ಡಬಳ್ಳಾಪುರ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿ 207 ರ ಬದಿಯಲ್ಲಿರೂ ಮನೆಗೆ ಕಳೆದ ರಾತ್ರಿ ನಮ್ಮ ಗಾಡಿ ಆಕ್ಸಿಡೆಂಟ್ ಆಗಿದೆ ನೀರು ಕೊಡಿ ಅಂತ ನೀರು ಕೇಳುವ ನೆಪದಲ್ಲಿ ಮನೆಗೆ ಒರ್ವ ದುಷ್ಕರ್ಮಿ ಬಂದಿದ್ದಾನೆ. ಈ ವೇಳೆ ನೀರು ಕೊಡಲು ಬಾಗಿಲು ತೆಗೆದಾಗ […]

ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಯುವಕನಿಗೆ ಚಾಕು ಇರಿದು ಬೈಕ್ ಕಳ್ಳತನ!

Updated on: Aug 16, 2020 | 9:24 AM

ದೇವನಹಳ್ಳಿ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದವರು ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುನಾಥ್ ( 22 ) ಕೊಲೆಯಾದ ಯುವಕ.

ದೊಡ್ಡಬಳ್ಳಾಪುರ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿ 207 ರ ಬದಿಯಲ್ಲಿರೂ ಮನೆಗೆ ಕಳೆದ ರಾತ್ರಿ ನಮ್ಮ ಗಾಡಿ ಆಕ್ಸಿಡೆಂಟ್ ಆಗಿದೆ ನೀರು ಕೊಡಿ ಅಂತ ನೀರು ಕೇಳುವ ನೆಪದಲ್ಲಿ ಮನೆಗೆ ಒರ್ವ ದುಷ್ಕರ್ಮಿ ಬಂದಿದ್ದಾನೆ. ಈ ವೇಳೆ ನೀರು ಕೊಡಲು ಬಾಗಿಲು ತೆಗೆದಾಗ ಮನೆಗೆ ಐವರು ದುಷ್ಕರ್ಮಿಗಳು ನುಗ್ಗಿದ್ದಾರೆ.

ಯುವಕನ ಕೊಲೆ ಮಾಡಿ ನಂತರ ಮನೆಯಲ್ಲಿದ್ದ ಬೈಕ್ ಕೊಂಡೊಯ್ದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.