ಬೆಂಗಳೂರು ಗಲಭೆಯಲ್ಲೂ ಪಾಲಿಟಿಕ್ಸ್ : ಬಿಜೆಪಿ, ಕಾಂಗ್ರೆಸ್ ಕೈಗೆತ್ತಿಕೊಂಡಿವೆ ದಲಿತಾಸ್ತ್ರ
ಬೆಂಗಳೂರು: ತಡರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಾದ ಗಲಭೆಯಲ್ಲೂ ಭರ್ಜರಿ ಪಾಲಿಟಿಕ್ಸ್ ನಡೆದಿದೆ. ಗಲಭೆ ರಾಜಕೀಯದಲ್ಲಿ ‘ದಲಿತ’ ಅಂಶವೇ ಟ್ರಂಪ್ ಕಾರ್ಡ್ ಆಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ‘ದಲಿತಾಸ್ತ್ರ’ ಮುಂದಿಟ್ಟುಕೊಂಡೇ 2 ಪಕ್ಷಗಳು ಕೆಸರೆರಚಾಟವಾಡಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ದಲಿತ ಸಮುದಾಯಕ್ಕೆ ಸೇರಿದವರು. ದಲಿತ ನಾಯಕರ ನೇತೃತ್ವದಲ್ಲೇ ಬಿಜೆಪಿ, ಹಾಗೂ ಕಾಂಗ್ರೆಸ್ ತಂಡ ರಚನೆ ಮಾಡಿದೆ. ದಲಿತ ನಾಯಕ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಿತಿ ರಚಿಸಿದ್ರೆ. ಬಿಜೆಪಿಯಿಂದಲೂ ದಲಿತ ನಾಯಕನ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆ […]

ಬೆಂಗಳೂರು: ತಡರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಾದ ಗಲಭೆಯಲ್ಲೂ ಭರ್ಜರಿ ಪಾಲಿಟಿಕ್ಸ್ ನಡೆದಿದೆ. ಗಲಭೆ ರಾಜಕೀಯದಲ್ಲಿ ‘ದಲಿತ’ ಅಂಶವೇ ಟ್ರಂಪ್ ಕಾರ್ಡ್ ಆಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ‘ದಲಿತಾಸ್ತ್ರ’ ಮುಂದಿಟ್ಟುಕೊಂಡೇ 2 ಪಕ್ಷಗಳು ಕೆಸರೆರಚಾಟವಾಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ದಲಿತ ಸಮುದಾಯಕ್ಕೆ ಸೇರಿದವರು. ದಲಿತ ನಾಯಕರ ನೇತೃತ್ವದಲ್ಲೇ ಬಿಜೆಪಿ, ಹಾಗೂ ಕಾಂಗ್ರೆಸ್ ತಂಡ ರಚನೆ ಮಾಡಿದೆ. ದಲಿತ ನಾಯಕ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಿತಿ ರಚಿಸಿದ್ರೆ. ಬಿಜೆಪಿಯಿಂದಲೂ ದಲಿತ ನಾಯಕನ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ.
ದಲಿತ ನಾಯಕರಾದ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ತಂಡ ಸಿದ್ಧವಾಗಿದೆ. ದಲಿತ ನಾಯಕ ಛಲವಾದಿ ನಾರಾಯಣಸ್ವಾಮಿ ಸಹ ಇದರಲ್ಲಿ ಇದ್ದಾರೆ. ಪುಲಿಕೇಶಿನಗರ ಕ್ಷೇತ್ರದಲ್ಲಿ ದಲಿತ ಸಮುದಾಯ ನಿರ್ಣಾಯಕ ಹೀಗಾಗಿ ‘ದಲಿತಾಸ್ತ್ರ’ವನ್ನು ಮುಂದಿಟ್ಟುಕೊಂಡೇ ಎರಡೂ ಪಕ್ಷಗಳು ಕೆಸರೆರಚಾಟ ಶುರು ಮಾಡಿದ್ದಾರೆ. ಸಮಿತಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಎಂ. ಶಂಕರಪ್ಪ, ಸಂಸದರಾದ ಪಿ.ಸಿ. ಮೋಹನ್, ಎ. ನಾರಾಯಣಸ್ವಾಮಿ, ಎಸ್.ಸಿ. ಮೋರ್ಛಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗಿದ್ದಾರೆ.
Published On - 10:22 am, Sun, 16 August 20




