ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಕೊಳ್ಳಿಯಿಟ್ಟವರು ಎರಡು ಗಂಟೆ ಕಾಲ ಅದೇ ಏರಿಯಾದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದರು!
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆರೋಪಿಗಳು ಕಾರುಗಳಿಗೆ ಬೆಂಕಿ ಹಚ್ಚಿದ ನಂತರ ಸುಮಾರು ಎರಡು ಗಂಟೆಗಳ ಕಾಲ ಅದೇ ಏರಿಯಾದಲ್ಲಿ ಮತ್ತು ಶಾಸಕರ ಮನೆ ಸುತ್ತಮತ್ತ ಓಡಾಡಿದ್ದಾರೆ. ಬೇರೆ ಮನೆಗಳ ಮಾಳಿಗೆಗಳನ್ನು ಹತ್ತಿ ವಿಶ್ರಾಂತಿ ಪಡೆದಿದ್ದಾರೆ.
ಬೊಮ್ಮನಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಕೊಳ್ಳಿಯಿಟ್ಟ ದುಷ್ಕರ್ಮಿಗಳಿಗೆ ಶಾಸಕರ ವಿರುದ್ಧ ಅದ್ಯಾವ ಸಿಟ್ಟಿತ್ತೋ ಅಂತ ಅವರನ್ನು ಬಂಧಿಸಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ತನಿಖೆ ನಡೆಸುತ್ತಿರುವ ಪೊಲೀಸರೇ ಹೇಳಬೇಕು. ಈ ವಿಡಿಯೋನಲ್ಲಿ ಆರೋಪಿಗಳನ್ನು ನೀವು ನೋಡಬಹುದು. ಗುರುವಾರ ಬೆಳಗಿನ ಜಾವದ ಸಿಸಿಟಿವಿ ಫುಟೇಜ್ ಇದು. ರೆಡ್ಡಿಯ ಎರಡು ಐಷಾರಾಮಿ ಕಾರುಗಳಿಗೆ ಈ ಆರೋಪಿತರು ಬೆಂಕಿಯಿಟ್ಟಿದ್ದಾರೆ. ಕೃತ್ಯ ನಡೆಸಿದ ನಂತರ ಇಲ್ಲಿ ಕಾಣುತ್ತಿರುವ ಮೂವರು ಅವಸರದಲ್ಲಿ ಓಡುವ ಪ್ರಯತ್ನವೇನೂ ಮಾಡುತ್ತಿಲ್ಲ. ಅವರ ನಿರಾಳತೆ ನೋಡುತ್ತಿದ್ದರೆ ಸ್ಥಳೀಯರೇ ಅಂದರೆ ಬೊಮ್ಮನಳ್ಳಿ ಲೊಕ್ಯಾಲಿಟಿಯವರು ಇರಬಹುದೆನ್ನುವ ಶಂಕೆ ಮೂಡದಿರದು.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆರೋಪಿಗಳು ಕಾರುಗಳಿಗೆ ಬೆಂಕಿ ಹಚ್ಚಿದ ನಂತರ ಸುಮಾರು ಎರಡು ಗಂಟೆಗಳ ಕಾಲ ಅದೇ ಏರಿಯಾದಲ್ಲಿ ಮತ್ತು ಶಾಸಕರ ಮನೆ ಸುತ್ತಮತ್ತ ಓಡಾಡಿದ್ದಾರೆ. ಬೇರೆ ಮನೆಗಳ ಮಾಳಿಗೆಗಳನ್ನು ಹತ್ತಿ ವಿಶ್ರಾಂತಿ ಪಡೆದಿದ್ದಾರೆ. ಬೀಟ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಿರಲು ಅವರು ಟೆರೇಸ್ಗಳನ್ನು ಹತ್ತಿ ಕುಳಿತಿರಬಹುದು. ಅಥವಾ ತಮ್ಮ ಮಿಶನ್ ಯಶಸ್ಚೀಯಾಗಿ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಳಿಗೆಗಳ ಮೇಲೆ ಕೂತು ಮದ್ಯಪಾನ ಮಾಡಿರುವ ಸಾಧ್ಯತೆಯೂ ಇದೆ.
ಒಬ್ಬ ಅರೋಪಿಯ ಕೈಯಲ್ಲಿ ಚೀಲದಂಥ ವಸ್ತುವಿದೆ. ಪ್ರಾಥಮಿಕ ತನಿಖೆಯಲ್ಲಿ ಅವರು ಬಟ್ಟ್ಟೆ ಮತ್ತು ಚಪ್ಪಲಿಗಳನ್ನು ಬದಲಾಯಿಸಿರುವರೆಂದು ಗೊತ್ತಾಗಿದೆ. ಅಲ್ಲಿಗೆ ಬರುವಾಗ ಅವರ ಕೈಯಲ್ಲಿ ಪಟ್ರೋಲ್ ತುಂಬಿದ ಒಂದು ಚಿಕ್ಕ ಕ್ಯಾನ್ ಇತ್ತಂತೆ ಅದರೆ ವಾಪಸ್ಸು ಹೋಗುವಾಗ ಅದು ಕಾಣುತ್ತಿಲ್ಲ. ಅದನ್ನು ಬೆಂಕಿಯೊಳಗೆ ಎಸೆದಿರಬಹುದು. ಪೊಲೀಸರ ತನಿಖೆ ಮುಗಿದ ನಂತರ ಎಲ್ಲ ಅಂಶಗಳು ಬಯಲಿಗೆ ಬರಲಿವೆ.
ಇದನ್ನೂ ಓದಿ: Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪತ್ನಿಗೆ ಡಿವೋರ್ಸ್ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್ ಶಾಕ್

