ದಾವಣಗೆರೆ: ದಿವಂಗತ ಸುರೇಶ್ ಅಂಗಡಿ ಶಿಸ್ತಿನ ಜೀವನಕ್ಕೆ ಹೆಸರುವಾಸಿ. ಆದರೆ ಅವರು ಮಾಸ್ಕ್ ಹಾಕಿದ್ದರೆ ಇಂದು ಸಾಯುತ್ತಿರಲಿಲ್ಲ ಎಂದು ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಶಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ MP ರೇಣುಕಾಚಾರ್ಯ ಹೇಳಿದ್ದಾರೆ. ಸುರೇಶ್ ಅಂಗಡಿಯವರು ಉಪಾಹಾರ, ಊಟವನ್ನು ನಿಗದಿತ ಸಮಯಕ್ಕೆ ಸೇವಿಸುತ್ತಿದ್ದರು. ಆದರೆ, ಒಮ್ಮೆ ಸಚಿವ ಜಗದೀಶ್ ಶೆಟ್ಟರ್ ಭೇಟಿಗೆ ವಿಧಾನಸೌಧಕ್ಕೆ ಬಂದಿದ್ದರು. ಆಗಲೂ ಸುರೇಶ್ ಅಂಗಡಿಯವರು ಮಾಸ್ಕ್ ಹಾಕಿರಲಿಲ್ಲ. ಒಂದು ವೇಳೆ ಅವರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರೆ ಸುರೇಶ್ ಅಂಗಡಿಯವರು ಇಷ್ಟು ಬೇಗ […]
Ad
Follow us on
ದಾವಣಗೆರೆ: ದಿವಂಗತ ಸುರೇಶ್ ಅಂಗಡಿ ಶಿಸ್ತಿನ ಜೀವನಕ್ಕೆ ಹೆಸರುವಾಸಿ. ಆದರೆ ಅವರು ಮಾಸ್ಕ್ ಹಾಕಿದ್ದರೆ ಇಂದು ಸಾಯುತ್ತಿರಲಿಲ್ಲ ಎಂದು ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಶಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ MP ರೇಣುಕಾಚಾರ್ಯ ಹೇಳಿದ್ದಾರೆ. ಸುರೇಶ್ ಅಂಗಡಿಯವರು ಉಪಾಹಾರ, ಊಟವನ್ನು ನಿಗದಿತ ಸಮಯಕ್ಕೆ ಸೇವಿಸುತ್ತಿದ್ದರು. ಆದರೆ, ಒಮ್ಮೆ ಸಚಿವ ಜಗದೀಶ್ ಶೆಟ್ಟರ್ ಭೇಟಿಗೆ ವಿಧಾನಸೌಧಕ್ಕೆ ಬಂದಿದ್ದರು. ಆಗಲೂ ಸುರೇಶ್ ಅಂಗಡಿಯವರು ಮಾಸ್ಕ್ ಹಾಕಿರಲಿಲ್ಲ. ಒಂದು ವೇಳೆ ಅವರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರೆ ಸುರೇಶ್ ಅಂಗಡಿಯವರು ಇಷ್ಟು ಬೇಗ ಸಾಯುತ್ತಿರಲಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಜೊತೆಗೆ, ಅಂಗಡಿಯವರು ವಿಶ್ವದಲ್ಲೇ ಪ್ರಸಿದ್ಧ AIIMSನಲ್ಲಿ ಮೃತಪಟ್ಟಿರುವುದು ನಿಜಕ್ಕೂ ದುರಂತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.