ರಾಗಿಣಿ, ಸಂಜನಾಗೆ ಮತ್ತೆ ಜೈಲೇ ಗತಿ: ಜಾಮೀನು ಅರ್ಜಿ ತಿರಸ್ಕಾರ
ಬೆಂಗಳೂರು: ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿರುವ ಆರೋಪದಡಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ಆದೇಶ ಇಂದು ನೀಡಲಾಯಿತು. NDPS ಜಡ್ಜ್ ಜಿ.ಎಂ.ಶೀನಪ್ಪ ಆದೇಶ ಹೊರಡಿಸಿದರು. ಜೊತೆಗೆ, ಈವರೆಗೂ ತಲೆಮರೆಸಿಕೊಂಡಿರುವ ಪ್ರಕರಣದ A1 ಆರೋಪಿ ಶಿವಪ್ರಕಾಶ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಲಾಯಿತು. ಇದಲ್ಲದೆ, ಮತ್ತೊಬ್ಬ ಆರೋಪಿ ವಿನಯ್ ಕುಮಾರ್ ಜಾಮೀನು ಅರ್ಜಿ ಸಜ ವಜಾಗೊಳಿಸಲಾಯಿತು. ಇದಲ್ಲದೆ, ರವಿಶಂಕರ್ ಜಾಮೀನು […]

ಬೆಂಗಳೂರು: ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿರುವ ಆರೋಪದಡಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ಆದೇಶ ಇಂದು ನೀಡಲಾಯಿತು. NDPS ಜಡ್ಜ್ ಜಿ.ಎಂ.ಶೀನಪ್ಪ ಆದೇಶ ಹೊರಡಿಸಿದರು.
ಜೊತೆಗೆ, ಈವರೆಗೂ ತಲೆಮರೆಸಿಕೊಂಡಿರುವ ಪ್ರಕರಣದ A1 ಆರೋಪಿ ಶಿವಪ್ರಕಾಶ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಲಾಯಿತು. ಇದಲ್ಲದೆ, ಮತ್ತೊಬ್ಬ ಆರೋಪಿ ವಿನಯ್ ಕುಮಾರ್ ಜಾಮೀನು ಅರ್ಜಿ ಸಜ ವಜಾಗೊಳಿಸಲಾಯಿತು.
ಇದಲ್ಲದೆ, ರವಿಶಂಕರ್ ಜಾಮೀನು ಅರ್ಜಿ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸಲು SPP ಕಾಲಾವಕಾಶ ಕೋರಿದ ಹಿನ್ನೆಲೆ ಸೆ.30ಕ್ಕೆ ಮುಂದೂಡಲಾಯಿತು. ಜೊತೆಗೆ, ಪ್ರಶಾಂತ್ ರಂಕ, ಅಭಿಸ್ವಾಮಿ, ವೈಭವ್ ಜೈನ್ ಮತ್ತು ಪ್ರಶಾಂತ್ ರಾಜು ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಲಾಯಿತು. ವಿರೇನ್ ಖನ್ನ ಜಾಮೀನು ಅರ್ಜಿ ವಿಚಾರಣೆ ಅ.1ಕ್ಕೆ ಮುಂದೂಡಲಾಯಿತು.
Published On - 4:14 pm, Mon, 28 September 20