‘ಯಾರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಇರೋಲ್ಲ ಹೇಳಿ? ನಾವು ಮತ್ತೆ ಒಂದಾಗಿದ್ದೇವೆ’

ಮುಂಬೈ: ಮದುವೆಯಾಗಿ ಇನ್ನೂ ಕೈಗೆ ಹಾಕಿದ ಮೆಹಂದಿ ಸಹ ಮಾಸಿಲ್ಲ. ಅಷ್ಟರಲ್ಲಾಗಲೇ ಪೂನಂ ಪಾಂಡೆ ಹಾಗೂ ಪತಿ ಸ್ಯಾಮ್ ಅಹಮದ್ ಬಾಂಬೆ ನಡುವೆ ಅನೇಕ ಬಿರುಕುಗಳು ಕಾಣಿಸುತ್ತಿವೆ. ಕೆಲ ದಿನಗಳ ಹಿಂದೆಯಷ್ಟೆ ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಳು. ನನ್ನ ಪತಿ ಕಿರುಕುಳ ನೀಡಿ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಗೋವಾ ಪೊಲೀಸರಿಂದ ಪತಿಯನ್ನು ಅರೆಸ್ಟ್ ಮಾಡಿಸಿದ್ದಳು. ಇಷ್ಟೆಲ್ಲಾ ರಂಪಾಟದ ನಂತರ ಈ ನವ ಜೋಡಿ ಮತ್ತೆ ಒಂದಾಗಿದ್ದಾರೆ. ‘ಯಾರ ವೈವಾಹಿಕ ಜೀವನದಲ್ಲಿ […]

‘ಯಾರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಇರೋಲ್ಲ ಹೇಳಿ? ನಾವು ಮತ್ತೆ ಒಂದಾಗಿದ್ದೇವೆ’
Follow us
ಆಯೇಷಾ ಬಾನು
|

Updated on:Nov 24, 2020 | 7:42 AM

ಮುಂಬೈ: ಮದುವೆಯಾಗಿ ಇನ್ನೂ ಕೈಗೆ ಹಾಕಿದ ಮೆಹಂದಿ ಸಹ ಮಾಸಿಲ್ಲ. ಅಷ್ಟರಲ್ಲಾಗಲೇ ಪೂನಂ ಪಾಂಡೆ ಹಾಗೂ ಪತಿ ಸ್ಯಾಮ್ ಅಹಮದ್ ಬಾಂಬೆ ನಡುವೆ ಅನೇಕ ಬಿರುಕುಗಳು ಕಾಣಿಸುತ್ತಿವೆ. ಕೆಲ ದಿನಗಳ ಹಿಂದೆಯಷ್ಟೆ ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಳು. ನನ್ನ ಪತಿ ಕಿರುಕುಳ ನೀಡಿ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಗೋವಾ ಪೊಲೀಸರಿಂದ ಪತಿಯನ್ನು ಅರೆಸ್ಟ್ ಮಾಡಿಸಿದ್ದಳು. ಇಷ್ಟೆಲ್ಲಾ ರಂಪಾಟದ ನಂತರ ಈ ನವ ಜೋಡಿ ಮತ್ತೆ ಒಂದಾಗಿದ್ದಾರೆ. ‘ಯಾರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಇರೋಲ್ಲ ಹೇಳಿ? ನಾವು ಮತ್ತೆ ಒಂದಾಗಿದ್ದೇವೆ’ ಎಂದೂ ಪೂನಂ ವಗ್ಗರಣೆ ಹಾಕಿದ್ದಾಳೆ.

ನಾವಿಬ್ಬರೂ ಪರಸ್ಪರ ಹುಚ್ಚರಂತೆ ಪ್ರೀತಿಸ್ತಿದ್ದೇವೆ! ಹೌದು ಅರೆಸ್ಟ್ ಆದ ಬಳಿಕ ಜಾಮೀನಿನ ಮೇಲೆ ಪತಿ ಸ್ಯಾಮ್​ ಬಿಡುಗಡೆ ಆಗಿದ್ದಾನೆ. ಶನಿವಾರ ತಡರಾತ್ರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ವಿವಾಹದ ಫೋಟೋಗಳನ್ನು ಫೋಸ್ಟ್ ಮಾಡಿದ್ದಾನೆ.

ಈ ಬಗ್ಗೆ ಮಾತನಾಡಿದ ಹಾಟ್ ಬ್ಯೂಟಿ ಪೂನಂ, ಸ್ಯಾಮ್ ಅಳುತ್ತಿದ್ದಾನೆ. ಆತನ ವಿರುದ್ಧ ಹಾಕಿರುವ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆತ ಬೇಡಿಕೊಳ್ಳುತ್ತಿದ್ದಾನೆ. ಹಾಗೂ ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದೂ ಭರವಸೆ ನೀಡಿದ್ದಾನೆ ಎಂದು ಅಲವತ್ತುಕೊಂಡಿದ್ದಳು.

ಇದನ್ನೂ ಓದಿ: ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ

ಈ ರೀತಿ ಸ್ಯಾಮ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಹೀಗಾಗಿ ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದೇವೆ. ಅಲ್ಲದೆ ನಾವಿಬ್ಬರೂ ಒಬ್ಬರನೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸದ್ಯ ದಂಪತಿ ಗೋವಾದಲ್ಲಿದ್ದು, ಪೂನಂ ಪತಿ ಮೇಲೆ ಹಾಕಿದ್ದ ಕೇಸ್ ಹಿಂಪಡೆದಿದ್ದಾರೆ. ಹೀಗಾಗಿ ದಂಪತಿ ಮುಂಬೈಗೆ ತೆರಳಲಿದ್ದಾರೆ. ಇಬ್ಬರ ನಡುವಿನ ಜಗಳ ತಣ್ಣಗಾದ ಬಳಿಕ ಸ್ಯಾಮ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್​ಗಾಗಿ ನಡೀತಾ ಈ ಡ್ರಾಮಾ? ಇನ್ನು ಕನಸಿನ ರಾಣಿ ಪೂನಂ ಮತ್ತು ಸ್ಯಾಮ್ ನಡುವಿನ ಜಗಳ ಕೇವಲ ನಾಟಕ. ಮುಂಬರುವ ಬಿಗ್ ಬಾಸ್ ಸೀಸನ್ 14ರಲ್ಲಿ ಭಾಗವಹಿಸಲು ಪೂನಂ ಈ ರೀತಿ ಪ್ರಚಾರ ಮಾಡಿಕೊಂಡಿದ್ದಾಳೆ ಎಂಬ ಮಾತುಗಳೂ ಬಾಲಿವುಡ್​ನಲ್ಲಿ ಕೇಳಿ ಬರುತ್ತಿವೆ.

ಆದರೆ ಈ ಬಗ್ಗೆ ಮಾತನಾಡಿದ ಪೂನಂ ಆ ಮಾತನ್ನು ತಳ್ಳಿ ಹಾಕಿದ್ದಾರೆ. ನಾನು ವಿವಾದಾತ್ಮಕ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಹೋಗುತ್ತಿಲ್ಲ. ಬಿಗ್ ಬಾಸ್​ನಲ್ಲಿ ಪಾಲ್ಗೊಳ್ಳಲು ನಾನು ತುಂಬಾ ಚಿಕ್ಕವಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕಳ ಆರೋಪ: ಪಾಪಾ ಪಾಂಡೆ ಗಂಡನಿಗೆ ಬೇಲ್ ಸಿಕ್ತು

Published On - 3:33 pm, Mon, 28 September 20

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ