ತೇಜಸ್ವಿ ಸೂರ್ಯ ಅಲ್ಲ ಅಮಾವಾಸ್ಯೆ ‘ಬೆಂಗಳೂರು ಟೆರರಿಸ್ಟ್ ಹಬ್’ ಹೇಳಿಕೆಗೆ ಡಿಕೆಶಿ ಕಿಡಿ

‘ಬೆಂಗಳೂರು ಟೆರರಿಸ್ಟ್ ಹಬ್’ ಎಂಬ BJP ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ KPCC ಅಧ್ಯಕ್ಷ DK ಶಿವಕುಮಾರ್​ ಆಕ್ರೋಶ​ ಹೊರಹಾಕಿದ್ದಾರೆ. Bangalore Terrorist Hub? ತೇಜಸ್ವಿ ಸೂರ್ಯ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ. ಅವನು ತೇಜಸ್ವಿ ಸೂರ್ಯ ಅಲ್ಲ ಅಮಾವಾಸ್ಯೆ ಎಂದು ಕಿಡಿಕಾರಿದ್ದಾರೆ. ಸಂಸದ ತೇಜಸ್ವಿ ಸೂರ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು. ಸಿಎಂ ಅವರೇ, ನಿಮ್ಮ ಸಂಸದ ರಾಜ್ಯವನ್ನು ಅವಮಾನಿಸಿದ್ದಾರೆ. ರಾಜ್ಯದ ರಾಜಧಾನಿ ಬಗ್ಗೆ ಇಂಥ ಹೇಳಿಕೆಯನ್ನು ಸಹಿಸಲ್ಲ. ಮೊದಲು ಬೆಂಗಳೂರಿಗೆ ಬಂದು ಬಳಿಕ ದೆಹಲಿಗೆ ಬರುವ […]

ತೇಜಸ್ವಿ ಸೂರ್ಯ ಅಲ್ಲ ಅಮಾವಾಸ್ಯೆ ‘ಬೆಂಗಳೂರು ಟೆರರಿಸ್ಟ್ ಹಬ್’ ಹೇಳಿಕೆಗೆ ಡಿಕೆಶಿ ಕಿಡಿ
KUSHAL V

| Edited By: sadhu srinath

Sep 28, 2020 | 3:25 PM

‘ಬೆಂಗಳೂರು ಟೆರರಿಸ್ಟ್ ಹಬ್’ ಎಂಬ BJP ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ KPCC ಅಧ್ಯಕ್ಷ DK ಶಿವಕುಮಾರ್​ ಆಕ್ರೋಶ​ ಹೊರಹಾಕಿದ್ದಾರೆ.

Bangalore Terrorist Hub? ತೇಜಸ್ವಿ ಸೂರ್ಯ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ. ಅವನು ತೇಜಸ್ವಿ ಸೂರ್ಯ ಅಲ್ಲ ಅಮಾವಾಸ್ಯೆ ಎಂದು ಕಿಡಿಕಾರಿದ್ದಾರೆ. ಸಂಸದ ತೇಜಸ್ವಿ ಸೂರ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು. ಸಿಎಂ ಅವರೇ, ನಿಮ್ಮ ಸಂಸದ ರಾಜ್ಯವನ್ನು ಅವಮಾನಿಸಿದ್ದಾರೆ. ರಾಜ್ಯದ ರಾಜಧಾನಿ ಬಗ್ಗೆ ಇಂಥ ಹೇಳಿಕೆಯನ್ನು ಸಹಿಸಲ್ಲ.

ಮೊದಲು ಬೆಂಗಳೂರಿಗೆ ಬಂದು ಬಳಿಕ ದೆಹಲಿಗೆ ಬರುವ ಸ್ಥಿತಿಯಿತ್ತು. ಇದೀಗ, ಬೆಂಗಳೂರಿನಿಂದ ದೆಹಲಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಅಂಥ ಪಕ್ಷದ ಸಂಸದರ ಬಾಯಲ್ಲಿ ಇಂಥ ಹೇಳಿಕೆ ಸಲ್ಲದು ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಸೂರ್ಯ ರಾಜ್ಯದ ಜನರಲ್ಲಿ ಬಹಿರಂಗ ಕ್ಷಮೆಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada