ಆಂಧ್ರದವರಿಗೆ ಭಾರೀ ಮೊತ್ತದ ‘ಟೆಂಡರ್​ ಗಿಫ್ಟ್​’ ಕೊಟ್ಟು ತಗಲಾಕೊಂಡ್ರಾ ಖಡಕ್ DC ರೋಹಿಣಿ?

  • TV9 Web Team
  • Published On - 12:23 PM, 1 Oct 2020
ಆಂಧ್ರದವರಿಗೆ ಭಾರೀ ಮೊತ್ತದ ‘ಟೆಂಡರ್​ ಗಿಫ್ಟ್​’ ಕೊಟ್ಟು ತಗಲಾಕೊಂಡ್ರಾ ಖಡಕ್ DC ರೋಹಿಣಿ?

ಮೈಸೂರು: ಖಡಕ್ ಆಧಿಕಾರಿ ಎಂದೇ ಖ್ಯಾತಿ ಗಳಿಸಿರುವ ರೋಹಿಣಿ ಸಿಂಧೂರಿ ದಾಸರಿ ಅವರ ವಿರುದ್ಧ ಭಾರೀ ಗೋಲ್​ಮಾಲ್ ಆರೋಪ ಕೇಳಿಬಂದಿದೆ. ಡಿಸಿ ಸಿಂಧೂರಿ ನೆರೆ ರಾಜ್ಯದವರಿಗೆ ಟೆಂಡರ್ ನೀಡಿದ್ದಾರೆ. ನಮ್ಮ ರಾಜ್ಯದವರನ್ನು ಬಿಟ್ಟು ಬೇರೆ ರಾಜ್ಯದವರಿಗೆ ಟೆಂಡರ್ ನೀಡಿದ್ದೇಕೆ ಎಂದು ಸುದ್ದಿಗೋಷ್ಠಿ ನಡೆಸಿದ JDS ಶಾಸಕ ಸಾ.ರಾ. ಮಹೇಶ್ ಪ್ರಶ್ನೆಮಾಡಿದ್ದಾರೆ.

ರೋಹಿಣಿ ಸಿಂಧೂರಿ ಮೈಸೂರು DC ಆಗುವುದಕ್ಕೂ ಮುನ್ನ ಮುಜರಾಯಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದರು. ಆ ಸಮಯದಲ್ಲಿ ಆಂಧ್ರದ ತಿರುಮಲದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ ಮತ್ತು ಮೂಲಸೌಕರ್ಯ ಕಲ್ಪಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು.

ಪ್ರಸ್ತಾವನೆಯಂತೆ 2020ರ ಜೂ. 30ರಂದು ಸರ್ಕಾರ ಆದೇಶ ಹೊರಡಿಸಿ 200 ಕೋಟಿ ರೂಪಾಯಿ ಕಾಮಗಾರಿಯ ನಿರ್ವಹಣೆಯನ್ನು TTDಗೆ ನೀಡಿದೆ. ಇದರಲ್ಲಿ ಆರ್ಕಿಟೆಕ್ಚರ್, ಲ್ಯಾಂಡ್‌ಸ್ಕೇಪಿಂಗ್, ಇಂಟೀರಿಯರ್ ವಿನ್ಯಾಸವನ್ನು ಮೇ. ಗಾಯತ್ರಿ & ನಮತಿ ಆರ್ಕಿಟೆಕ್ಟ್‌ ಎಂಬ ಸಂಸ್ಥೆಗೆ ನೀಡಲಾಗಿದೆ. ಇದಕ್ಕಾಗಿ 10 ಕೋಟಿ ರೂಪಾಯಿ ವಿನಾಯಿತಿ ಕೂಡ ನೀಡಲಾಗಿದೆ. ನಮ್ಮಲ್ಲಿ ಯಾರೂ ಆ ಕೆಲಸವನ್ನು ಮಾಡುವವರು ಇಲ್ವಾ? ಬೇರೆ ರಾಜ್ಯದವರಿಗೇಕೆ ಟೆಂಡರ್ ನೀಡಲಾಗಿದೆ ಎಂದು JDS ಶಾಸಕ ಸಾ.ರಾ. ಮಹೇಶ್ ಪ್ರಶ್ನಿಸಿದ್ದಾರೆ.

ಜೊತೆಗೆ ಭೂಮಿ‌ ನಮ್ಮದು, ಹಣ ನಮ್ಮದು. ಆದರೆ ಹಣ ಮಾತ್ರ ಬೇರೆ ರಾಜ್ಯದ ಸಂಸ್ಥೆಗೆ ಯಾಕೆ? ನಮ್ಮ ಲೋಕೋಪಯೋಗಿ ಕೆಲಸ ಮಾಡುತ್ತಿರಲಿಲ್ವಾ? ನಮ್ಮಲ್ಲಿ ಆರ್ಕಿಟೆಕ್ಟ್‌ಗಳು ಇರಲಿಲ್ವ? ಅಂತಾ ಖಾರವಾಗಿ ನೆರವಾಗಿ ಪ್ರಶ್ನಿಸಿದ್ದಾರೆ ಸಾ.ರಾ. ಮಹೇಶ್.

ರಾಜ್ಯದಲ್ಲಿನ ಸಾಕಷ್ಟು ಸ್ಮಾರಕಗಳನ್ನ ಗುರುತಿಸಲು ಆಗಿಲ್ಲ. ಕೇವಲ ಒಂದೇ ಜಾಗಕ್ಕೆ ಇಷ್ಟು ಹಣ ಕೊಟ್ಟಿದ್ದು ಯಾಕೆ? ಈ ವಿಚಾರವನ್ನು ಕೆಲವರು ಗಿಫ್ಟ್ ಎಂದು ಹೇಳುತ್ತಿದ್ದಾರೆ. ಇದಕ್ಕೆ DC ರೋಹಿಣಿ ಸಿಂಧೂರಿ ಉತ್ತರ ಕೊಡಬೇಕೆಂದು ಎಂದು ಸಾ.ರಾ. ಮಹೇಶ್ ಆಗ್ರಹಿಸಿದ್ದಾರೆ. ಈ ಮುಖಾಂತರ ರೋಹಿಣಿ ಸಿಂಧೂರಿ ವಿರುದ್ಧ ಬಹುಕೋಟಿ ಹಣ ದುರ್ಬಳಕೆಯ ಗಂಭೀರ ಆರೋಪವನ್ನು ಮಾಡಿದ್ದಾರೆ.