ಮೂರೇ ಟೀ ಗೆ ಕಂತೆ ಕಂತೆ ಹಣ! ಶಾಸಕ ಜಮೀರ್ ಹೆಗಲೇರಿತು ನೀತಿಸಂಹಿತೆ ಉಲ್ಲಂಘನೆಯ ಆರೋಪ

ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣಾ ಪ್ರಚಾರದಲ್ಲಿ ಇಂದು ‘ಕೈ’ ಶಾಸಕ ಜಮೀರ್ ಅಹ್ಮದ್ ಸಹ ಕಾಣಿಸಿಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಭರ್ಜರಿ ಮತಬೇಟೆ ನಡೆಸಿದರು. ಅಲ್ಪಸಂಖ್ಯಾತ ಸಮುದಾಯ ವಾಸವಿರುವ ಬೇಗಂ ಮೊಹಲ್ಲಾದಲ್ಲಿ ಮತಯಾಚನೆಗೆ ಮುಂದಾದರು. ಶಾಸಕ ಜಮೀರ್ ಹೆಗಲೇರಿತು ನೀತಿ ಸಂಹಿತೆ ಉಲ್ಲಂಘನೆ ಆರೋಪ.. ಈ ನಡುವೆ, ಪ್ರಚಾರದಿಂದ ಕೊಂಚ ಬ್ರೇಕ್​ ತೆಗೆದುಕೊಂಡ ಶಾಸಕ ತಮ್ಮ ಸಂಗಡಿಗರೊಂದಿಗೆ ಅಲ್ಲೇ ಇದ್ದ ಚಹಾ ಅಂಗಡಿಯೊಂದಕ್ಕೆ ಬಂದು ತಾವೇ ಟೀ ತಯಾರಿಸಿದರು. ಚಹಾ ಸವಿದ […]

ಮೂರೇ ಟೀ ಗೆ ಕಂತೆ ಕಂತೆ ಹಣ! ಶಾಸಕ ಜಮೀರ್ ಹೆಗಲೇರಿತು ನೀತಿಸಂಹಿತೆ ಉಲ್ಲಂಘನೆಯ ಆರೋಪ
Edited By: ಸಾಧು ಶ್ರೀನಾಥ್​

Updated on: Oct 31, 2020 | 5:33 PM

ತುಮಕೂರು: ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣಾ ಪ್ರಚಾರದಲ್ಲಿ ಇಂದು ‘ಕೈ’ ಶಾಸಕ ಜಮೀರ್ ಅಹ್ಮದ್ ಸಹ ಕಾಣಿಸಿಕೊಂಡರು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಪರ ಭರ್ಜರಿ ಮತಬೇಟೆ ನಡೆಸಿದರು. ಅಲ್ಪಸಂಖ್ಯಾತ ಸಮುದಾಯ ವಾಸವಿರುವ ಬೇಗಂ ಮೊಹಲ್ಲಾದಲ್ಲಿ ಮತಯಾಚನೆಗೆ ಮುಂದಾದರು.

ಶಾಸಕ ಜಮೀರ್ ಹೆಗಲೇರಿತು ನೀತಿ ಸಂಹಿತೆ ಉಲ್ಲಂಘನೆ ಆರೋಪ..
ಈ ನಡುವೆ, ಪ್ರಚಾರದಿಂದ ಕೊಂಚ ಬ್ರೇಕ್​ ತೆಗೆದುಕೊಂಡ ಶಾಸಕ ತಮ್ಮ ಸಂಗಡಿಗರೊಂದಿಗೆ ಅಲ್ಲೇ ಇದ್ದ ಚಹಾ ಅಂಗಡಿಯೊಂದಕ್ಕೆ ಬಂದು ತಾವೇ ಟೀ ತಯಾರಿಸಿದರು. ಚಹಾ ಸವಿದ ಬಳಿಕ ಅಂಗಡಿ ಮಾಲೀಕನಿಗೆ ಹಣ ನೀಡಲು ಮುಂದಾದರು. ಈ ವೇಳೆ ತಾವು ಕುಡಿದ ಮೂರು ಕಪ್​ ಟೀಗೆ ಹಣದ ಕಂತೆಯನ್ನೇ ಗಲ್ಲಾಪೆಟ್ಟಿಗೆಯಲ್ಲಿ ಇಟ್ಟರು.

ಇದನ್ನು ಕಂಡು ಕೆಲಹೊತ್ತು ಶಾಕ್ ಆಗಿದ್ದ​ ಅಂಗಡಿ ಮಾಲೀಕ ಬಳಿಕ ಶಾಸಕ ಮತ್ತು ಅವರ ಸಂಗಡಿಗರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಆದರೆ, ಅಂಗಡಿ ಮಾಲೀಕನಿಗೆ ದುಡ್ಡು ನೀಡಿದ್ದು ನೀತಿ ಸಂಹಿತೆಯ ಉಲ್ಲಂಘನೆ  ಎಂಬ ಆರೋಪ ಇದೀಗ ಜಮೀರ್ ಹೆಗಲೇರಿದೆ.

Published On - 5:31 pm, Sat, 31 October 20

KUSHAL V
Loading...
Unable to load recommendations.
Follow Us