ಭಾವನ 2ನೇ ಮದುವೆಯಿಂದ ಬೇಸತ್ತು.. ಕತ್ತು ಹಿಸುಕಿ ಆ ಮಹಿಳೆಯ ಕೊಲೆಗೈದ ಭಾವ ಮೈದ!
ಬೆಂಗಳೂರು: ನಗರದಲ್ಲಿ ಕತ್ತು ಹಿಸುಕಿ ಮಹಿಳೆಯ ಬರ್ಬರ ಕೊಲೆಗೈದಿರುವ ಘಟನೆ ಕೆ.ಆರ್. ಪುರ ಠಾಣಾ ವ್ಯಾಪ್ತಿಯ RTO ಕಚೇರಿಯ ಹಿಂಭಾಗದ ಮನೆಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶೈಲಶ್ರೀ ಎಂದು ಗುರುತಿಸಲಾಗಿದೆ. ಕೋಲಾರ ಮೂಲದ ಶ್ರೀಕಂಠ ಎಂಬುವವನಿಂದ ಕೃತ್ಯ ಎಸಗಲಾಗಿದೆ. 4 ವರ್ಷದ ಹಿಂದೆ ಶೈಲಶ್ರೀಯನ್ನು ಶ್ರೀಕಂಠನ ಭಾವ ಮದುವೆಯಾಗಿದ್ದ. ತನ್ನ ಅಕ್ಕನನ್ನು ಬಿಟ್ಟು ಭಾವ ಶೈಲಶ್ರೀಯನ್ನು ಎರಡನೇ ವಿವಾಹವಾಗಿರುವುದರಿಂದ ಬೇಸತ್ತ ಶ್ರೀಕಂಠ ಬೆಳಗ್ಗೆ ಮನೆಯಲ್ಲಿ ಯಾರೂ ಇರದಿದ್ದಾಗ ಶೈಲಶ್ರೀ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಸದ್ಯ, ಆರೋಪಿ ಶ್ರೀಕಂಠ, […]
ಬೆಂಗಳೂರು: ನಗರದಲ್ಲಿ ಕತ್ತು ಹಿಸುಕಿ ಮಹಿಳೆಯ ಬರ್ಬರ ಕೊಲೆಗೈದಿರುವ ಘಟನೆ ಕೆ.ಆರ್. ಪುರ ಠಾಣಾ ವ್ಯಾಪ್ತಿಯ RTO ಕಚೇರಿಯ ಹಿಂಭಾಗದ ಮನೆಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಶೈಲಶ್ರೀ ಎಂದು ಗುರುತಿಸಲಾಗಿದೆ. ಕೋಲಾರ ಮೂಲದ ಶ್ರೀಕಂಠ ಎಂಬುವವನಿಂದ ಕೃತ್ಯ ಎಸಗಲಾಗಿದೆ.
4 ವರ್ಷದ ಹಿಂದೆ ಶೈಲಶ್ರೀಯನ್ನು ಶ್ರೀಕಂಠನ ಭಾವ ಮದುವೆಯಾಗಿದ್ದ. ತನ್ನ ಅಕ್ಕನನ್ನು ಬಿಟ್ಟು ಭಾವ ಶೈಲಶ್ರೀಯನ್ನು ಎರಡನೇ ವಿವಾಹವಾಗಿರುವುದರಿಂದ ಬೇಸತ್ತ ಶ್ರೀಕಂಠ ಬೆಳಗ್ಗೆ ಮನೆಯಲ್ಲಿ ಯಾರೂ ಇರದಿದ್ದಾಗ ಶೈಲಶ್ರೀ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ಸದ್ಯ, ಆರೋಪಿ ಶ್ರೀಕಂಠ, ಕೆ.ಆರ್. ಪುರಂ ಪೊಲೀಸರ ವಶದಲ್ಲಿದ್ದಾನೆ.
Published On - 4:00 pm, Sat, 31 October 20