Modi Girlfriend Do: ಮೋದಿ ಬಳಿ ಗರ್ಲ್​​ಫ್ರೆಂಡ್​ ನೀಡಿ ಎಂದು ನೆಟ್ಟಿಗರು ಕೇಳ್ತಿರೋದೇಕೆ ಗೊತ್ತಾ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2021 | 9:27 PM

ಇಂದು ಟ್ವಿಟ್ಟರ್​ನಲ್ಲಿ Modi Girlfriend Do ಎನ್ನುವ ಹ್ಯಾಶ್​ಟ್ಯಾಗ್​ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಇದು ವೈರಲ್​ ಆಗ್ತಿರೋದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Modi Girlfriend Do: ಮೋದಿ ಬಳಿ ಗರ್ಲ್​​ಫ್ರೆಂಡ್​ ನೀಡಿ ಎಂದು ನೆಟ್ಟಿಗರು ಕೇಳ್ತಿರೋದೇಕೆ ಗೊತ್ತಾ?
ನರೇಂದ್ರ ಮೋದಿ
Follow us on

ಟ್ವಿಟ್ಟರ್​ನಲ್ಲಿ ಯಾವ ವಿಚಾರ ಟ್ರೆಂಡ್​ ಆಗುತ್ತದೆ ಎಂದು ಹೇಳುವುದು ಕಷ್ಟ. ಸಣ್ಣಸಣ್ಣ ವಿಚಾರಕ್ಕೂ ಇಲ್ಲಿ ಟ್ರೋಲ್​ ಮಾಡಲಾಗುತ್ತದೆ. ರಾಜಕೀಯ ನಾಯಕರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ.. ಸೂಜಿಯಿಂದ ಹಿಡಿದು ಉಪಗ್ರಹದವರೆಗಿನ ಹಲವು ವಿಷಯಗಳು ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆಗಿವೆ. ಅದೇ ರೀತಿ ಇಂದು  #modi_girlfriend_do (ಮೋದಿ ಗರ್ಲ್​ಫ್ರೆಂಡ್​ ನೀಡಿ) ಎನ್ನುವ ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ. ಅಷ್ಟಕ್ಕೂ ಇದು ಟ್ರೆಂಡ್​ ಆಗೋಕೆ ಕಾರಣವೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. 

ಪೆಟ್ರೋಲ್​ ಡೀಸೆಲ್​ ದರ ಒಂದೇ ಸಮನೆ ಏರುತ್ತಿದೆ. ಇದರ ಪರಿಣಾಮ ನೇರವಾಗಿ ಸಾಮಾನ್ಯ ಜನರ ಮೇಲೆ ಆಗಿದೆ. ಪೆಟ್ರೋಲ್​-ಡೀಸೆಲ್​ ದರ ಹೆಚ್ಚಾಗುತ್ತಿರುವುದಕ್ಕೆ ನಿತ್ಯ ಬಳಕೆ ವಸ್ತುಗಳ ಬೆಲೆಯೂ ಜಾಸ್ತಿ ಆಗಿದೆ. ಕೃಷಿ ಕಾಯ್ದೆ ವಿರೋಧಿಸಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಇದರ ಜತೆಗೆ ನಿರುದ್ಯೋಗ ಸಮಸ್ಯೆ ಕೂಡ ದೇಶವನ್ನು ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.

ಇದೇ ವಿಚಾರವನ್ನು ಇಟ್ಟುಕೊಂಡು ಮುಂಜಾನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರಿಗರು ಪ್ರಶ್ನೆ ಮಾಡುತ್ತಿದ್ದರು. ಇದಾದ ಬೆನ್ನಲ್ಲೇ ಹಾಸ್ಯಾಸ್ಪದವಾಗಿ ಮೋದಿ ವಿರುದ್ಧ ಹರಿಹಾಯ್ದಿದ್ದ ನೆಟ್ಟಿಗರು, ಉದ್ಯೋಗವನ್ನಂತೂ ನೀಡಿಲ್ಲ, ಗರ್ಲ್​​ಫ್ರೆಂಡ್​ ಆದರೂ ನೀಡಿ ಎನ್ನುವ ಅರ್ಥದಲ್ಲಿ modi_girlfriend_do ಎನ್ನುತ್ತಿದ್ದಾರೆ.

ವೈರಲ್​ ಆದ ಟ್ವೀಟ್​ಗಳು