ರಸ್ತೆ ಬದಿ ಮಗುಗೆ ಮೂತ್ರ ಮಾಡಿಸ್ತಿದ್ದ ತಾಯಿಗೆ ಟ್ರಾಕ್ಟರ್ ಡಿಕ್ಕಿ, ತಾಯಿ ದುರ್ಮರಣ

| Updated By: ಆಯೇಷಾ ಬಾನು

Updated on: Jun 15, 2020 | 11:04 AM

ಬೆಂಗಳೂರು ಗ್ರಾಮಾಂತರ: ಮಗುವಿಗೆ ಮೂತ್ರವಿಸರ್ಜನೆ ಮಾಡಿಸಲು ರಸ್ತೆಬದಿಯಲ್ಲಿ ನಿಂತಿದ್ದ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿದು ಸಾವನ್ನಪಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಬಳಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರದ ನಿವಾಸಿಯಾಗಿರುವ 26 ವರ್ಷದ ಉಮಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ತನ್ನ ಪತಿ ನಾಗೇಶ್ ಹಾಗೂ ಮಗುವಿನೊಂದಿಗೆ ಬೈಕ್​ನಲ್ಲಿ ದೊಡ್ಡಬಳ್ಳಾಪುರದಿಂದ ಅರಳುಮಲ್ಲಿಗೆಯ ಕಡೆಗೆ ಬರುತ್ತಿದ್ದಾಗ ಮಗುವಿಗೆ ಮೂತ್ರವಿಸರ್ಜನೆ ಮಾಡಿಸಲು ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದ್ದರು. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಟ್ರ್ಯಾಕ್ಟರ್ […]

ರಸ್ತೆ ಬದಿ ಮಗುಗೆ ಮೂತ್ರ ಮಾಡಿಸ್ತಿದ್ದ ತಾಯಿಗೆ ಟ್ರಾಕ್ಟರ್ ಡಿಕ್ಕಿ, ತಾಯಿ ದುರ್ಮರಣ
Follow us on

ಬೆಂಗಳೂರು ಗ್ರಾಮಾಂತರ: ಮಗುವಿಗೆ ಮೂತ್ರವಿಸರ್ಜನೆ ಮಾಡಿಸಲು ರಸ್ತೆಬದಿಯಲ್ಲಿ ನಿಂತಿದ್ದ ಮಹಿಳೆ ಮೇಲೆ ಟ್ರ್ಯಾಕ್ಟರ್ ಹರಿದು ಸಾವನ್ನಪಿರೋ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಬಳಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರದ ನಿವಾಸಿಯಾಗಿರುವ 26 ವರ್ಷದ ಉಮಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ತನ್ನ ಪತಿ ನಾಗೇಶ್ ಹಾಗೂ ಮಗುವಿನೊಂದಿಗೆ ಬೈಕ್​ನಲ್ಲಿ ದೊಡ್ಡಬಳ್ಳಾಪುರದಿಂದ ಅರಳುಮಲ್ಲಿಗೆಯ ಕಡೆಗೆ ಬರುತ್ತಿದ್ದಾಗ ಮಗುವಿಗೆ ಮೂತ್ರವಿಸರ್ಜನೆ ಮಾಡಿಸಲು ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದ್ದರು. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ಟ್ರ್ಯಾಕ್ಟರ್ ಏಕಾಏಕಿ ನುಗ್ಗಿ ಬಂದು ತಾಯಿಯ ಮೇಲೆ ಹರಿದುಹೋಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಉಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.  ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Published On - 4:30 pm, Sun, 14 June 20