ಕೋವಿಡ್ 19 ಟೆಸ್ಟ್‌ನಲ್ಲಿ CCB ಪಾಸ್, ನಿಟ್ಟುಸಿರು ಬಿಟ್ಟ ಪೊಲೀಸ್ ಕುಟುಂಬಸ್ಥರು
ಬೆಂಗಳೂರು: ಬಂಧಿತ ಆರೋಪಿಯೊಬ್ಪ ಕೊರೊನಾ ಪೀಡಿತ ಅನ್ನೋದು ಗೊತ್ತಾಗ್ತಿದ್ದಂತೆ ಬೆಂಗಳೂರಿನ ಸಿಸಿಬಿ ಪೊಲೀಸರ ಜಂಘಾಬಲವೇ ಉಡುಗಿ ಹೋಗಿತ್ತು. ಓಲಾ ಕಂಪನಿಗೆ ವಂಚಿಸಿದ್ದ ಪ್ರಕರಣದಡಿ ಬಂಧಿಸಿದ್ದ ಕೋವಿಡ್ ಪೇಶೆಂಟ್ ಆರೋಪಿಯನ್ನ ಆಸ್ಪತ್ರೆಗೆ ಸಾಗಿಸಿದ ನಂತರ, ಇಡೀ ಸಿಸಿಬಿ ಕಚೇರಿಯನ್ನೇ ಲಾಕ್‌ಡೌನ್ ಮಾಡಿ ಸಾನಿಟೈಸ್ ಕೂಡಾ ಮಾಡಿದ್ರು. ಇಷ್ಟೇ ಅಲ್ಲ ಸಿಸಿಬಿಯಲ್ಲಿದ್ದ ಎಲ್ಲ ಸಿಬ್ಬಂದಿಗೆ ಮಲ್ಲೇಶ್ವರದಲ್ಲಿರೋ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟ್ ಕೂಡಾ ಮಾಡಿಸಿದ್ರು. ನಂತರ ಅವರನ್ನ ಕ್ವಾರಂಟೈನ್ ಕೂಡಾ ಮಾಡಿದರು. ಇತ್ತ ಸಿಸಿಬಿ ಪೊಲೀಸರು ಮತ್ತು ಅವರ […]
ಬೆಂಗಳೂರು: ಬಂಧಿತ ಆರೋಪಿಯೊಬ್ಪ ಕೊರೊನಾ ಪೀಡಿತ ಅನ್ನೋದು ಗೊತ್ತಾಗ್ತಿದ್ದಂತೆ ಬೆಂಗಳೂರಿನ ಸಿಸಿಬಿ ಪೊಲೀಸರ ಜಂಘಾಬಲವೇ ಉಡುಗಿ ಹೋಗಿತ್ತು. ಓಲಾ ಕಂಪನಿಗೆ ವಂಚಿಸಿದ್ದ ಪ್ರಕರಣದಡಿ ಬಂಧಿಸಿದ್ದ ಕೋವಿಡ್ ಪೇಶೆಂಟ್ ಆರೋಪಿಯನ್ನ ಆಸ್ಪತ್ರೆಗೆ ಸಾಗಿಸಿದ ನಂತರ, ಇಡೀ ಸಿಸಿಬಿ ಕಚೇರಿಯನ್ನೇ ಲಾಕ್‌ಡೌನ್ ಮಾಡಿ ಸಾನಿಟೈಸ್ ಕೂಡಾ ಮಾಡಿದ್ರು.
ಇಷ್ಟೇ ಅಲ್ಲ ಸಿಸಿಬಿಯಲ್ಲಿದ್ದ ಎಲ್ಲ ಸಿಬ್ಬಂದಿಗೆ ಮಲ್ಲೇಶ್ವರದಲ್ಲಿರೋ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟ್ ಕೂಡಾ ಮಾಡಿಸಿದ್ರು. ನಂತರ ಅವರನ್ನ ಕ್ವಾರಂಟೈನ್ ಕೂಡಾ ಮಾಡಿದರು. ಇತ್ತ ಸಿಸಿಬಿ ಪೊಲೀಸರು ಮತ್ತು ಅವರ ಕುಟುಂಬಗಳಲ್ಲಿ ಆತಂಕ ಮನೆ ಮಾಡಿತ್ತು.
ಬಂಧಿತ ಆರೋಪಿಗೆ ಸೋಂಕು: CCB ಕಚೇರಿ ಸೀಲ್‌ಡೌನ್, ಪೊಲೀಸರಿಗೂ ಕ್ವಾರಂಟೈನ್!
ಈಗ ಆ ಆತಂಕಕ್ಕೆ ತೆರೆ ಬಿದ್ದಿದೆ. ಸಿಸಿಬಿ ಮೂಲಗಳ ಪ್ರಕಾರ ಟೆಸ್ಟ್ ಮಾಡಿಸಿಕೊಂಡ ಯಾವುದೇ ಪೊಲೀಸ್ ಸಿಬ್ಬಂದಿಯ ಟೆಸ್ಟ್ ಪಾಸಿಟಿವ್ ಬಂದಿಲ್ಲವಂತೆ. ಹೀಗಾಗಿ ಬೆಂಗಳೂರು ಪೊಲೀಸ್‌ರಲ್ಲಿ ಈಗ ಮತ್ತೆ ಚೈತನ್ಯ ಬಂದಿದೆ. ಆದರೂ ಮುಂದಿನ ದಿನಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಅನ್ನೋ ಲೆಕ್ಕಾಚಾರದಲ್ಲಿ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸಿಸಿಬಿ ಹೆಡ್ ಕಾನ್‌ಸ್ಟೇಬಲ್‌ಗೆ ಕೊರೊನಾ ಸೋಂಕು ದೃಢ ಈ ಮಧ್ಯೆ, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡ ಪೊಲೀಸರ ಅದೃಷ್ಟ ಇನ್ನೊಂದು ಪ್ರಕರಣದ ಪೊಲೀಸ್‌ಗೆ ಇಲ್ಲ ಅನಿಸುತ್ತೆ. ಯಾಕಂದ್ರೆ ಬೌರಿಂಗ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ಸಿಸಿಬಿಯ ಹೆಡ್‌ಕಾನ್‌ಸ್ಟೇಬಲ್‌ಗೆ ಪಾಸಿಟಿವ್ ಬಂದಿದೆ. ಹೀಗಾಗಿ ಸಿಸಿಬಿಯಲ್ಲಿ ಮಧ್ಯಾಹ್ನವಿದ್ದ ಖುಷಿ ಸಂಜೆಗಿಲ್ಲ ಎನ್ನುವಂತಾಗಿದೆ.
Published On - 5:53 pm, Sun, 14 June 20