ಪುಟ್ಟ ಕಂದನ ಎದುರೇ ತಾಯಿಯ ಹತ್ಯೆ ಮಾಡಿ, ಚಿನ್ನಾಭರಣ ದೋಚಿದ ಕಟುಕರು
ಚಿಕ್ಕಮಗಳೂರು: ಆರು ತಿಂಗಳ ಪುಟ್ಟ ಕಂದಮ್ಮನ ಎದುರೇ ತಾಯಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಕಡೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ದಂತ ವೈದ್ಯ ರೇವಂತ್ ಪತ್ನಿ ಕವಿತಾ(31) ಕೊಲೆಯಾದ ದುರ್ದೈವಿ. 6 ತಿಂಗಳ ಮಗು ಎದುರೇ ಕತ್ತುಸೀಳಿ ಬಾಣಂತಿಯನ್ನು ಕೊಲೆಗೈದಿದ್ದಾರೆ. ಹತ್ಯೆ ಮಾಡಿದ ಬಳಿಕ ಕವಿತಾ ಬಳಿಯಿದ್ದ ಚಿನ್ನಾಭರಣ ದೋಚಿ ಕಟುಕರು ಪರಾರಿಯಾಗಿದ್ದಾರೆ. ಕಡೂರು ಪಟ್ಟಣದ ಲಕ್ಷ್ಮೀಶ ನಗರಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ […]
ಚಿಕ್ಕಮಗಳೂರು: ಆರು ತಿಂಗಳ ಪುಟ್ಟ ಕಂದಮ್ಮನ ಎದುರೇ ತಾಯಿಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಕಡೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ದಂತ ವೈದ್ಯ ರೇವಂತ್ ಪತ್ನಿ ಕವಿತಾ(31) ಕೊಲೆಯಾದ ದುರ್ದೈವಿ.
6 ತಿಂಗಳ ಮಗು ಎದುರೇ ಕತ್ತುಸೀಳಿ ಬಾಣಂತಿಯನ್ನು ಕೊಲೆಗೈದಿದ್ದಾರೆ. ಹತ್ಯೆ ಮಾಡಿದ ಬಳಿಕ ಕವಿತಾ ಬಳಿಯಿದ್ದ ಚಿನ್ನಾಭರಣ ದೋಚಿ ಕಟುಕರು ಪರಾರಿಯಾಗಿದ್ದಾರೆ. ಕಡೂರು ಪಟ್ಟಣದ ಲಕ್ಷ್ಮೀಶ ನಗರಕ್ಕೆ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Published On - 4:05 pm, Tue, 18 February 20